April 12, 2024
ವಜ್ರದ ಉಂಗುರದ ಪವಾಡ | ಸಿಂಚನ ಜೈನ್. ಮುಟ್ಟದ ಬಸದಿ
ಒಂದು ಊರಿನಲ್ಲಿ ಒಬ್ಬ ಶ್ರೀಮಂತ ಇದ್ದ, ನೂರಾರು ಎಕರೆ ಹೊಲ, ಗದ್ದೆ, ತೋಟ, ಐದಾರು ಕಾರ್ಖಾನೆ ಹೀಗೆ ಹರಡಿತ್ತು ಅವನ ಸಾಮ್ರಾಜ್ಯ. ಬಡತನದಿಂದ ಪರಿಶ್ರಮವಹಿಸಿ ಜೀವನದಲ್ಲಿ ಈ ಸ್ಥಿತಿ ತಲುಪಿದವ. ಬೆವರಿನ ಬೆಲೆ ಚೆನ್ನಾಗಿ ಬಲ್ಲವ. ಖುದ್ದು ತನ್ನ ವಾಹನದಲ್ಲಿ ತೆರಳಿ ಎಲ್ಲವನ್ನು ಉಸ್ತುವಾರಿ ನೋಡಿಕೊಳ್ಳುವವ, ವರಮಾನ ಚೆನ್ನಾಗಿಯೇ ಇತ್ತು. ಆ ವ್ಯಕ್ತಿಗೆ ಒಬ್ಬನೇ ಮಗ.