Back To Top

 ಅಪ್ಪ | ಭ್ರಮರಾಂಬಿಕ

ನನ್ನ ಹೃದಯದ ಗರ್ಭ ಗುಡಿಯಲ್ಲಿ ಹಚ್ಚಿರುವೆ ನಿನಗಾಗಿ ಒಂದು ಹಣತೆ
ಆ ಗರ್ಭ ಗುಡಿಯಲ್ಲಿ ನೀನು ದೇವರಾಗಿ ಕುಳಿತೆ
ಹೇಗೆ ವರ್ಣಿಸಲಿ ಈ ಮಗಳ ಮೇಲಿನ ಮಮತೆ
ಬರೆದಷ್ಟು ಬಣ್ಣ ಪಡೆಯುತಿದೆ ಈ ನನ್ನಯ ಕವಿತೆ
ಗಾಂಭೀರ್ಯದಲ್ಲಿ ಅಡಗಿದೆ ನಿನ್ನ ಪ್ರೀತಿಯ ಕಂತೆ
ನೀ ಬಾನಂಗಳದಲ್ಲಿ ಪ್ರಕಾಶಿಸುವ ಭಾಸ್ಕರನಂತೆ
ನಿನ್ನಂತ ಅಪ್ಪನನ್ನು ಪಡೆದ ನಾನೇ ಪುಣ್ಯವಂತೆ
ಸ್ವಾರ್ಥವಿಲ್ಲದ ಸಾಲಿನಲ್ಲಿ ಅವನದು ಯಾವಗಲು ಮೊದಲ ಸಾಲು
ನನ್ನ ಸುಖವಾದ ಜೀವನದಲ್ಲಿ ಇದೆ ಅವನದೆ ಹೆಚ್ಚಿನ ಪಾಲು
ಅವನು ನಿಷ್ಕಲ್ಮಷ ಮನಸಿನ ಬೆಳ್ಮುಗಿಲ
ಮಗಳಿಗೆ ಅವನು ದೇವರಿಗಿಂತ ಮಿಗಿಲು
ಈ ಪುಟ್ಟ ಮಗಳಿಗೆ ಅವನೆ ಕಾವಲು
ಪ್ರೀತಿಸುವೆ ಅವನನ್ನು ನಾನು ಹಗಲಿರುಳು

ಭ್ರಮರಾಂಬಿಕ
ಬಿ.ಎ. ಅಂತಿಮ ವರ್ಷದ ಪದವಿ ವಿದ್ಯಾರ್ಥಿನಿ
ಸರಕಾರಿ ಪ್ರಥಮ ದರ್ಜೆ ಕಾಲೇಜು, ಧಾರವಾಡ

Prev Post

ಸಖ್ಯ ಮುಖ್ಯ | ಸಿದ್ಧಾರೂಢ ಎಸ್. ಜಿ

Next Post

ಮಗುವೇ ನೀ ಬದಲಾದೆ | ಶಿಲ್ಪ ಬಿ

post-bars

Leave a Comment

Related post