ಕತ್ತಲ ಸೀಳಿ ಬೆಳಕಿನ ಬೆಡಗು ಹೊತ್ತು ತರುತ್ತಿರುವ ನೇಸರ | ಶರಣ್
1) ಕತ್ತಲ ಸೀಳಿ ಬೆಳಕಿನ ಬೆಡಗು ಹೊತ್ತು ತರುತ್ತಿರುವ ನೇಸರ
ಮೂಡುವನು ರವಿ ಮೂಡುವನು; ಕತ್ತಲೊಡನೆ ಜಗಳಾಡುವನು;
ಮೂಡಣ ರಂಗಸ್ಥಳದಲಿ ನೆತ್ತರು ಮಾಡುವನು, ಕುಣಿದಾಡುವನು.
ಬೆಳಕಿನ ಕಣ್ಣುಗಳಿಂದಾ ಸೂರ್ಯನು; ನೋಡುವನು, ಬಿಸಿಲೂಡುವನು;
ಚಿಳಿಪಿಳಿಹಾಡನು ಹಾಡಿಸಿ ಹಕ್ಕಿಯ, ಗೂಡಿನ ಹೊರ ಹೊರ ದೂಡುವನು….
ಹೀಗೆ ಮುಂದುವರೆಯುತ್ತದೆ ಪಂಜೆ ಮಂಗೇಶರಾಯರ ಉದಯರಾಗ ಕವಿತೆ.. ಇದಕ್ಕೆ ಪ್ರತಿಫಲಿತ ಚಿತ್ರ ನಿಮ್ಮ ಮುಂದೆ.
2) ಬಾಲ್ಯದ ಚೆಂಡು ದಾಂಡಿನ ಆಟದ ನನಕೆ
ಕ್ರಿಕೆಟ್‌ನ್ನು ಭಾರತದಲ್ಲಿ ಬರಿ ಆಟವಾಗಿಲ್ಲ ಒಂದು ಧರ್ಮವಾಗಿದೆ ಎಂದು ಹೇಳುವವರಿದ್ದಾರೆ. ಇದು ಸತ್ಯ ಕೂಡ. ಭಾರತದಲ್ಲಿ ಈ ಚೆಂಡು ದಾಂಡಿನ ಆಟಕ್ಕೆ ಮರುಳಾಗದವರಿಲ್ಲ. ಶಾಲಾ ರಜಾ ದಿನಗಳ ಬಾಲ್ಯ ಟೆನಿಸ್ ಬಾಲ್ ಮತ್ತು ಮರದ ಚಪ್ಪಟೆ ಹಲಗೆಯಲ್ಲಿ ಆಡಿರುವುದು ಎಲ್ಲರ ನೆನಪಿನ ಪುಟದ ಒಂದು ಚಿತ್ರ. ನಗರಗಳಲ್ಲಿ ಗಲ್ಲಿ ಕ್ರಿಕೆಟ್ ಆದರೆ, ಹಳ್ಳಿಯಲ್ಲಿ ಗದ್ದೆ ಕ್ರಿಕೆಟ್ ಒಟ್ಟಿನಲ್ಲಿ ನಿಮ್ಮ ಬಾಲ್ಯದ ಆ ದಿನಗಳು ಇಲ್ಲಿ ಮೆಲುಕಾಗುತ್ತದೆ..
ವಿಜಯನಗರ ಸರ್ಕಾರಿ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿ ಶರಣ್ ಅವರ ಕ್ಯಾಮೆರಾ ಕಣ್ಣಲ್ಲಿ ಮೂಡಿಬಂದ ಚಿತ್ರಗಳಿವು..