
Poem : ಮುಟ್ಟು | ಸಿದ್ದಾರ್ಥ ಹುದ್ದಾರ
ಮುಟ್ಟು ಬಂದಿತು ನನಗಿಂದು ಮುಟ್ಟು
ನನ್ನ ದೇಹದ ಒಳಗಾಗಿತ್ತು ಈ ಮುಟ್ಟು
ದೇವರನ್ನು ಮುಟ್ಟದಂತೆ ದೀಪವನ್ನು ಹಚ್ಚದಂತೆ
ಶುಭ ಕಾರ್ಯದಲ್ಲಿ ಬಾಗಿಯಾಗದಂತೆ
ಮುಟ್ಟು ಮಾಡಿತು ನನ್ನ ಹೊರ ಹೋಗದಂತೆ
ಮುಟ್ಟು ಹುಟ್ಟುವಿಗೆ ಕಾರಣವಾಗಿ
ಹುಟ್ಟಿದವನು ಪವಿತ್ರನಾದರೆ
ಮುಟ್ಟಾದವಳು ಹೇಗೆ ಮುಡಿಚಟ್ಟಾದಳು
ಮನದ ಕೆಟ್ಟ ಹೊಟ್ಟು
ಸಂಪ್ರದಾಯದ ಹುಟ್ಟು
ಅವಳನ್ನು ಮಾಡಿಸಿತು
ಮುಟ್ಟದಂತೆ ಈ ಮುಟ್ಟು…
– ಸಿದ್ದಾರ್ಥ ಹುದ್ದಾರ
ಪ್ರಥಮ ವರ್ಷದ ವಿದ್ಯಾರ್ಥಿ
ಬೆಂಗಳೂರು ಕಾಲೇಜ್ ಆಫ್ ಎಜುಕೇಷನ್ ಹಿಲಲಿಗೆ ಗ್ರಾಮ, ಚಂದಾಪುರ ಆನೇಕಲ್ ತಾಲ್ಲೂಕು.