Back To Top

 ತಿಳಿ ಹಾಸ್ಯದ ಪರಿಸರ ಪಾಠ ಕಾರ್ವಾಲೋ | ನಮಿತಾ ಸಾಲಿಯಾನ್

ತಿಳಿ ಹಾಸ್ಯದ ಪರಿಸರ ಪಾಠ ಕಾರ್ವಾಲೋ | ನಮಿತಾ ಸಾಲಿಯಾನ್

ನೆಚ್ಚಿನ ಬರಹಗಾರ ಪೂರ್ಣಚಂದ್ರ ತೇಜಸ್ವಿ ಕಥೆ ಹೇಳುತ್ತಾ ಓದುಗರನ್ನು ಒಂದು ಸಾಹಸೀ ಯಾನಕ್ಕೆ ಕರೆದೊಯ್ಯುತ್ತಾರೆ. ಸಾಹಸೀ ಪಯಣದ ಕಥೆಯೇ ಕರ್ವಾಲೋ. ಈ ಪುಸ್ತಕದಲ್ಲಿ ತೇಜಸ್ವಿಯವರು ಅವರ ದಿನಚರಿಯ ಪುಟದಂತಿದೆ. ತಾವು ಕಂಡು ಅನುಭವಿಸಿದ್ದನ್ನ ಓದುಗನ ಕಣ್ಣಿನ ಮುಂದೆ ಹಾಯ್ದು ಹೋಗುವಂತೆ ಮಾಡಿದ್ದಾರೆ. ಅಲ್ಲಿ ಕಾಣಸಿಗುವ ಹೂಗಳು, ಇತರೆ ಪ್ರಾಣಿ ಪಕ್ಷಿಗಳು ಹಾಗೂ ಅಲ್ಲಿನ ಜನ ಜೀವನದ ವಿವರಿಸಿದ್ದಾರೆ.

ಈ ಕಥೆಯಲ್ಲಿ ತೇಜಸ್ವಿ ಅವರು ನಿರೂಪಕನ ಪಾತ್ರ ವಹಿಸಿದ್ದಾರೆ. ಅವರ ದಿನಚರಿಯ ಪಾತ್ರಗಳಾದ ಮದುವೆ ಮಂದಣ್ಣ, ಕೀಟ ವಿಜ್ಞಾನ ಕಾರ್ವಲೂ, ಛಾಯಾಗ್ರಾಹಕ ಪ್ರಭಾಕರ, ಬಿರಿಯಾನಿ ಕರಿಯಪ್ಪ ನಮ್ಮನ್ನು ಮಾತನಾಡಿಸುತ್ತಾರೆ. ಆ ರೀತಿ ಬರವಣಿಗೆ ಸಾಗಿದೆ. ಅವರ ನಿಲುಕಿಗೆ ಸಿಕ್ಕ ಪರಿಸರ ಜ್ಞಾನವನ್ನು ಈ ಪಾತ್ರಗಳ ಮೂಲಕ ಓದುಗನಿಗೆ ಉಣಬಡಿಸಿದ್ದಾರೆ.

ಈ ಪುಸ್ತಕ ಓದುತ್ತಿರಲು ಎಷ್ಟೊಂದು ದೃಷ್ಟಾಂತಗಳು ನನ್ನ ಮನದಲಿ ನಗುವಂತೆ ಮಾಡಿದೆ. ಮಂದಣ್ಣನ ಮ್ಯಾರೇಜು ಪ್ರಸಂಗ, ಬಿರಿಯಾನಿ ಕರಿಯಪ್ಪನ ಶಿಕಾರಿ ಕಾಂಡ, ಕಂಡ ಪ್ರಾಣಿಯನ್ನೆಲ್ಲ ಹೊಡೆದು ತಿನ್ನುವ ಚಪಲ, ಮನೆ ಕೆಲಸಗಾರ ಪ್ಯಾರನ ಮಂದ ಬುದ್ಧಿ, ಈ ಪ್ರದೇಶದ ಬೈಗುಳ ಮುಂತಾದವು. ಉದಾಹರಣೆಗೆ ಮಂದಣ್ಣನ ಮನೆಯಲ್ಲಿ ಹಂದಿಮಾಂಸದ ಅಡುಗೆ ಮಾಡಲು ಬೆಳಿಗ್ಗೆ ಹಂದಿಗಳನ್ನು ಎಳೆದುಕೊಂಡು ಹೋಗುತ್ತಿರಲು ಅವುಗಳ ಅರ್ಥನಾದ ಕೇಳಿ ಎಚ್ಚೆತ್ತು ಕೊಳ್ಳುವ ಸಂದರ್ಭ ಇನ್ನೂ ಮನಸಲ್ಲಿ ನಗು ಮೂಡಿಸುತ್ತದೆ.

ಪ್ರಕೃತಿ ಮತ್ತು ಮಲೆನಾಡು ಇವುಗಳ ಬಗ್ಗೆ ತೇಜಸ್ವಿ ಅವರ ನಿಪುಣತೆ ಇಲ್ಲಿ ವ್ಯಕ್ತವಾಗುತ್ತದೆ. ಎಷ್ಟೊಂದ ವಿಷಯಗಳ ಬಗ್ಗೆ ಕುತೂಹಲಕ್ಕೆ ಕೆರಳಿಸಿ ಅವುಗಳ ಕುರಿತು ನಾ ಹುಡುಕಿದ್ದು ನಿಜವೇ ಎನ್ನುವ ಪ್ರಶ್ನೆ ಬರುತ್ತದೆ. ಗುರಗಿ ಹಳದಿಂದ 8 ವರ್ಷಕ್ಕೊಮ್ಮೆ ಅತ್ಯಧಿಕ ಪ್ರಮಾಣದಲ್ಲಿ ಜೇನು, ಜೇನು ಸಾಕಾಣಿಕೆ ಹಲವಾರು ವಿಧಾನಗಳು, ಪೆಟ್ಟಿಗೆ ಕಟ್ಟುವುದು ಹೀಗೇ. ಹೆಣ್ಣು ಹಕ್ಕಿ ಮೊಟ್ಟೆಗಳಿಗೆ ಕಾವು ಕೊಡುವುದು, ಗಂಡು ಹಕ್ಕಿ ಊಟ ತರಲು ಹೋಗಿ ಮರಳದಿದ್ದರೆ ಪೊಟರೆಯಲ್ಲಿದ್ದವು ಸಾವನ್ನಪ್ಪುವುದು ಇಂತಹ ಸೂಕ್ಷ್ಮ ವಿಚಾರಗಳನ್ನು ತಿಳಿಸುತ್ತದೆ.

ಕುತೂಹಲವೇ ಜ್ಞಾನೋದಯಕ್ಕೆ ಹಾದಿ ಎನ್ನುವ ತತ್ವವನ್ನು ಪರೋಕ್ಷವಾಗಿ ಓದುಗರ ಮುಂದಿಡುತ್ತಾರೆ. ಕಾಡಿನ ಕಷ್ಟ, ಬೇಸಾಯದಿಂದ ಉಂಟಾದ ನಷ್ಟ ಕೀಟಗಳೆಂದರೆ ತೊಂದರೆ ಎಂದೇ ತಿಳಿದಿದ್ದ ತೇಜಸ್ವಿಯವರು ಕರ್ವಾಲೊ ಜೊತೆ ಸೇರಿ ಹಾರುವ ಓತಿಯನ್ನು ಹುಡುಕ ಹೊರಟಾಗ ಅದರಲ್ಲಾಗುವ ಬದಲಾವಣೆಗಳು ಅವರ ಯೋಚನೆಯ ದಿಕ್ಕನ್ನೇ ಬದಲಾಯಿಸುತ್ತದೆ ಇದೆಲ್ಲವೂ ಅವರ ಕುತೂಹಲದ ಪ್ರತಿಫಲವೇ. ಒಟ್ಟಿನಲ್ಲಿ ಹಾಸ್ಯಲೇಪಿತ ತತ್ವಾಂಶಗಳು ಕುತೂಹಲ ಹುಟ್ಟಿಸುವಂತಹ ಅತ್ಯದ್ಭುತ ಕಥೆ ಕರ್ವಾಲೊ.

ನಮಿತಾ ಸಾಲಿಯಾನ್
ಪ್ರಥಮ ಎಮ್.ಸಿ.ಜೆ.
ಎಸ್.ಡಿ.ಎಂ. ಕಾಲೇಜು, ಉಜಿರೆ

Prev Post

ಬಾಲ್ಯ ಮರೆಯಲಾಗದ ಚಂದದ ಪಯಣ | ಭ್ರಮರಾಂಬಿಕ

Next Post

ಹಿಂದಿರುಗಿ ಬಾ | ಶಶಿಸ್ಕಾರ ನೇರಲಗುಡ್ಡ

post-bars

Leave a Comment

Related post