Back To Top

 ನಿಮ್ಮ ಪ್ರೀತಿ ಸುಳ್ಳಲ್ಲ |  ಏಂಜಲ್ ರಾಣಿ

ನಿಮ್ಮ ಪ್ರೀತಿ ಸುಳ್ಳಲ್ಲ | ಏಂಜಲ್ ರಾಣಿ

ಪ್ರೀತಿಯ ಆರಂಭಕ್ಕೆ ಕಾರಣ ಕಣ್ಣಿನ ನೋಟ
ಮೈ ಮರೆತಾಗ ಎರಡು ಮನಸುಗಳ ಓಟ
ನನಗೆ ನೀನು ನಿನಗೆ ನಾನು
ಎಂಬ ಪ್ರೀತಿಯ ತುಂಟಾಟ

ಪ್ರೀತಿ ಮಾಡುವುದು ಒಂದು ಕಲೆ
ಕೆಲವರು ಮಾತ್ರ ಅದಕ್ಕೆ ಕಟ್ಟುವರು ಬೆಲೆ
ಪ್ರೀತಿ ಒಂದು ಅಮೃತ ಘಳಿಗೆ
ಅದೃಷ್ಟ ಬರುವುದು ಆ ಜೋಡಿಗಳಿಗೆ

ಅವಳಿಗೆ ಜೊತೆ ಇರಬೇಕು
ಸದಾ ಜೊತೆಗಾರ
ಇವನ ಪ್ರೀತಿಯು ಅಪಾರ
ಅವಳ ಖುಷಿಗೆ ಅವನೇ ಸರದಾರ

ಅವನ ಪ್ರೀತಿಯಲ್ಲಿ ಅವಳು ಅರಳಿದಳು
ಅವನ ಪ್ರೀತಿಗೆ ಸುಂದರ ಸಾಕ್ಷಿಯಾದಳು

ನಿಮ್ಮ ಪ್ರೀತಿಯು ಸುಳ್ಳಲ್ಲ
ನಿಮ್ಮ ಪ್ರೀತಿಯಲ್ಲಿ ಮೋಸವಿಲ್ಲ
ಅವಳ ಪ್ರೀತಿ ಅವನನ್ನು
ಕಾಡದೆ ಬಿಡುವುದಿಲ್ಲ.

ಏಂಜಲ್ ರಾಣಿ
ವಿಜ್ಞಾನ ವಿಭಾಗದ ವಿದ್ಯಾರ್ಥಿ
ಕ್ರಿಸ್ತು ಜಯಂತಿ ಕಾಲೇಜು

Prev Post

ವಿದ್ಯಾರ್ಥಿಗಳು ಜಾನಪದ ಕಲೆಗಳನ್ನು ಉಳಿಸಬೇಕು : ಮಲ್ಲಿಕಾರ್ಜುನ್

Next Post

ಬಾಲ್ಯ ಮರೆಯಲಾಗದ ಚಂದದ ಪಯಣ | ಭ್ರಮರಾಂಬಿಕ

post-bars

Leave a Comment

Related post