January 12, 2024
ಅಹಂಭಾವವನ್ನು ಸೋಲಿಸಿದ ಮಾನವೀಯತೆಯ ಕಥೆ ‘ಪಾರ್ಕಿಂಗ್’ | ಅನುರಾಗ್ ಗೌಡ
ಅದೊಂದು ಎರಡು ಪೋರ್ಶನ್ ಇರೋ ಬಾಡಿಗೆ ಮನೆ. ಗ್ರೌಂಡ್ ಫ್ಲೋರ್‌ನಲ್ಲಿ ಇಳಂಪರೀದಿ (ಎಮ್.ಎಸ್. ಭಾಸ್ಕರ್) ಎಂಬ ಸುಮಾರು 57 – 58 ವರ್ಷದ ನಿಷ್ಟಾವಂತ ಸರ್ಕಾರಿ ಅಧಿಕಾರಿ, ಆದರೂ ಕಿರಿಕಿರಿ ಮನಸ್ಥಿತಿಯುಳ್ಳ ವ್ಯಕ್ತಿ, ತನ್ನ ಕುಟುಂಬದೊಂದಿಗೆ ಸುಮಾರು ಹತ್ತು ವರ್ಷದಿಂದ ನೆಲೆಸಿರುತ್ತಾರೆ. ಆತನ ಹೆಸರು ಈಶ್ವರ್, ಐಟಿ ಕಂಪನಿಯ ನೌಕರ. ಆತನ ಪತ್ನಿ ಆರು ತಿಂಗಳ