April 18, 2024
ಒಂಟಿತನವೆಂಬುದು ಶಾಪವಾದರೆ ದಿವ್ಯ ಏಕಾಂತವೇ ವರ | ಶಶಿಸ್ಕಾರ ನೇರಲಗುಡ್ಡ
ಸ್ಪ್ಲಿಟ್ಸ್ ಆಫ್ ಸೆಕೆಂಡ್ಸ್ ನಲ್ಲಿ ಕೋಟ್ಯಂತರ ಕಣಗಳ ವಿರುದ್ಧ ಬಡಿದಾಡಿ, ತಾಯಿಯ ಗರ್ಭದಲ್ಲಿ ಸಿಂಹದ ಗುಹೆ ಥರ ಒಂಬತ್ತು ತಿಂಗಳು ಜೀವಿಸಿ, ಅವಿಚ್ಛಿನ್ನ ಗಳಿಗೆಯಲ್ಲಿ ಈ ಭೂಮಿಗೆ ಪಾದ ಸ್ಪರ್ಶಿಸುತ್ತೇವೆ. ಹೀಗೆ ಹುಟ್ಟಿದ ನಾವೆಲ್ಲರು ಬಾಲ್ಯದಲ್ಲಿ ಹೊರ ಲೋಕದ ಪರಿವಿಲ್ಲದೆ, ನಮ್ಮದೇ ಸುತ್ತಲಿನ ಪುಟ್ಟ ಪ್ರಪಂಚ ನಿರ್ಮಿಸಿಕೊಂಡು, ರೆಕ್ಕೆ ಕಟ್ಟಿ ನಭಕ್ಕೆ ಹಾರುತ್ತಾ ತುಂಬು ಯೌವನದತ್ತ