Back To Top

 ಅರಿಕೆಗೆ ಸಿಕ್ಕ ಪ್ರಕೃತಿ ಸೌಂದರ್ಯ | ದಿವ್ಯಾ ಕೆ

ಅರಿಕೆಗೆ ಸಿಕ್ಕ ಪ್ರಕೃತಿ ಸೌಂದರ್ಯ | ದಿವ್ಯಾ ಕೆ

ಬೆಟ್ಟದೆಡೆ ತಿರುಗಿ ನೋಡದೆ
ಹರಿವ ನದಿಗೆ ಆ ದಿನಗಳು ವರವೋ? ಶಾಪವೋ?
ಮುನಿಸು, ಹುಚ್ಚು, ಹರೆಯ ಎಲ್ಲ
ದುಮ್ಮಿಕ್ಕೋ ಪ್ರವಾಹ ಹೊಳೆಯದೇನು ಆ ಕ್ಷಣಕೆ,
ಧೋ ಎನ್ನುವ ಮಳೆಯೋಮ್ಮೆ
ಮರುಭೂಮಿ ಬಿರುಬಿಸಿಲೋಮ್ಮೆ
ಆ ದಿನಗಳು ಪ್ರಕೃತಿಗೆ ಮಾತ್ರ ವರ
ಆ ನದಿಗೇನಲ್ಲ ಅದಕೆ ಬರಿಯ ಯಾತನೆಯ ವರ…
ಕಾಡ್ಗಿಚ್ಚಿನ ಸಂಗ್ರಾಮ ಒಳಗೊಳಗೇ
ಮತ್ತೆಲ್ಲೋ ಹಾಡುಹಗಲ ಕಂಪನ
ಪ್ರೇಕ್ಷಣಿಯ ಕುಸುಮವೋ
ಕಾಡಬಳ್ಳಿಯೊ
ಯಾವುದಕ್ಕೂ ತಪ್ಪಿದ್ದಲ್ಲ ಈ ಯಾತನೆಯ ರಾಗ
ರುವಾರಿಗೆ ಮಾತ್ರ ಗೊತ್ತು ಹಿತಯಾತನೆ ಸುಖ
ನೋಡುವಕಂಗಳಿಗೆ ಅರಳಿದ್ದು ಮಾತ್ರ ಕಾಣುವುದು ಸಖ.

ದಿವ್ಯಾ ಕೆ. ಬೆಳಕಿನಕೊಂಡ
ಬಿ. ಎ 6ನೇ ಸೆಮಿಸ್ಟರ್‌
ಕರ್ನಾಟಕ ಕಾಲೇಜು, ಧಾರವಾಡ

Prev Post

ಅಡಕತ್ತರಿಯಿಂದ ಪಾರಾಗಿ ಮರಳಿ ಬಂದ ನಜೀಬ್ | ಸಂತೋಷ್ ಇರಕಸಂದ್ರ

Next Post

ಏಕಾಂತ ತಿಳಿ ತಂಗಾಳಿಯೋ ಉರಿಯುವ ಜ್ವಾಲೆಯೋ | ಶ್ರವಣ್ ನೀರಬಿದಿರೆ

post-bars

Leave a Comment

Related post