Back To Top

 ಓಡು ಗಮ್ಯವ ಅರಸುತ | ಸಿದ್ಧಾರೂಢ ಎಸ್. ಜಿ.

ಗಮ್ಯವನರಸುತ ಮತ್ತೋಡು ಓಡು
ಸುಲಭದ ದಾರಿಯ ನೋಡುತ
ಜೀವದ ಆಯುವ ಸವೆಸುತ
ನಿಟ್ಟುಸಿರ ಬಿಟ್ಟು ಸಂಕಟವ ನೀಗಲು
ಸಾಕಷ್ಟಿದ್ದರೂ ಸಾಲದು ಎನುತಲಿ
ಭವಿತಕ್ ಹಣಬಲವ ಸಂವರ್ಧಿಸಲು
ಮತ್ತವರ ಓಟವ ಕಡೆಗಣ್ಣಲಿ ನೋಡುತ
ಗಡಿಯಾರದ ಬುಡದಲಿ ಅಶುಭಗಳಿಗೆಯನ್ಹಳಿಯುತ
ಓದಿದ ವಿದ್ಯೆಗೆ ನ್ಯಾಯವ ಪಡೆಯಲು
ಹೊಟ್ಟೆಯ ಬಟ್ಟೆಯ ನಿಧಿ ಸಂಪಾದಿಸಲು
ನಂಬಿಕೊಂಡವರ ವೆಚ್ಚವ ಭರಿಸಲು
ಸಲುಹಿದ ಜನರ ಸಂತಸವ ಕಾಯಲು
ಓಡು ಓಡು ಓಡುತಲಿರು
ಮತ್ತೇನು ಮಾಡುವೆ ಯಂತ್ರ ಸುತ್ತಲೇ ಬೇಕು
ಭವದ ಪರಂಪರೆ ಮುಂಚರಿಸಲೇ ಬೇಕು
ಬದುಕಿ ಓಡಲೇ……ಬೇಕು
ಓಡಿ ಬದುಕಲೇ…….ಬೇಕು
ನೀನಾದಾದರು….. ನಾನಾದರು

ಸಿದ್ಧಾರೂಢ ಎಸ್. ಜಿ.
ಬಿ. ಎ. ಅಂತಿಮ ವರ್ಷದ ವಿಧ್ಯಾರ್ಥಿ
ಎಸ್. ಆರ್. ಎಫ್. ಜಿ. ಕಾಲೇಜ್, ಬೆಳಗಾವಿ

Prev Post

ಇಲ್ಲ್ಯಾಕ್ ಬರತೈತೋ ಇಷ್ಟೊಂದ ಮಳಿ | ಪ್ರಸಾದ. ಗುಡ್ಡೋಡಗಿ

Next Post

ಬೆಳಕು | ರೂಪರಾಣಿ ಪಟಗಾರ

post-bars

Leave a Comment

Related post