Back To Top

 Superhero ಅಪ್ಪ | ಲಿಖಿತಾ. ಎಂ

ಆಕೆಯ ಬಿಸಿ ಉಸಿರು ತಂಗಾಳಿಯಲ್ಲಿ ಬೆರೆತಾಗ
ಅವಳು ತಾಯಿಯ ಮಡಿಲು ಸೇರಿದಾಗ, ತಾಯಿಯ
ಮನ ಮಿಡಿಯಿತು ತನ್ನ ಕಂದನಿಗಾಗಿ
ತನ್ನ ಯುವರಾಣಿಯನ್ನು ಕಾಣಲು ರಾಜ ಏಳು ಸಮುದ್ರ ದಾಟಿ
ಬಂದಂತಿತ್ತು,
ಮೊದಲ ಬಾರಿಗೆ ಆಕೆಯನ್ನು ಎತ್ತಿ ಹಿಡಿದಿದಾಗ..
ಅವನ ನೋವೆಲ್ಲಾ ಮರೆತು ಹೋಯಿತು, ಜೀವನ ಬದಲಾಯಿತು,
ಪ್ರಪಂಚದ ಎಲ್ಲಾ ಖುಷಿಯನ್ನು ತನ್ನ ಮಗಳಿಗೆ ನೀಡುವ ಆಸೆ ಆತನಿಗೆ
ಅವರೇ ಎಲ್ಲಾ ಮಕ್ಕಳ ಪ್ರೀತಿಯ ತಂದೆ..

ಆತನ ಕೈಗಳಿಂದ ಮಗಳನ್ನು ಎತ್ತಿಕೊಳಲು
ಕಣ್ಣಂಚಿನಲ್ಲಿ ನೀರು..
ಹೃದಯದಲ್ಲಿ ಪ್ರೀತಿ, ಕಣ್ಣಿನಲ್ಲಿ ದೊಡ್ಡ ಕನಸುಗಳು, ಹೆಗಲ ಮೇಲೆ
ಜವಾಬ್ದಾರಿಯನ್ನು ಹೊತ್ತು, ಎಲ್ಲವನ್ನು ಸಾಗಿಸೋ ಜೀವ
ಅವನ ಕಣ್ಣೀರಿನ ಪ್ರೀತಿಯನು ನೆನೆಯಲು ಮಗಳು
ಅಪ್ಪನ ಪುಟ್ಟ ಮುದ್ದು ರಾಜಕುಮಾರಿಯಾದಳು..

ಅಮ್ಮನದು ಕರುಳ ಸಂಬಂಧವಾದರೆ, ತಂದೆಯದು ಹೃದಯ ಬಾಂಧವ್ಯ
ತನ್ನ ಮೊದಲ ಸ್ಪರ್ಶದಿಂದ ಕೊನೆಯ ಉಸಿರಿನವರೆಗೂ
ಕೊಡುವುದು ನಿಸಾರ್ಥ ಪ್ರೇಮ, ತ್ಯಾಗ, ತುಸು ಕೋಪ..

ಅದಕ್ಕೆ ಏನೋ.. ಎಲ್ಲಾ ಹೆಣ್ಣುಮಕ್ಕಳಿಗೆ
ತನ್ನ superhero ಅಪ್ಪ

ಲಿಖಿತಾ. ಎಂ
ಪಥಮ ಪಿಯುಸಿ
ಶೇಷಾದಿಪುರಂ ಸ್ವತಂತ್ರ್ಯ  ಪದವಿ ಪೂರ್ವ ಕಾಲೇಜು

Prev Post

ಮನುಷ್ಯತ್ವದ ಪ್ರಜ್ಞೆಯನ್ನು ಭಾವನಾತ್ಮಕವಾಗಿ ಚಿತ್ರಿಸಿದ ಸಿನಿಮಾ ‘ಫೋಟೋ’ | ಸೌಮ್ಯ ನೇತ್ರೇಕರ್‌

Next Post

ಚೋಮನ ದುಡಿಯ ಪುನರಾವಲೋಕನ | ಅನುಜ್. ವಿ. ತಿಕೋಟಿಕರ್

post-bars

One thought on “Superhero ಅಪ್ಪ | ಲಿಖಿತಾ. ಎಂ

Manjusays:

Nice

Reply

Leave a Comment

Related post