Back To Top

 ಶೂನ್ಯ | ದೀಪ್ತಿ. ಎಮ್‌

ಹೂಂ ಗುಟ್ಟದೆ ಇದ್ದ ಸಮಯ
ಆಸರೆಯು ಸಿಗದೇ ಹೋದಾಗ
ನಿನ್ನ ಕೈರುಚಿ ಬೇಕೆನಿಸಿದಾಗ
ನೀನು ಹತ್ತಿರ ಇಲ್ಲದೇ ಹೋದ ಕೆಲವು ಸಮಯ
ಎಲ್ಲವೂ ಶೂನ್ಯವೆನಿಸಿತು.

ಅಮ್ಮಾ … ಎನ್ನುವುದು
ಬೇಕೆಂದಾಗ ಮಾತ್ರ ಉಪಯೋಗಿಸುವ ಪದವಾಗದೆ,
ಗೋಚರಕ್ಕೆ ಬರದಾಗಲು ಬಳಕೆಗೆ ಬರುವ ಪದ.
ಎರಡಕ್ಷರದ ಈ ಪದ ಎಲ್ಲಾ ಪ್ರಶ್ನೆಗಳಿಗೂ ತೃಪ್ತಿ ಕೊಡಬಲ್ಲದು.

‘ನೀನು ನನ್ನನು ಬಿಟ್ಟು ಹೋಗಬೇಡ ‘ ಎಂದು ಅಮ್ಮ ಕರುಳಬಳ್ಳಿಗೆ ಹೇಳಿದರೆ,
ಆ ಅಮ್ಮನಿಗೇ ಅಮ್ಮನಾದಂತೆ ಅಲ್ಲವೇ?
ಆದರೆ ಅಮ್ಮನೇ ಬಿಟ್ಟು ದೂರ ಹೋದರೆ ಶೂನ್ಯ ಮಾತ್ರ .

ಬೆಳಕಿನ ಪ್ರಪಂಚದಲ್ಲಿ ರಾತ್ರಿ ವೇಳೆಗೂ ಅಮ್ಮ ಎಂದು ಕನವರಿಸುವಾಗ
‘ ಇಲ್ಲೇ ಇದ್ದೇನೆ ‘ ಎಂದು ಹೇಳುವ ಮೂಲಕ ಬೆಳಕಾಗುವವಳು.
ಉತ್ತರ ಬರದೇ ಹೋದರೆ ಮೈತಟ್ಟಿ ನಿದ್ರೆಗೆ ಜಾರಿಸದೆ ಹೋದರೆ
ಮತ್ತದೇ ಕತ್ತಲಲ್ಲಿ ಒಬ್ಬಂಟಿಯಾಗುವುದು ಶೂನ್ಯವೆನಿಸುವುದು.

ದೀಪ್ತಿ. ಎಮ್‌
ದ್ವಿತೀಯ ಸ್ನಾತಕೋತ್ತರ ಅಧ್ಯಯನ
ಸರಕಾರಿ ಕಾಲೇಜು, ಕಾಸರಗೋಡು

Prev Post

ಕಿಟಕಿ ಆಚೆಯ ನಿಗೂಢ ನೋಟ | ಶಿಲ್ಪ ಬಿ

Next Post

ನಿರಾಕರಿಸಿದೆನೆಂದು ನಿರಾಸೆಯಾಗಬೇಡಾ ಚೆಲುವೆ | ಸಿದ್ಧಾರೂಢ ಎಸ್.ಜಿ.

post-bars

Leave a Comment

Related post