ಮಗುವೇ ನೀ ಬದಲಾದೆ | ಶಿಲ್ಪ ಬಿ
ಅಮ್ಮನ ಕಿರುಬೆರಳು ಆಕಾಶದೆಡೆಗೆ,
ತಟ್ಟೆಯಲ್ಲಿದ್ದ ತುತ್ತುಗಳೆಲ್ಲವು
ಗುಳುಂ ಗುಳುಂ ಹೊಟ್ಟೆಯೊಳಗೆ..
ಅಂದು ಚಂದ ಮಾಮಾನೆ
ಪಾಕ ರಾಜ!
ಮಗುವಿನ ರುಚಿಯ ಮೊಗ್ಗುಗಳನ್ನು
ಅರಳಿಸುವ ಮಾಯಾಗಾರ,
ಆಹಾ! ಅವರದ್ದೇ ಆಗಿತ್ತು ಹಲವು ಜನುಮಗಳ
ಮುಗ್ಧ ಒಲವಿನ ಅನುಭಂದ..
ಅಂದು ನಿದ್ದೆ ಮಾಡದೇ ಹಟ ಮಾಡಿದಾಗ
ಕತ್ತಲಲ್ಲಿ ಬರುತ್ತಿದನು ಗುಮ್ಮ..
ದೊಡ್ಡ ದೊಡ್ಡ ಭವನಗಳ ಮೇಲೆ
ಪುಟ್ಟ ದಿಟ್ಟ ತಾರಸಿಯ ಮೇಲೆ
ಕಪ್ಪು ಬಣ್ಣದ ಮುಖವನ್ನು ಹೊತ್ತು
ಮಹಿಷಾಸುರಂತೆ ಹಲ್ಲು ಕಿರಿಯುತ್ತಿದ್ದನು
ಮಗುವನ್ನು ಹೆದರಿಸಿ ಮಲುಗಿಸುತ್ತಿದ್ದನು
ಆಹಾ! ಅವರದ್ದೇ ಆಗಿತ್ತು ಲೋಕದ ಕಲ್ಪನೆಗಳಿಗೂ ಎಟಕದ
ಅಳಲಿನ ಅನುಬಂಧ..
ಅಂದು ಮಳೆರಾಯನ ಬದುಕೊಂದು ಸುಂದರ
ಹನೀಗವನವಾಗುತ್ತತ್ತು,
ಮಗು ಮೇಘವರ್ಷವನ್ನು ಕಂಡು ಬೀರುತ್ತಿದ್ದ
ಮುಗುಳ್ನಗೆಯ ಎರಡು ಹಲ್ಲಿನ ಹೊಳಪಿನಲ್ಲಿ..
ಅಂದು ಚಕ ಪಕ ಚಪ್ಪಲಿಯ ಸದ್ದು ಮಾಡುತ್ತಾ
ಅಪ್ಪ, ಅಜ್ಜನೊಡನೆ
ಬಾತುಕೋಳಿಯಂತೆ ಬೀದಿ ಬೀದಿಯೆಲ್ಲೆಲ್ಲ ಹೆಜ್ಜೆಯನಿಡುವಾಗ
ಭೂತಾಯಿಯು ಹಾತೊರೆಯುತ್ತಿದ್ದಳು
ಆ ಮಗುವಿನ ಪಾದ ಸ್ಪರ್ಶದಲ್ಲಿ ಮಗುವಾಗಲು..
ಅಂದು ಅಜ್ಜಿಯ ಅಂಗೈಯಲ್ಲಿ
ಮಗುವು ಪಿಳಿ ಪಿಳಿ ಕಣ್ಣು ಮಿಟುಕಿಸುವಾಗ
ಸೂರ್ಯನೇ ಮಂಕಾಗುತ್ತಿದನ್ನು
ಆ ನೋಟದ ಸೆಳೆತದಲ್ಲಿ ಲೀನವಾಗುತ್ತ..
ಇಂದು ಊಟ ಮಾಡಲು ಫೋನಿನಲ್ಲಿ
ಜಾನಿ ಜಾನಿ ಎಸ್ ಪಾಪ
ನಿದ್ದೆ ಮಾಡಲು ಫೋನಿನಲ್ಲಿ
ಟ್ವಿಂಕಲ್ ಟ್ವಿಂಕಲ್ ಲಿಟಲ್ ಸ್ಟಾರ್
ಮಾತನಾಡಲು ಫೋನಿನಲ್ಲಿ ಟಾಕಿಂಗ್ ಟಾಮ್
ಆಟವಾಡಲು ಫೋನಿನಲ್ಲಿ ಟೆಂಪಲ್ ರನ್
3-4 ವರ್ಷದೊಳಗೆ ಎ, ಬಿ, ಸಿ, ಡಿ
1, 2, 3 ಕಲಿಯುವ
ಮಗುವಿನದ್ದೆ ಅತ್ಯಂತ ಜಾಣತನ
ಕಲಿಯದೇ ಹೋದ ಮಗುವಿನಲ್ಲಿ
ಮುಂದೆ ಮತ್ತೇನನ್ನು ಕಲಿಯಲು
ಅರ್ಹವಿಲ್ಲದ ದಡ್ಡತನ…
ಸೂರ್ಯ, ಚಂದಿರ, ಮಳೆರಾಯ
ನಿಸರ್ಗವೇ ದುಃಖಿಸುತ್ತಿಹುದು
ಯಾವುದೋ ವಿರಹದ ಯಾತನೆಯಲ್ಲಿ..
ಭವಿಷ್ಯದಲ್ಲಿ ಭಾವ ಸ್ಪಂದೆನೆಯೇ
ಇಲ್ಲದ ಲೋಕವನ್ನು ಊಹಿಸುತ್ತ
ದಿಗಿಲನಲ್ಲಿ ಮಂಕಾಗಿ ಕುಳಿತೆ ನಾನು
ಪ್ರಕೃತಿಯ ವಿಕೋಪದ ಮೂಲ ಹುಡುಕುತ್ತ..
ಶಿಲ್ಪ ಬಿ.
ದ್ವಿತೀಯ ಪಿ.ಯು.ಸಿ
ಶೇಷಾದ್ರಿಪುರಂ ಸ್ವತಂತ್ರ ಪದವಿ ಪೂರ್ವ ಕಾಲೇಜು