Back To Top

 ನಿರಾಕರಿಸಿದೆನೆಂದು ನಿರಾಸೆಯಾಗಬೇಡಾ ಚೆಲುವೆ | ಸಿದ್ಧಾರೂಢ ಎಸ್.ಜಿ.

ನಿರಾಕರಿಸಿದೆನೆಂದು ನಿರಾಸೆಯಾಗಬೇಡಾ ಚೆಲುವೆ | ಸಿದ್ಧಾರೂಢ ಎಸ್.ಜಿ.

ನಿರಾಕರಿಸಿದೆನೆಂದು ನಿರಾಸೆಯಾಗಬೇಡಾ ಚೆಲುವೆ//

ಕಾಡಿಗೆಯ ಕುಳಿಯಲ್ಲಿ ಆಳದಿ ಮಿಂಚುವ ಕಂಗಳ ಹೊಳಪಿಗೆ ಸೋಲದವರಿಲ್ಲ
ಅಂತದರಲ್ಲಿ ಸೋತರೂ ಸೋಲದ ಸೋಲಿಗ ನಾನು!

ಭವಿಷ್ಯದ ಬಿಂಬವ ದಿನವೂ ಕಾಣದ ಕಂಗಳಿರಲಿಕ್ಕಿಲ್ಲ
ಅಂತದರಲ್ಲಿ ಆಕರ್ಷಕ ಕಂಗಳ ಮಿಂಚು
ಕಂಡರೂ ಕಾಣದ ಕುರುಡ ನಾನು!

ಅಪಾರ ಆಕರ್ಷಣೆಗಳ ನಡುವೆ ನಂಬಿಕೆಯಿಲ್ಲದೆ ಪ್ರೇಮಿಗಳಿರಲಿಕ್ಕಿಲ್ಲ
ಅಂತದರಲ್ಲಿ ನಂಬಿದರೂ ನಂಬಲಾಗದ ನಂಬಿಕಸ್ತ ನಾನು!

ನಿನ್ನಂತ ಚಲುವೆ ಮುಂದಾಗಿ ಮಾತನಾಡಿದರು ಮಾತನಾಡದವರಿಲಿಕ್ಕಿಲ್ಲ
ಅಂತದರಲ್ಲಿ ವ್ಯಕ್ತಿತ್ವದಿಂದ ಮಾತಾಡಿದರೂ ಮಿತವಾಡುವ ಮಿತಭಾಷಿ ನಾನು !

ಇಷ್ಟೆಲ್ಲಾ ಮಿತಿಗಳಿದ್ದರೂ ಮೀರದ ಪ್ರೇಮಿಗಳಿರಲಿಕ್ಕಿಲ್ಲ
ಅಂತದರಲ್ಲಿ ನನ್ನದಷ್ಟೇ ನಾ ವಿಚಾರಿಸಿ ನಂಬಿದವಳ
ಜೀವನ ಕಲ್ಪನೆಯ ಕಡೆಗಣಿಸದ ಸ್ವಾರ್ಥಿಯಾದ ನಿಸ್ವಾರ್ಥಿ ನಾನು!

ಆದರೂ ನಿರಾಕರಿಸಿದನೆಂದು ನಿರಾಸೆಯಾಗಬೇಡ ಚೆಲುವೆ
ನಿನ್ನೆಲ್ಲ ಆಗುಹೋಗುಗಳಿಗೆ ಒದಗುವ ಅನಿರೀಕ್ಷಿತ ಸ್ನೇಹಿತ ನಾನು….!

ಸಿದ್ಧಾರೂಢ ಎಸ್. ಜಿ.
ಬಿ.ಎ. ಅಂತಿಮ ವರ್ಷ
ಸಂಗೊಳ್ಳಿ ರಾಯಣ್ಣ ಪ್ರಥಮ ದರ್ಜೆ ಘಟಕ ಮಹಾವಿದ್ಯಾಲಯ, ಬೆಳಗಾವಿ

Prev Post

ಶೂನ್ಯ | ದೀಪ್ತಿ. ಎಮ್‌

Next Post

ಬಾಟಲ್ ಜ್ಯೂಸ್ ಗಳು ಯಾರಿಗೆ ತಾನೇ ಇಷ್ಟವಿಲ್ಲ

post-bars

One thought on “ನಿರಾಕರಿಸಿದೆನೆಂದು ನಿರಾಸೆಯಾಗಬೇಡಾ ಚೆಲುವೆ | ಸಿದ್ಧಾರೂಢ ಎಸ್.ಜಿ.

Nice

Reply

Leave a Comment

Related post