Back To Top

ಎದೆಗೂಡ ತಟ್ಟಿ ಹೋದ ಹುಡುಗಿ ಮನದಾಚೆ ಮಾಯವಾದಳು | ದರ್ಶನ್ ಕುಮಾರ್

ಎದೆಗೂಡ ತಟ್ಟಿ ಹೋದ ಹುಡುಗಿ ಮನದಾಚೆ ಮಾಯವಾದಳು | ದರ್ಶನ್ ಕುಮಾರ್

ಅದು ಮಳೆಗಾಲದ ಸಂಜೆ. ಆ ದಿನ ಮುಂಜಾನೆಯಿಂದಲೇ ಮಳೆ ಹನಿಗಳ ಸದ್ದು ಮನೆ ಸುತ್ತಲೂ ನೆಟ್ಟಿದ್ದ ಹೂ ಗಿಡಗಳ ಮೇಲೆ ಬಿದ್ದು ಇನ್ನಷ್ಟು ಜೋರಾಗಿ ಕೇಳ್ತಾ ಇತ್ತು. ಮಧ್ಯಾಹ್ನದಿಂದಲೇ ಪುಸ್ತಕ ಬದಿಗಿಟ್ಟು ಇಯರ್‌ ಫೋನ್‌ ಕಿವಿಗೆ ಹಾಕ್ಕೊಂಡು ನೆಲದಲ್ಲಿ ಕೂತು ಕಣ್ಣು ಮುಚ್ಚಿ ಗೋಡೆಗೆ ಒರಗಿ ‘ಈ ಸಂಜೆ ಯಾಕೋ…ʼ ಹಾಡನ್ನ ಕೇಳುತ್ತಿದ್ದೆ. ಕೇಳುತ್ತಿದ್ದ ಹಾಡು
ಕನ್ನಡ ಯಾವುದು, ಸರಿ ಕನ್ನಡದ ಯಾವುದು | ಶಿಲ್ಪ. ಬಿ

ಕನ್ನಡ ಯಾವುದು, ಸರಿ ಕನ್ನಡದ ಯಾವುದು | ಶಿಲ್ಪ. ಬಿ

ಅಮ್ಮ– ಶಿವು….ಬಾ ಇಲ್ಲಿ ಶಿವು– ಏನಮ್ಮ ಅಮ್ಮ– ಶಿವು ಸ್ವಲ್ಪ ಅಂಗಡಿ ಹತ್ತಿರ ವ್ಯಾಪಾರ ನೋಡ್ಕೊಳ್ಳೊ… ನಾನು ಅಪ್ಪನಿಗೆ ತಿಂಡಿ ಮಾಡಿಟ್ಟು ಬೇಗ ಬರ್ತೀನಿ.. ಗ್ರಾಹಕ– ಹೆಂಗೆ ಟೊಮಾಟೊ. ಶಿವು– ಹಾ…. ಅರ್ಥ ಆಗಲಿಲ್ಲ.. ಗ್ರಾಹಕ– ಟೊಮಾಟೊ ಹೆಂಗಪ್ಪ ಶಿವು– ಆ.. ಟೊಮಾಟೊ ನಾ.. ಹೂ.. ಚೆನ್ನಾಗಿದೆ. ಬೆಳಗ್ಗೆನೆ ಅಪ್ಪ ಮಾರ್ಕೆಟಿಂದ ಫ್ರೆಷಾಗೆ ತಂದದ್ದು. ಗ್ರಾಹಕ–
ನವೆಂಬರ್‌ ಒಂದು ಒಂದೇ ನನ್ನ ದಿನ | ಸಂತೋಷ್‌ ಎನ್‌. ಜೋಶಿ

ನವೆಂಬರ್‌ ಒಂದು ಒಂದೇ ನನ್ನ ದಿನ | ಸಂತೋಷ್‌ ಎನ್‌. ಜೋಶಿ

ಕನ್ನಡ ರಾಜ್ಯೋತ್ಸವದಂದು ಬಂತು ಗೆಳೆಯನ ಕರೆ. ಅರ್ಥಪೂರ್ಣವಾಗಿ ನಾಡಹಬ್ಬವ ಆಚರಿಸೋಣ ಮಕ್ಕಳ ಅನಾಥಾಶ್ರಮಕ್ಕೆ ಬಾ ಎಂದು. ಕೆಲಸವಿಲ್ಲದ ಕಾರಣ ನಾನೂ ಇಪ್ಪಿಕೊಂಡೆ. ಬಣ್ಣ ಬಣ್ಣದ ಪೇಪರ್‌, ಹೂಗುಚ್ಚ, ಹಸಿರು ತೋರಣಗಳಿಂದ ರಂಗೇರಿತ್ತು ಆಶ್ರಮ. ಧ್ವಜಾರೋಹಣಕ್ಕೆ ಸಿದ್ಧವಾಗಿಯೇ ನಿಂತಿತ್ತು ಧ್ವಜಸ್ಥಂಬ! “ಏ ಅಲ್ಲೇನೋ ನೋಡ್ತಿದ್ದೀ ಬೇಗ ಹೋಗು ಮಕ್ಕಳನೆಲ್ಲಾ ಹೊರಗೆ ಕರೆದು ಬಾ” ಎಂದ ಗೆಳೆಯ. ಹುಂ
ಕೊಡೆಯ ಮರೆವಿಗೆ ಅಜ್ಜನೇ ಕಾರಣ | ಶ್ವೇತಾ ಶೆಟ್ಟಿ

ಕೊಡೆಯ ಮರೆವಿಗೆ ಅಜ್ಜನೇ ಕಾರಣ | ಶ್ವೇತಾ ಶೆಟ್ಟಿ

“ನೋಡು ರಸ್ತೆ ದಾಟುವಾಗ ಜಾಗ್ರತೆಯಾಗಿ ಇರಬೇಕು. ಬಸ್ಸು ಬರೋಕ್ಕೆ ಹತ್ತು ನಿಮಿಷ ಮುಂಚೆ ಬಸ್ ಸ್ಟ್ಯಾಂಡ್‌ನಲ್ಲಿ ಇರಬೇಕು. ಆ ಹೈಸ್ಕೂಲ್ ಅಕ್ಕಂದಿರಿದಾರಲ್ಲಾ ಅವರ ಜೊತೇನೆ ಹೋಗು, ಗಡಿಬಿಡಿ ಮಾಡ್ಬೇಡ. ಸಂಜೆನೂ ಅಷ್ಟೇ ಮರೆತು ಅಕ್ಕನ್ನ ಹುಡುಕುತ್ತಾ ನಿಲ್ಲಬೇಡ, ಶಾಲೆ ಬಿಟ್ಟ ತಕ್ಷಣ ಬೇರೆ ಮಕ್ಕಳ ಜೊತೆ ರಸ್ತೆ ದಾಟಿ ಬಿಡು. ಮತ್ತೆ ನಮ್ಮ ಮನೆ ಕಡೆ
ಪರಿಸರದ ಕತೆಯ ‘ಮಾರ’ನ ಹುಡುಕಿ ಅಜ್ಜಿಯ ಪಯಣ | ಶಿಲ್ಪ. ಬಿ

ಪರಿಸರದ ಕತೆಯ ‘ಮಾರ’ನ ಹುಡುಕಿ ಅಜ್ಜಿಯ ಪಯಣ | ಶಿಲ್ಪ. ಬಿ

ಜೇನುಗೂಡಿನ ದಂಬಿಗಳಂತೆ ಝೇಂಕಾರಿಸುತ್ತಿದ್ದ ಬಸ್ಸಿನಲ್ಲಿ ಒಂದು ಕ್ಷಣ ಮೌನವು ಆವರಿಸಿತ್ತು. ಬಸ್ಸಿನಲ್ಲಿದ್ದ ಎಲ್ಲರ ಮುಖಗಳು ಆಶ್ಚರ್ಯದಲ್ಲಿ ಹಿಂದಿರುಗಿ ನೋಡುತ್ತಿದ್ದವು. ಏಕೆ ಎನ್ನುತ್ತೀರಾ..? ಯಾರೋ ಒಬ್ಬರು ಅಜ್ಜಿ ಪುಸ್ತಕವನ್ನು ಹಿಡಿದ ಜೋರಾಗಿ ಕಿಲ ಕಿಲವೆಂದು ನಗುತ್ತಿದ್ದರು.. ಹೂ..! ಅವರೇ ನಮ್ಮ ಅಜ್ಜಿ, ಕೆಂಪಮ್ಮ ಅಜ್ಜಿ. ಕೆಂಪಮ್ಮ ಅಜ್ಜಿಗೆ ಸರಿಸುಮಾರು 80ರ ಪ್ರಾಯ. ಕೆಂಪಮ್ಮಜಿ ಎಂದರೆ ಬೆಳಗಾನೆ ಎದ್ದು
ಕಾಗೆ, ಕೋಗಿಲೆಯ ಇನಿ ದನಿಯ ಸಂವಾದ | ಶಿಲ್ಪ. ಬಿ

ಕಾಗೆ, ಕೋಗಿಲೆಯ ಇನಿ ದನಿಯ ಸಂವಾದ | ಶಿಲ್ಪ. ಬಿ

ಊರೆಲ್ಲ ಸುತ್ತಾಡಿ ಸುತ್ತಾಡಿ ಆಯಾಸಗೊಂಡ ಕಾಗೆ ವಿಶ್ರಾಂತಿ ಪಡೆಯಲೆಂದು ಒಂದು ಮರದ ಮೇಲೆ ಹಾರಿ ಹೋಗಿ ಕುಳಿತುಕೊಳ್ತು. ಮಗ್ಗುಲಲ್ಲೆ ಕುಳಿತಿದ್ದ ಕೋಗಿಲೆಯನ್ನು ಕಂಡು ಸಂತೋಷಗೊಂಡ ಕಾಗೆ “ಓಹೋ….! ಕೋಗಿಲೆಗೆ ನಮಸ್ಕಾರಗಳು. ಏನು ಕೂ.. ಕೂ ಎಂದು ಹಾಡುವ ನೀನು, ಒಂಟಿಯಾಗಿ ಇಲ್ಲಿ ಮೌನವಾಗಿ ಕುಳಿತಿರುವೆ ಏನು ಸಮಾಚಾರ?” ಎಂದು ಕೇಳಿತು. ಕೋಗಿಲೆ : ಅಯ್ಯೋ…! ಏನು