ಎಷ್ಟು ಕಷ್ಟವೋ ಹೊಂದಾಣಿಕೆ ಎಂಬುದು | ಕಲಾನ್ವಿತ ಜೈನ್ ಕೆರ್ವಾಶೆ
‘ಹೊಂದಿಕೆ ಎಂಬುದು ಎಷ್ಟೋ ಕಷ್ಟವು ನಾಲ್ಕು ದಿನದ ಈ ಬದುಕಿನಲಿʼ ಇದು ಜಿ. ಎಸ್. ಶಿವರುದ್ರಪ್ಪನವರ ಕವನದ ಸಾಲುಗಳು. ಇತ್ತೀಚಿನ ದಿನಗಳಲ್ಲಿ ಹೊಂದಾಣಿಕೆ ಎನ್ನುವುದು ಎಷ್ಟು ಕಷ್ಟ ಆಗಿಬಿಟ್ಟಿದೆ ಅಲ್ವಾ. ಮನುಷ್ಯ ಸಂಘ ಜೀವಿ. ಎಲ್ಲರೊಂದಿಗೆ ಹೊಂದಿಕೊಂಡು ಬಾಳುವುದು ಕಷ್ಟ ಸಾಧ್ಯ. ಆದರೆ ನಮ್ಮಲಿರುವ ಅಹಂಕಾರದ ಭಾವ ನಮ್ಮನ್ನು ವಿಭಿನ್ನ ರೀತಿಯಲ್ಲಿ ಬದುಕಲು ಬಿಡುತ್ತದೆ. ಸಾಮಾನ್ಯವಾಗಿ ನಾವೇ ಮಾತಾಡಿ ಕೊಳ್ಳುವುದುಂಟು ಎಲ್ಲದಕ್ಕೂ ನಾವೇ ಅಡ್ಜೆಸ್ಟ್ ಆಗ್ಬೇಕಾ ಎಂದು? ಹೌದು ಹೊಂದಿಕೊಂಡು ಹೋಗದಿದ್ದರೆ ಬದುಕು ಸುಂದರವಾಗಿ ಹೋಗಲು ಹೇಗೆ ಸಾಧ್ಯ?.
ಹಿಂದಿನ ಕಾಲದಲ್ಲಿ ಎಲ್ಲರ ಮನೆಗಳಲ್ಲೂ ಕೂಡು ಕುಟುಂಬವನ್ನು ನೋಡುತ್ತಿದ್ದೇವು, ಆದರೆ ಅದೇ ಇತ್ತೀಚಿನ ದಿನಗಳಲ್ಲಿ ನಾವು ಕೂಡು ಕುಟುಂಬವನ್ನು ನೋಡುವುದೇ ತುಂಬಾ ವಿರಳ, ಯಾಕೆ ಅದಕ್ಕೆ ಮುಖ್ಯ ಕಾರಣ ಹೊಂದಿಕೊಳ್ಳಲು ಸಾಧ್ಯವಿಲ್ಲವೆಂದು. ಸಾಮರಸ್ಯದ ಬದುಕನ್ನು ನಿರ್ವಹಿಸಬೇಕಾದರೆ ನಾವು ಹೊಂದಿಕೊಲ್ಲಲೇ ಬೇಕು. ಇತ್ತೀಚಿಗಷ್ಟೇ ನಮ್ಮ ಸಂಬಧಿಕರೊಬ್ಬರೂ ಹೇಳ್ತ ಇದ್ದರು ಅವರು ಇಬ್ಬರು ಮಕ್ಕಳು ಹಾಸ್ಟೆಲ್‌ನಲ್ಲಿ ಇರುತ್ತಾರೆ.
ಆದರೆ ಅವರ ಕಿರಿ ಮಗಳು ಅಲ್ಲಿ ಎಡ್ಜಸ್ಟ್ ಆಗದೇ ಕಾಲೇಜೆ ಬಿಟ್ಟು ಮನೆಗೆ ಬಂದು ಕುತ್ಕೊಂಡಿದ್ದಾಳೆ ಅಂತ, ಅವರು ಮಾತು ನಿಲ್ಲಿಸಿದ ಕೂಡಲೇ ನಾನು ನಿಮ್ಮ ಹಿರಿ ಮಗಳು ಎನ್ನುವಷ್ಟರಲ್ಲೇ ಆಕೆಯಂತು ಕಷ್ಟನೋ ಸುಖನೋ ಹೇಗೋ ಹೋಂದಿಕೊಂಡು ಇದ್ದಾಳೆ ಎಂದರು. ಇಂತಹ ಸನ್ನಿವೇಶಗಳು ಪ್ರಪಂಚದಲ್ಲಿ ಆಗ್ತಾನೆ ಇದೆ ಇದ್ಕೆಲ್ಲ ಕಾರಣ ಹೊಂದಾಣಿಕೆ. ಇಂತಹ ಸಣ್ಣ ಪುಟ್ಟ ವಿಚಾರಗಳಿಗು ನಾವು ಕುಂಟು ನೆಪಗಳನ್ನು ಹಿಡಿದುಕೊಂಡರೆ ಜೀವನ ಸಾಗಿಸೋದು ಕಷ್ಟ.
ಅಮ್ಮ ಯಾವಾಗ್ಲೂ ನನಗೆ ಹೇಳೊದೊಂಟು ಚಿಕ್ಕ ವಯಸ್ಸಿನಲ್ಲಿ ಇರಬೇಕಾದರೆ, ಹೋಮ್ ವರ್ಕ್ ಮಾಡ್ಬೇಕಾ ? ಎಂದು ಕೇಳಿದಾಗ ಅಮ್ಮ ಯಾವಾಗ್ಲೂ ಹೇಳ್ತಾಇದ್ದಳು, ಇವತ್ತಿನ ಕೆಲಸವನ್ನು ಇಂದೇ ಮಾಡು. ನೀನು ಹೋಮ್ ವರ್ಕ್ ಮಾಡಿದರೆ ನಾಳೆ ಟೀಚರ್ ನಿನ್ನನ್ನು ಪ್ರಶಂಸಿಸುತ್ತಾರೆ ಎಂದು. ಆಗಾ ಆಗುವಂತಹ ಖುಷಿ ಅದನ್ನು ಸ್ವೀಕರಿಸುವ ಮನೋಭಾವದಂತೆ ನಾವು ದೊಡ್ಡವರಾದಂತೆ ಹಿರಿಯರು ಹೇಳುವ ಮಾತನ್ನು ಆಲಿಸುವುದು ಯಾಕೆ ಸಾದ್ಯ ಇಲ್ಲಾ.
ನಾವು ಅನುಸರಿಸಿಕೊಂಡು ಹೋದರೆ ನಮ್ಮೋಂದಿಗೆ ಸುತ್ತಮುತ್ತಲಿನವರು ನಮ್ಮನ್ನು ಅನುಸರಿಸುತ್ತಾರೆ. ಅದು ಸಾಮರಸ್ಯದ ಬದುಕಿಗೂ ಕಾರಣವಾಗುತ್ತದೆ. ಹೊಂದಿಕೊಂಡು ಹೋಗುವುದು ಒಂದು ರೀತಿಯಲ್ಲಿ ಎಮೋಶನಲ್ ಇಂಟೆಲಿಜೆನ್ಸ್ ಇದ್ದ ಹಾಗೆ. ಹೊಂದಿಕೊಂಡು ಉತ್ತಮವಾಗಿ ಜೀವನ ಸಾಗಿಸೋದು ನಮ್ಮ ಕೈಯಲ್ಲಿ ಇದೆ.
ಕಲಾನ್ವಿತ ಜೈನ್ ಕೆರ್ವಾಶೆ
ಎಸ್. ಡಿ. ಎಂ ಕಾಲೇಜು, ಉಜಿರೆ