Back To Top

 ಅವಳು | ಬಿ.ಎಂ ಪಾಟೀಲ್

ಅವಳು | ಬಿ.ಎಂ ಪಾಟೀಲ್

ನನ್ನಷ್ಟಕ್ಕೆ ನಾನು ಇದ್ದರೂ ನನ್ನ ಜೊತೆ ಬರುವವಳೂ ಅವಳು……
ನನ್ನಷ್ಟಕ್ಕೆ ನಾನು ಇದ್ದರೂ ಸುಮ್ಮನೆ ಮುಡುವ ಮುಗುಳ್ನಗೆ ಅವಳೇ ಕಾರಣ ಎಂದು ಹೇಳಲೇ ,
ನನ್ನಷ್ಟಕ್ಕೆ ನನ್ನ ಮನಸ್ಸು ಸುಮ್ಮನಿದ್ದರೆ ಬರುವ ಆಂತಕ್ಕಕೆ ಕಾರಣ ಅವಳೇ ಎಂದು ಹೇಳಲೇ
ನನ್ನಷ್ಟಕ್ಕೆ ನಾನು ಮೌನವಾಗಿ ಇದ್ದರೆ ಆ ಮೌನಕ್ಕೆ ಅವಳೇ ಕಾರಣ ಎಂದು ಹೇಳಲೇ
ನನ್ನಷ್ಟಕ್ಕೆ ನಾನು ಇದ್ದರೂ ಮೂಡಿಸುವ ಪ್ರೇಮದ ಭಾವನೆಗಳ ಕಾರಣರ್ಕತೆ ಎನ್ನಲೇ
ನನ್ನಷ್ಟಕ್ಕೆ ನಾನು ಏಕಾಗ್ರತೆಯನ್ನು ಆವರಿಸಿದರೆ
ನನ್ನೆಲ್ಲಾ ಏಕಾಗ್ರತೆಯ ತನ್ನತ ಸೆಳೆದವಳೂ ಎಂದು ಹೇಳಲೇ
ನನ್ನಷ್ಟಕ್ಕೆ ನಾನು ಶ್ಯಾಮನಂತೆ ಇದ್ದರೂ ನನ್ನ ಮನ ಕಲಕುವ ರಾಧೆ ಎಂದು ಹೇಳಲೇ
ನನ್ನಷ್ಟಕ್ಕೆ ನಾನು ಬಾಯಿ ಬಡಕನಂತೆ ಕಂಡರೆ ನಾನು ಮುಚ್ಚಿಟ ರಹಸ್ಯ ಅವಳೇ ಎಂದು ಹೇಳಲೇ
ನನ್ನಷ್ಟಕ್ಕೆ ನಾನು ಬರೆಯುವ ಸಾಲುಗಳು ಅದರ ಹಿಂದಿನ ಅದ್ಭುತ ಅವಳೇ ಎಂದು ಹೇಳಲೇ……

-ಬಿ.ಎಂ ಪಾಟೀಲ್

Prev Post

ನಾನು ನನ್ನದೆಂಬ ಅಹಂ ನನ್ನೊಳಹೊಕ್ಕಾಗ  | ಲತಾ ಚೆಂಡೆಡ್ಕ ಪಿ  

Next Post

ಕನ್ನಡತಿ…❤️💛 | ಪೂಜಾ ಹಣಮಂತ ಸುಣಗಾರ

post-bars

Leave a Comment

Related post