Back To Top

 ಆರಂಭ ಅಂತಿಮಗಳ ಕುತೂಹಲವು ನಮಗೇಕೆ | ಶಿಲ್ಪ ಬಿ

ಆರಂಭ ಅಂತಿಮಗಳ ಕುತೂಹಲವು ನಮಗೇಕೆ | ಶಿಲ್ಪ ಬಿ

ಸರ್ವ ಜೀವ ಸಂಕುಲವನ್ನು ಪೋಷಿಸುವ
ತಾಯಿ ವಸುಧಾಳ ಮಡಿಲಿನ ಮೇಲೆಲ್ಲ,
ಮಂದಹಾಸದ ಸಿಹಿ ಹನಿಗಳನ್ನು
ಚೆಲ್ಲುವ ಮಗು ಮನಸ್ಸಿನ ಮಳೆರಾಯನ
ಅಕ್ಕರೆ ಸಂಬಂಧಕ್ಕೆ ಕಾರಣವಾದ ಸ್ವರ ಯಾವುದು?

ದಿನಕರನ ಕೋಪಕ್ಕೆ ಸೋತು ನಿಂತ
ಮರಳಿನ ಮನಸ್ಸಿನ ಮೇಲೆಲ್ಲ
ಮುಗುಳು ನಗೆಯ ಹೂ ಮಳೆಯನ್ನು ಸುರಿಸುವ
ಸಾಗರದ ಅಲೆಗಳ
ಅನುರಾಗದ ಅನುಭಂದಕ್ಕೆ ಕಾರಣವಾದ
ದನಿ ಯಾವುದು?

ಹೂ ಜೇನಿನ ಮಧುರ ಬಂದಕ್ಕೆ
ಕಾರಣವಾದ ಮಧುರ ಮಾತಾವುದು?
ಗುಡುಗು ಸಿಡಿಲು ಒಂದಾಗಿ ಬಾಳುವ
ಸುಂದರ ಬದುಕಿಗೆ ಕಾರಣವಾದ ನುಡಿ ಯಾವುದು?

ಸಕಲ ಜಲಾಚರಗಳನು ಪೋಷಿಸುವ
ಜಲದೇವಿಯ ತಾಯಿ ತನಕೆ ಕಾರಣವಾದ ಶಬ್ದ ಯಾವುದು?
ವಾತ್ಸಲ್ಯದ ಅಪ್ಪುಗೆಯಲ್ಲಿ
ಹಕ್ಕಿಗಳನು ಹಾರಾಡಿಸುವ
ಮಧುಮಾಸದ ತುಸುಗಾಳಿಯ ಮಮತೆಗೆ
ಕಾರಣವಾದ ಪದ ಯಾವುದು?

ಬಾಂಧವ್ಯಗಳ ಬೊಗಸೆಗೆಲ್ಲ
ನಗೆ ಮೌನದಲಿ
ಸಿಹಿ ಜೇನನ್ನು ಚೆಲ್ಲುವ
ಮಗು ಮನಸ್ಸಿನ ಸುಂದರ ಸರೋವರದಲ್ಲಿ
ಭಾವನೆಗಳನ್ನು ಮರೆ ಮಾಡುವ
ಮಾತುಗಳ ಆಗಮನವೇಕೆ?

ಸ್ನೇಹ ಪ್ರೀತಿ ಅನುಬಂಧಗಳ ಆಗಸದಲ್ಲಿ
ಮಗು ಮನಸ್ಸಿನ ಮೇಘಗಳಾಗಿ
ಸುಂದರ ಮೌನವ ಹೊತ್ತು
ಆಗಸವನು ಸವಿಯುವ ಸಂಚಾರಿಯಾಗಿ
ತೇಲಾಡುವ ಬದಲು
ಮಾತುಗಳ ಸುರಿಮಳೆಯಲಿ
ಆರಂಭ, ಅಂತಿಮಗಳ ಕುತೂಹಲವು
ನಮಗೇಕೆ?

ಶಿಲ್ಪ. ಬಿ
ಪ್ರಥಮ ಪಿಯುಸಿ
ಶೇಷಾದ್ರಿಪುರಂ ಪದವಿಪೂರ್ವ ಕಾಲೇಜು

Prev Post

ಮಗುವಿಗೂ ತನ್ನದೇ ಆದ ಬದುಕಿದೆ, ಬದುಕಲು ಬಿಡಿ | ಸಿಂಚನ ಜೈನ್

Next Post

ಸಾಂಪ್ರದಾಯಿಕ ವಿಶಿಷ್ಟ ಕಲೆ ಕಂಸಾಳೆ | ರಂಜಿತ ಹೆಚ್. ಕೆ

post-bars

Leave a Comment

Related post