ಮಳೆ ಬಂದಿದೆ | ಮೌನೇಶ
“ಮುಂಗಾರು ಮಳೆಯೇ” ಹಾಡಿನ ಸ್ಟೇಟಸ್ಸು ಎಲ್ಲೆಡೆ ಕೇಳಿದೆ,
ಕಾರಣ ಆಹಾ! ಮಳೆ ಬಂದಿದೆ.
ಹೌದು ಹೃದಯದ ನೂರಾರು
ತಲ್ಲಣಗಳ ಕೊಚ್ಚಿಹಾಕಿ ಹಸಿರು
ತೋಡಿಸಲು ಮಳೆ ಬಂದಿದೆ/೧/
ಪ್ರಕೃತಿ ಕಾಲರು ಎತ್ತಿದೆ,
ಮನೆ ಕೂಲರು ಮೂಲೆ ಸೇರಿದೆ,
ಕಾಲು ಕೆಸರಾಗಬಾರದೆಂದು
ಸಿಮೆಂಟು ಮೆತ್ತಿದ್ದಾನೆ,
ಹುಲುಮಾನವನಿಗೆ ಸೆಡ್ಡು ಹೊಡೆದು, ಸಿಮೆಂಟು ಬಿರುಕಿನಲ್ಲೆ ಹುಲ್ಲೆದ್ದಿದೆ!
ಏಕೆಂದರೆ ಮಳೆ ಬಂದಿದೆ/೨//
ವಿಲಿವಿಲಿಯೆನ್ನುತ್ತಿದ್ದ ಭಾರತಿಗೆ
ಪ್ರಜಾಪ್ರಭುತ್ವ ಆರತಿಯೆತ್ತಿದಂತೆ
ಸತ್ತೇ ಹೊಗುತ್ತೇನೆ ಎನ್ನುತ್ತಿದ್ದ
ಬರಡು ಭೂಮಿಗೆ ಮಳೆ
ಹಸಿರ ಕೀರ್ತಿ ತಂದಂತೆ,
ಮಳೆ ಬಂದಿದೆ
ಹೊಸತನವ ತಂದಿದೆ //೩//
ಸಾವಿರಾರು ಇರುವೆಗಳಿಗೆ
ಮಣ್ಣಿನೊಳಗೆ ಮನೆ ಮಾಡಲು
ಸಿಕ್ಕಿತು ಪ್ಲಾಟು/
ಮಳೆ ಮೋಡಿಗೆ ಸಿಲುಕಿದ
ಕವಿಹೃದಯಕೆ ಸಿಕ್ಕಿತು
ಮೃಷ್ಟಾನ್ನ ಭೋಜನವೆಂಬ
ಕವಿತೆ ತುಂಬಿದ ಪ್ಲೇಟು//೪//
ಮೌನೇಶ
ಬಿ. ಎ. ಪ್ರಥಮ ವರ್ಷ
ಜವಾಹರ ನವೋದಯ ವಿದ್ಯಾಲಯ, ಕಲಬುರ್ಗಿ -೨
2 thoughts on “ಮಳೆ ಬಂದಿದೆ | ಮೌನೇಶ”
ತುಂಬಾ ಚೆನ್ನಾಗಿ ಬರಿದಿರುವಿರಿ ಹೀಗೆ ಮುಂದುವರೆಯಲಿ ನಿಮ್ಮ ಕಾವ್ಯ ಪಯಣ❤️❤️❤️
ತುಂಬಾ ಚೆನ್ನಾಗಿ ಮೂಡಿ ಬಂದಿದೆ. ಮೌನೇಶ ನಿನ್ನ ಸಾಹಿತ್ಯದ ಕೃಷಿ ಮುಂಗಾರು ಮಳೆಯಿಂದ ಬೀಜಯೊಡೆದು ಮೊಳಕೆಯೊಂದಿಗೆ ಹೆಮ್ಮರವಾಗಿ ಬೆಳೆಯಲಿ ಹಾರೈಸುವೆ