ಸಖ್ಯ ಮುಖ್ಯ | ಸಿದ್ಧಾರೂಢ ಎಸ್. ಜಿ
ಅಜ್ಜನ ಸಖ್ಯ
ಮೊಮ್ಮಗಳಿಗೆ ಮುಖ್ಯ
ಕುತೂಹಲದ ಪ್ರಶ್ನೆಗಳಿಗೂ
ತಿನಿಸುಗಳ ಘಮಲಿಗೂ ಅಜ್ಜನೆ ಉಪಾಯ
ಅಜ್ಜನಿಗಿದರಿಂದ ಬುದ್ಧಿ ಭತ್ಯೆಯ ವ್ಯಯ
ಹಠ, ರಂಪ, ಜಗಳ
ಕಿರಿಚಾಟ ಮುನಿಸೆಲ್ಲಕು
ಅಜ್ಜನಲ್ಲಿದೆ ಸ್ವಾತಂತ್ರ
ಅಜ್ಜನುಳಿದು ಸಹಿಸದು
ಮೊಮ್ಮಗಳಿಗೆ ಪರತಂತ್ರ
ಅಜ್ಜನ ಕೈಹಿಡಿದು
ನಡೆವ ಪ್ರತಿ ಅಡಿಗೂ
ಪ್ರತಿ ತೊದಲು ನುಡಿಗೂ ಅಜ್ಜನ ಸಮ್ಮತಿ
ಮೊಮ್ಮಗಳಿಗದರಲ್ಲಿ ಸಂತೃಪ್ತಿ
ಮೊಮ್ಮಗಳ ಪ್ರತಿ ತಂಟೆಗೂ ಸವಾಲಿಗೂ
ಅದುಬ್ಯಾಡಾ ಇದುಬ್ಯಾಡಗಳಿಗೂ
ಅಜ್ಜನಲ್ಲಿದೆ ಪ್ರತಿಯೊಂದಕು ಬದಲು
ಅಜ್ಜನ ಸಂಪ್ರೀತಿಗೆ ಸಾಕು ಮೊಮ್ಮಗಳ ತೊದಲು
ಕೈತೋರಿದರೆ ಅದ ಕೊಡಿಸುವುದು ಅಜ್ಜನ ಚಾಳಿ
ಮೊಮ್ಮಗಳದು ಅಜ್ಜನೊಂದಿಗೆ
ದಿನವೂ ವಿಹಾರದ ಪಾಳಿ
ಅಜ್ಜನ ಸಖ್ಯ
ಮೊಮ್ಮಗಳಿಗೆ ಮುಖ್ಯ
ಅಜ್ಜನಿಗೂ ಅದು ಪ್ರಾಮುಖ್ಯ
ಸಿದ್ಧಾರೂಢ ಎಸ್. ಜಿ
ಪದವಿ ಅಂತಿಮ ವರ್ಷದ ವಿದ್ಯಾರ್ಥಿ
ಎಸ್. ಆರ್. ಎಫ್. ಜಿ. ಕಾಲೇಜು, ಬೆಳಗಾವಿ