ಶುರುವಿನಲ್ಲೇ ಪ್ರೇಮಾಂತ್ಯ | ಆನಂದ ಕುಮಾರ್
ಬೆಳ್ ಬೆಳಿಗ್ಗೆ ಎದ್ದು, ಬೆಳ್ ಬೆಳ್ಳುಗೆ ರೆಡಿಯಾಗಿ,
ಓಡ್ ಓಡಿ ಬಂದೆ ನನ್ನೊಳ್ಳ್ನ ನೋಡೋಕೆ
ನನ್ನೊಳ್ಳ್ನ ಕಾಡೋಕೆ, ನನ್ನೊಳ್ನ ಪ್ರೀತ್ಸೋಕೆ.
ಬರುವಾಗ ಅನ್ನುಸ್ತು ನನ್ನೊಳು ಅಂತ
ಬಂದ್ಮೇಲು ಅನ್ನುಸ್ತು ನನ್ನೊಳೆ ಅಂತ
ಆಮೇಲೆ ಅನ್ನುಸ್ತು ನನ್ನೊಳಾ ಅಂತ
ನಂದೇನು ತಪ್ಪಿಲ್ಲ ಅವ್ಳನ್ನ ಪ್ರೀತಿಸಿದ್ದು
ಅವ್ಳ್ದೇನು ತಪ್ಪಿಲ್ಲ ಬೇರೆವ್ನ ಪ್ರೀತಿಸಿದ್ದು
ಪ್ರೀತಿನೇ ಹಂಗೆ ಪ್ರೀತ್ಸಿದ್ದೆ ತಪ್ಪಾಗೋದು
ಕಟ್ಟಿದ್ದೆ ಒಂದ್ ಸ್ವರ್ಗದ್ ಗೂಡ್ನ ನನ್ ಮನ್ಸಲ್ಲಿ,
ಅವ್ಳಿಗೆ ಇಷ್ಟಿವಿಲ್ಲ ಇರೋಕೆ ಈಗ ನನ್ನ ಆ ಮನ್ಸಲ್ಲಿ
ಬೇರೆಳ್ನ ತರೋಕೆ ನಂಗೇನೂ ಕಷ್ಟವೆನಲ್ಲ ಆದ್ರೆ,
ನನ್ಗೆ ಇಸ್ಟ ಇಲ್ಲಾ ಬೇರೆಳ್ನ ನೋಡೋಕೆ ಆ ಜಾಗದಲ್ಲಿ
ಅವ್ಳು ಅಪ್ಸರೆ, ತಿಲೋತ್ತಮೆ, ಮೇನಕೆ ಏನಲ್ಲಾ
ನಾನು ಇಷ್ಟ ಪಟ್ಟೊಳು ಶುದ್ಧ ಮನಸ್ಸಿನ ಕೃಷ್ಣಸುಂದರಿ
ಅವಳನ್ನ ನೋಡಿ ಮೊದಲು ಪ್ರೀತಿಸಿ ಅನ್ಕೊಂಡಿದ್ದೆ
ಕರಿಮಣಿ ಮಾಲೀಕ ನಾನೆಂದು
ಆಗಲೇ ಟ್ರೆಂಡ್ ಆಯ್ತು ಗುರು
ಓ ನಲ್ಲ ನೀನಲ್ಲ ಕರಿಮಣಿ ಮಾಲೀಕ ನೀನಲ್ಲ ಎಂದು.
ಆನಂದ ಕುಮಾರ್
ಪತ್ರಿಕೋದ್ಯಮ ಸಮೂಹ ಸಂವಹನ ವಿಭಾಗ
ತುಮಕೂರು ವಿಶ್ವ ವಿದ್ಯಾನಿಲಯ
One thought on “ಶುರುವಿನಲ್ಲೇ ಪ್ರೇಮಾಂತ್ಯ | ಆನಂದ ಕುಮಾರ್”
Haa hudgi yaru anta heltira just now curiosity