Back To Top

 ಬಸ್ ನಿಲ್ದಾಣ | ಭ್ರಮರಾಂಭಿಕಾ

ಬಸ್ ನಿಲ್ದಾಣ ಅದೊಂದು ಅದ್ಭುತವಾದ ಜಾಗ
ಆಗಿ ಹೋಗಿದೆ ಎಲ್ಲಾ ಜನರ ಜೀವನದ ಭಾಗ

ಎಷ್ಟೋ ಅಪರಿಚಿತರು ಪರಿಚಿತರಾದ ಸ್ಥಳ
ನಾವು ಅವರನ್ನು ಮತ್ತೆ ಭೇಟಿಯಾಗುವುದು ವಿರಳ

ಬಸ್ ನಿಲ್ದಾಣದಲ್ಲಿ ಕಂಡು ಬರುವ ಅದೆಷ್ಟೋ ಬೇಕರಿ
ಸುಮ್ಮನೆ ಹೋಗುವವರನ್ನು ಕೈ ಬೀಸಿ ಕರೆಯುತ್ತಾರೆ ರಿ..

ಬಸ್ ಉಚಿತ ಆದ ಮೇಲಂತು ಬಸ್ ನಿಲ್ದಾಣ
ಆಗಿದೆ ಅದು ಜನ ಜಂಗುಳಿಯ ತಾಣ

ಬಸ್ ನಿಲ್ದಾಣದಲ್ಲಿ ಕುರುಕಲು ತಿಂಡಿ ಮಾರುವವರೆ ಜಾಸ್ತಿ
ಅವರಿಗೆ ಪ್ರತಿದಿನ ಪ್ರಯಾಣಿಸುವ ಪ್ರಯಾಣಿಕರೇ ಆಸ್ತಿ

ಬಸ್ ನಿಲ್ದಾಣದಲ್ಲಿ ತಮ್ಮ ಬಸ್ಸಿಗಾಗಿ ಕಾಯುತ್ತಾ ಕುಳಿತ ಅದೆಷ್ಟೋ ಜನರು
ಬಸ್ ಬಂದ ತಕ್ಷಣ ಸೀಟಿಗಾಗಿ ಮಾಡುತ್ತಾರೆ ಕಾರುಬಾರು

ಸಾರ್ವಜನಿಕ ಶೌಚಾಲಯ ನೋಡಲು ಸಾಲದು ಎರಡು ಕಣ್ಣು
ಆದರು ಸಹಿಸಿಕೊಂಡು ಹೋಗುತ್ತೀವಿ ಎಲ್ಲವನ್ನು

ಬಸ್ ನಿಲ್ದಾಣದ ಅದೊಂದು ಅದ್ಭುತವಾದ ಜಾಗ
ಆಗಿ ಹೋಗಿದೆ ಎಲ್ಲಾ ಜನರ ಜೀವನದ ಭಾಗ

ಭ್ರಮರಾಂಭಿಕಾ
ಬಿ.ಎ. ಅಂತಿಮ ವರ್ಷದ ಪದವಿ ವಿದ್ಯಾರ್ಥಿನಿ
ಸರಕಾರಿ ಪ್ರಥಮ ದರ್ಜೆ ಕಾಲೇಜು, ಧಾರವಾಡ

Prev Post

ರಾಜ್ಯ ಮಟ್ಟದ ಮೀಡಿಯಾ ಫೆಸ್ಟ್ ಪೋಸ್ಟರ್ ಬಿಡುಗಡೆ

Next Post

ಮಳೆ ಬಂದಿದೆ | ಮೌನೇಶ

post-bars

One thought on “ಬಸ್ ನಿಲ್ದಾಣ | ಭ್ರಮರಾಂಭಿಕಾ

Sharana Basavasays:

ಅದೆಷ್ಟೋ ನೆನಪುಗಳು
ಸೆರೆಹಿಡಿದ ಜಾಗ
ಆಗಿದೆ ಎಲ್ಲರ ಬದುಕಿನ ಭಾಗ

Reply

Leave a Comment

Related post