Back To Top

 ನವಯುಗದ ದಾರಿ | ಸೌಮ್ಯ ನೇತ್ರೇಕರ್

ದಾರಿ ಸಾಗುತಿದೆ ಅನಾಗರಿಕತೆಯೆಡೆಗೆ
ಮಾನವ ಯಂತ್ರಗಳ ಆರ್ಭಟದೆಡೆಗೆ

ಹೈವೆ ರಸ್ತೆಗಳ ಮಾರ್ಗದಲಿ
ಮಾನವ ಜನಾಂಗದ ಹಿಂಡು
ಟ್ರಾಫಿಕ್ಕುಗಳ ವೇಗದಲಿ
ಭಾವಜೀವನದಿ ಬತ್ತಿ
ತಂತ್ರಜ್ಞಾನದ ಬೆನ್ನು ಹತ್ತಿ
ಸಾಧನೆಯ ದಾರಿ ಸಾಗುತಿದೆ

ನವಯುಗದ ಮುಕ್ತಮಾರುಕಟ್ಟೆಯ
ಜಾಗತೀಕರಣ
ವಸಾಹತುಯುಗವ ಆಗಮಿಸಿದ
ಆಧುನೀಕರಣ
ಮಾನವ ಶ್ರಮ ಕೈ ಬೆರಳುಗಳ
ಅಂಚಲಿ ದಣಿದಿದೆ.
ಆಯಾಸವಿಲ್ಲದ ಕೆಲಸದಲಿ
ಕಣ್ಣು ಅಳುತಿದೆ.

ಕಾಲುದಾರಿಯ ತಂತ್ರಜ್ಞಾನದ ವೇಗಕೆ
ಕಾರ್ಪೋರೇಟಿಕರಣದ ಉತ್ತುಂಗಕೆ
ಕೃತಕ ಬುದ್ಧಿಮತ್ತೆಯ ನವಶಕೆ ಆಗಮಿಸಿದೆ.
ಮಾನವ ಕೃತಕ ಜಿಹ್ವೆಯ ದುದುಂಭಿ ಮೊಳಗಿದೆ.
ಈ ದಾರಿಯ ಅಂತಿಮ ಯಾನ ಬರುತಿದೆ
ಅಲ್ಲಿ ತಂತ್ರಜ್ಞಾನದ ಕಟ್ಟಡ ಕುಸಿದುಬಿದ್ದು
ಸಿಮೆಂಟು ಬೂದಿಯ ದಟ್ಟ ಹೊಗೆ ಮುಸುಕಿದೆ.

ಆ ಮುಸುಕಲಿ
ಕಾಣಬೇಕಿದೆ ಅನಾದಿಯುಗವ
ಯಾಂತ್ರಿಕ ಮನದಲಿ
ಸೃಷ್ಟಿಶೀಲತೆಯ ಚೈತನ್ಯವ
ಬದಲಿಸಬೇಕಿದೆ ನವಯುಗದ ದಾರಿ.

ಸೌಮ್ಯ ನೇತ್ರೇಕರ್
ಸರ್ಕಾರಿ ಪ್ರಥಮದರ್ಜೆ ಕಾಲೇಜು, ದಾಂಡೇಲಿ

Prev Post

ಮಳೆ ಬಂದಿದೆ | ಮೌನೇಶ

Next Post

ಕೆಲವೇ ತಿಂಗಳ ಅಂತರದಲ್ಲಿ ಏಳು – ಬೀಳು ಎದುರಿಸಿ ಗೆದ್ದ ಹಾರ್ದಿಕ್ ಪಾಂಡ್ಯ…

post-bars

Leave a Comment

Related post