ನೇಸರನ ಚಿತ್ತಾರಕ್ಕೆ ಆಗಸವೇ ಕ್ಯಾನ್ವಾಸ್ | ಈಶ ಎಸ್ ಪಿ
ವಿಜ್ಞಾನದ ಪ್ರಕಾರ ಬೆಳಕಿನ ವಕ್ರೀಭವನ ಕ್ರೀಯೆಯಿಂದ ಸೂರ್ಯ ರಶ್ಮಿ ನೀರಿನ ಹನಿಗಳನ್ನು ಪ್ರವೇಶಿಸಿ ಸಾಗುವಾಗ ಸಪ್ತ ವರ್ಣಗಳನು ಹೊರಹೊಮ್ಮಿಸುತ್ತದೆ. ಇದು ಐದು ಆರನೇ ತರಗತಿಯಲ್ಲಿ ಪಠ್ಯದಲ್ಲಿ ನಾವು ಓದಿರುತ್ತೇವೆ. ಆದರೆ, ಆಕಾಶದಲ್ಲಿ ಕಾಮನಬಿಲ್ಲು ಮೂಡಿದಾಗಲೆಲ್ಲಾ ಅಚ್ಚರಿ ಮತ್ತು ಬೆರಗುಗಣ್ಣಿನ ನೋಡುತ್ತೇವೆ. ಇದು ಕಾಮನಬಿಲ್ಲಿನ ಕಥೆ ಆದರೆ ಇನ್ನು ಸೂರ್ಯಾಸ್ತ ಮತ್ತು ಸೂರ್ಯೋದಯದಲ್ಲಿ ದಿನಾಲೂ ಆಗಸ ಸಾಗರದ ನೀರಿಗೆ ಪ್ರತಿಫಲಿಸಿ ಕೆಂಪು ಬಣ್ಣಕ್ಕೆ ತಿರುಗತ್ತದೆ. ಇದು ನೇಸರ ಆಗಸವನ್ನೇ ಕ್ಯಾನ್ವಾಸ್ ಮಾಡಿಕೊಂಡು ಚಿತ್ರ ಬಿಡಿಸಿದಂತೆ ಕಾಣುತ್ತದೆ.
ವಿಜಯ ವಿಠ್ಠಲ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ವಿದ್ಯಾರ್ಥಿ ಈಶ ಎಸ್ ಪಿ ಸೆರೆಹಿಡಿದಿರುವ ದೃಶ್ಯ ಇಲ್ಲಿದೆ..