ಬೆಳಕು | ರೂಪರಾಣಿ ಪಟಗಾರ
ಇಲ್ಲದಿರೆ ನೀನು ನಾನಾಗುವೆನೇ ನಾನು
ಮನೆ ಮನಕೂ
ನೀನು ಬೇಕು
ದಿವ್ಯ ದೃಷ್ಟಿಗೆ ಸತ್ಯಂ ಸೃಷ್ಟಿಗೆ ಬದುಕ ಬಣ್ಣಕೆ
ಭವದ ನಂಬಿಕೆಗೆ
ನೀನು ಬೇಕು
ಸಪ್ತ ಜ್ಞಾನಕ್ಕೆ ಸುಪ್ತ ವರ್ಣಕ್ಕೆ
ಒಲವಿಗೆ ಚೆಲುವಿಗೆ ಗೆಲುವಿಗೆ
ನೀನು ಬೇಕು
ನಾನರಳಿ ಹೂವಾಗಲು
ಕಾಯಿ ಹಣ್ಣಾಗಲು
ಜಡ ಜಂಗಮವಾಗಲು
ನೀರು ಜೀವ ದ್ರವವಾಗಲು
ನೀನು ಬೇಕು
ಹಗಲು ರಾತ್ರಿಗಳು
ನಿನ್ನಯ ಮುಖಗಳು
ಕಷ್ಟ ಸುಖಗಳು ಬಾಳಿನ ಬೆಳಕುಗಳು
ಜೀವ ಜೀವನ ಬೆಳಗಲು
ನೀನು ಬೇಕು
ಹೊರಗಿನ ಹೊಳಪು
ಒಳಗಿನ ಒನಪು
ಮನವ ಮುಟ್ಟಲು ತಟ್ಟಲು
ನೀನು ಬೇಕು
ತಾನೂರಿದು ಬೆಳಗುವ ನಿನಗೂ ತಾನುರಿದುರಿವ
ಕಾಡ್ಗಿಚ್ಚಿಗೂ ಇದೇ ತಾನೆ ಶಕ್ತಿ
ಬರಲು ಕರುಣಾಳು ಭಕ್ತಿ
ನೀನು ಬೇಕು
ಬರುವಾಗ ದಿನವೂ
ಸೂರ್ಯ ಚಂದ್ರರು
ಹುಡುಕುವೆವು ಎಲ್ಲೆಲ್ಲಿ
ಇಹಪರದ ಬೆಳಕಿನ ಮೂಲವ
ಹುಡುಕಲು
ನೀನು ಬೇಕು
ರೂಪರಾಣಿ ಪಟಗಾರ
ಲಿಟಲ್ ಸ್ಟಾರ್ ಆಂಗ್ಲ ಮಾಧ್ಯಮ ಶಾಲೆ, ಹಿರೆಬಾಗೆವಾಡಿ