January 16, 2024
ಜುಗಾರಿ ಕ್ರಾಸ್‌ನ ಗುಂಗಿನಲ್ಲಿ ಕೈ ತಪ್ಪಿದ ಜಂಗಮವಾಣಿ | ಚಿತ್ತ ಸಾಗರ್
ಬಸ್ಸಿನ ಕಂಡಕ್ಟರ್ “ಕಿಟಕಿ ಮುಚ್ರಿ” ಎಂದು ಗದರಿ ಎಚ್ಚರಗೊಳಿಸಿದರು. ಆಗ ನನಗೆ ನನ್ನ ಕಲ್ಪನಾ ಶಕ್ತಿಯಿಂದ ಸೃಷ್ಟಿಸಿ ಕೊಂಡಿದ್ದ ಲೋಕದಿಂದ ದಢಾರನೆ ವಾಸ್ತವಕ್ಕೆ ಬಂದಂತಾಯಿತು. ಎಚ್ಚರಗೋಳಿಸಲು ಬೇರೆಯವರಂತೆ ನಾನೇನು ನಿದ್ರೆಯಲ್ಲಿ ನಿರತನಾಗಿರಲಿಲ್ಲ. ಬದಲಿಗೆ ತೇಜಸ್ವಿಯವರ ಜುಗಾರಿ ಕ್ರಾಸ್ಸಿನ ಕವಲುದಾರಿಯಲ್ಲಿ ಕಳೆದುಹೋಗಿದ್ದೆ. ಹೊರಗೆ ಸುರಿಯುತ್ತಿದ್ದ ಮಳೆಯ ಎರಚಲಿನಿಂದಾಗಿ ಬಸ್ಸಿನ ಸೀಟ್‌ಗಳು ಹಾಳಾಗುವುದೆಂದು ಊಹಿಸಿ ಕಂಡಕ್ಟರ್ ಆ ರೀತಿ