Back To Top

 ಸಂವಿಧಾನಕ್ಕೂ ಒಂದು ಐತಿಹ್ಯ ಇದೆ | ಸಂತೋಷ್ ಇರಕಸಂದ್ರ

ಸಂವಿಧಾನಕ್ಕೂ ಒಂದು ಐತಿಹ್ಯ ಇದೆ | ಸಂತೋಷ್ ಇರಕಸಂದ್ರ

ಸಂವಿಧಾನ ಎಂಬುದು ನೆನ್ನೆ ಮೊನ್ನೆ ಜನ್ಮ ತಾಳಿದ್ದಲ್ಲ. ಶತ ಶತಮಾನಗಳಿಂದ ಬೆಳೆದು ಬಂದ ವಿಧಿ ವಿಧಾನಗಳ ಕಟ್ಟಲೆಯಾಗಿದೆ. ಮಾನವ ನಾಗರಿಕತೆ ಬೆಳೆದಾಗಿನಿಂದ ಉತ್ತಮವಾಗಿ ಜೀವನ ನಡೆಸಲು ಸಂಘಟಿತನಾಗುತ್ತ ಬದುಕ ತೊಡಗಿದನು. ಕಾಡಿನಲ್ಲಿ ಒಬ್ಬಂಟಿಯಾಗಿ ಬದುಕುತ್ತಿದ್ದವನು ಕಾಲ ನಂತರದಲ್ಲಿ ಸಂಘಜೀವಿಯಾಗಿ ಬದುಕನ್ನು ಕಟ್ಟಿಕೊಂಡನು. ತನ್ನ ವಿವಾಹಿತ ಕುಟುಂಬದೊಂದಿಗೆ ಒಂದು ನಿರ್ದಿಷ್ಟ ಸ್ಥರದಲ್ಲಿ ನೆಲೆಯುರಿದನು.

ಒಂದು ಗುಂಪು ಎಂದ ಮೇಲೆ ಆ ಗುಂಪನ್ನು ಮುನ್ನೆಡೆಸಬಲ್ಲ, ಅದರ ಜವಾಬ್ದಾರಿ ಹೊರಬಲ್ಲ, ಎಲ್ಲರನ್ನೂ ಸಂಘಟಿಸಬಲ್ಲ ಒಬ್ಬ ನಾಯಕ ಇರಲೇ ಬೇಕು ಅಲ್ಲವೇ. ಹಾಗೆ ಒಂದು ಬುಡಕಟ್ಟು ಅಥವಾ ಒಂದು ಪ್ರದೇಶದಲ್ಲಿ ವಾಸಿಸುವ ಜನರು ತಮ್ಮೊಳಗೆ ಒಬ್ಬ ಸಬಲ ಹಾಗೂ ಸದೃಢವಾದ ವ್ಯಕ್ತಿಯನ್ನು ಆರಿಸಿ ಅವನನ್ನು ಮುಖ್ಯಸ್ಥನನ್ನಾಗಿ ಮಾಡುತ್ತಿದ್ದರು. ಅವನು ಇಡೀ ಸಮುದಾಯದ ಆಗುಹೋಗುಗಳನ್ನು ಹಾಗೂ ಪರರ ದಾಳಿಯಿಂದ ರಕ್ಷಿಸುವುದು ಅವನ ಉದ್ದೇಶವಾಗಿತ್ತು.

ವೇದಗಳ ಕಾಲದಲ್ಲಿಯೂ ಕೆಲ ನೀತಿ ನಿಯಮಗಳು ಜಾರಿಯಲ್ಲಿದ್ದವು ಎಂಬುದು ಗಮನಾರ್ಹ. ಕಾಲ ನಂತರದಲ್ಲಿ ಜನಸಂಖ್ಯೆ ಬೆಳೆದಂತೆ ಸಮುದಾಯಗಳು ಚಿಕ್ಕಪುಟ್ಟ ರಾಜ್ಯಗಳಾಗಿ ಬದಲಾದವು. ಆಗ ರಾಜ್ಯಗಳ ಒಡೆತನವನ್ನು ರಾಜರು ನಿರ್ವಹಿಸಲು ಪ್ರಾರಂಭಿಸಿದರು. ಆ ವೇಳೆಯಲ್ಲಿ ಜನರು ಉತ್ತಮ ಜೀವನವನ್ನು ನಡೆಸುವ ಸಲುವಾಗಿ, ಜನರ ಮೂಲಸೌಕರ್ಯವನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಹಾಗೂ ರಾಜ್ಯದಲ್ಲಿ ಸಮೃದ್ಧಿಯನ್ನು ಕಾಪಿಟ್ಟುಕೊಳ್ಳುವ ಉದ್ದೇಶದಿಂದ ಒಂದಷ್ಟು ವಿಧಿಗಳು ಮತ್ತು ಕಾನೂನುಗಳನ್ನು ಜಾರಿಗೆ ತರಲಾಯಿತು.

ಹಮ್ಮುರಬೀಯ ಕಾನೂನುಗಳು ಹೆಚ್ಚು ಪ್ರಸಿದ್ಧಿಯನ್ನು ಪಡೆದದ್ದು ಇಲ್ಲಿ ಉಲ್ಲೇಖನಿಯ. ಭಾರತದಲ್ಲಿಯೂ ಸಹ ಕೌಟಿಲ್ಯನಂತಹ ರಾಜಕೀಯ ತಜ್ಞರು ಮತ್ತು ತತ್ವಜ್ಞಾನಿಗಳು ಒಂದಷ್ಟು ನಿಯಮಗಳನ್ನು ರೂಪಿಸಿದರು. ಈ ನಿಯಮಗಳು ಹೀಗೆ ಒಂದು ಪೀಳಿಗೆಯಿಂದ ಮತ್ತೊಂದು ಪೀಳಿಗೆಗೆ ವರ್ಗಾವಣೆಯಾಗುತ್ತ ಸಾಗಿದವು.

ರಾಜ್ಯಗಳ ಅವಧಿಯು ಮುಗಿಯುವ ಕಾಲ ಸಮೀಪಿಸುತ್ತಿದ್ದಂತೆಯೇ ಕಂಪೆನಿಗಳು, ವಸಾಹತುಶಾಹಿಗಳು ಶುರುವಾಗತೊಡಗಿದವು. ಸೂರ್ಯ ಮುಳುಗದ ಸಾಮ್ರಾಜ್ಯವೆಂದು ಕರೆಯಲ್ಪಡುವ ಬ್ರಿಟಿಷ್ ಸಾಮ್ರಾಜ್ಯವು ವಿಶ್ವವನ್ನು ಕಪ್ಪು ಛಾಯೆಯಂತೆ ಆವರಿಸಿತು. ಅವರ ಪ್ರತಿ ವಸಾಹತುಗಳಲ್ಲಿಯೂ ಈಸ್ಟ್ ಇಂಡಿಯಾ ಕಂಪನಿಯನ್ನು ಆಡಳಿತ ನೋಡಿಕೊಳ್ಳುವ ಉದ್ದೇಶದಿಂದ ಸ್ಥಾಪಿಸಲಾಯಿತು. ಬ್ರಿಟಿಷರ ಕಾಲಾವಧಿಯು ಮುಗಿಯುತ್ತಿದ್ದಂತೆ ವಿಶ್ವದ ಎಲ್ಲಾ ದೇಶಗಳು ಸ್ವಾತಂತ್ರ್ಯ ಪಡೆಯಲಾರಂಭಿಸಿದವು.

ಆ ಸಂದರ್ಭದಲ್ಲಿ ಪ್ರತಿ ದೇಶಗಳು ಸಾಮಾಜಿಕವಾಗಿ, ಆರ್ಥಿಕವಾಗಿ, ಧಾರ್ಮಿಕವಾಗಿ, ಸಾಂಸ್ಕೃತಿಕವಾಗಿ ಬ್ರಿಟಿಷರ ದಾಳಿಗೆ ನಲುಗಿದ್ದವು. ಆ ಸಂದರ್ಭದಲ್ಲಿ ದೇಶವನ್ನು ಪುನರ್ ನಿರ್ಮಾಣ ಮಾಡುವ ಉದ್ದೇಶದಿಂದ ಹಾಗೂ ದೇಶವನ್ನು ಒಗ್ಗೂಡಿಸಿ ಬಾಹ್ಯ ದಾಳಿಗಳಿಂದ ರಕ್ಷಿಸುವುದು ಅಗತ್ಯವಿತ್ತು. ಈ ಉದ್ದೇಶದಿಂದ ಒಂದು ಸರ್ವಶ್ರೇಷ್ಠ ಅಧಿಕಾರ ಅಥವಾ ಪರಮಾಧಿಕಾರವನ್ನು ಹೊಂದಿರುವ ಸುಭದ್ರವಾದ ನಿಯಮಗಳ ಕಟ್ಟನ್ನು ರಾಷ್ಟ್ರಗಳು ನಿರ್ಮಾಣ ಮಾಡಿಕೊಳ್ಳ ತೊಡಗಿದವು.

ಒಂದಷ್ಟು ದೇಶಗಳು ಹಲವು ದೇಶಗಳ ನಿಯಮಾವಳಿಗಳನ್ನು ಅನುಸರಿಸಿ ತನ್ನದೇ ಆದ ನಿಯಮಾವಳಿಗಳನ್ನು ರೂಪಿಸಿಕೊಂಡವು. ಆ ನಿಯಮಾವಳಿಗಳನ್ನೇ ಸಂವಿಧಾನ ಎಂದು ಕರೆಯಲಾಯಿತು. ಸಂವಿಧಾನವೆಂಬುದು ವಿಧಿ ವಿಧಾನಗಳ ಗುಚ್ಛ ಎಂತಲೂ ಕರೆಯಬಹುದಾಗಿದೆ. ಒಟ್ಟಾರೆ ಸಂವಿಧಾನ ಎಂಬ ಪದ ಹುಟ್ಟಿದ್ದು ಸಹಸ್ರಾರು ವರ್ಷಗಳ ಹಿಂದೆ. ಆದರೆ ಸಂವಿಧಾನ ಎಂದು ಹೆಸರಿಸಿದ್ದು ಇತ್ತೀಚೆಗೆ ಅಷ್ಟೇ.

ಸಂತೋಷ್ ಇರಕಸಂದ್ರ
ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ
ತುಮಕೂರು ವಿಶ್ವವಿದ್ಯಾನಿಲಯ

Prev Post

ಹೊರಗಿನವರಿಗೆ ಚಂದ ನಮ್ಮೂರು ಆದರೆ ಅಲ್ಲಿದ್ದವನಿಗೇ ಗೊತ್ತು ಅಲ್ಲಿಯ ಪಾಡು | ಪವನ್‌…

Next Post

ಸುಡು ಸೂರ್ಯನನ್ನು ಎದುರಿಸಲು ಸರಳ ಸೂತ್ರ | ದರ್ಶಿನಿ ತಿಪ್ಪಾರೆಡ್ಡಿ

post-bars

Leave a Comment

Related post