ದಿನದ ಕೂಳ ಹುಡುಕಿ ಬೀದಿ ವ್ಯಾಪಾರ | ಆನಂದ್ ಕುಮಾರ್
ನಗರದ ಬದುಕದೆಷ್ಟು ವಿಚಿತ್ರ ಎನಿಸುತ್ತದೆ. ನಿತ್ಯ ದುಡಿಮೆ, ತಿಂಗಳ ದುಡಿಮೆ, ಕ್ಷಣದ ದುಡಿಮೆ ಹೀಗೆ ಭಿನ್ನ ರೀತಿಯಲ್ಲಿ ಕೂಳು ಹುಟ್ಟಿಸಿಕೊಳ್ಳುವ ಜನ ಇಲ್ಲಿ ಕಾಣಸಿಗುತ್ತಾರೆ. ಇದರಲ್ಲಿ ಕೆಲವರದ್ದು ಕಾಣಲು ವರ್ಣಮಯ ಬದುಕು, ಆದರೆ ನಿಜದಲ್ಲಿ ಕಪ್ಪು- ಬಿಳುಪಾಗಿರುತ್ತದೆ. ಇಂತಹದರಲ್ಲಿ ಬೀದಿ ವ್ಯಾಪಾರಿಗಳು ಬಹುತೇಕ ನಿರಾಕರಣೆಗಳ ನಡುವೆಯೂ ನಗುನಗುತ್ತಲೇ ತಮ್ಮ ಮಾರಾಟವನ್ನು ಮುಂದುವರೆಸುತ್ತಾರೆ. ದಿನದ ಕೂಳಿಗೆ ತಕ್ಕ ವ್ಯಾಪಾರ ಆದರೂ ಸಾಕು ಸುಖದ ನಿದ್ದೆಗೆ ಜಾರುತ್ತಾರೆ.
ಮಹಾರಾಜ ಸಂಜೆ ಕಾಲೇಜು ಮೈಸೂರಿನ ವಿದ್ಯಾರ್ಥಿ ಆನಂದ್ ಕುಮಾರ್ ಅವರ ಕ್ಯಾಮರಾ ಲೆನ್ಸ್ ಸೆರೆ ಹಿಡಿದಿರುವ ಮೆಟ್ರೋ ಮಾರ್ಗದಡಿಯ ಬಲೂನ್ ವ್ಯಾಪಾರಿಯ ಫೋಟೋ ನಿಮಗಾಗಿ..