Back To Top

 ಕಲೆಗಳೆಲ್ಲ ಮನುಜನಿಂದ ಬಂದವೆ? | ಸಿದ್ಧಾರೂಢ ಎಸ್. ಜಿ.

ಕಲೆಗಳೆಲ್ಲ ಮನುಜನಿಂದ ಬಂದವೆ? | ಸಿದ್ಧಾರೂಢ ಎಸ್. ಜಿ.

ಕಲೆಗಳೆಲ್ಲವು ಮಾಯೆ
ಯಾವ ಮಾಯದಲಿ ಮನವ ಸೇರಿ
ಮುದಗೊಳಿಸುವವೋ ತಿಳಿಯದು
ಕಂಡ ಕ್ಷಣವೇ ಆಕರ್ಷಿಸಿ, ಆಹ್ವಾನಿಸಿ
ಹೃದಯಕಾತು ಕೊಳ್ವವು
ಜಂಜಡದಲಿ ಭ್ರಾಂತವಾದ ಮನಕೆ
ಶಾಂತಿಯ ನಿಯಮವು
ಮನುಜ ಕಾಂಬ ಕಲೆಗಳೆಲ್ಲ ಮನುಜನಿಂದ
ಬಂದವೆ?.. ಮಾಯಾಲೋಕದಿಂದಲೇ?
ಮನುಜ ಸೃಷ್ಟಿಯಾದರೆ ಆ ಅರಿಯಾಲಾಗದ ಸಮ್ಮೋಹನ ಎಲ್ಲಿಯದು?
ಮನುಜ ಮಾಯಾವಿಯೆ?

ಭಗವಂತ ಮಾಯಗಾರ ಎಂಬರು
ಮಾಯಗಾರ ಪರಮಾತ್ಮನಾದರೆ
ತನ್ನ ಕಲೆಯಿಂದ ಬ್ರಹ್ಮಾಂಡವನ್ನೇ ನಿಲ್ಲಿಸುವ,
ತಿರುಗಿಸುವ, ಚಿತ್ರಿಸುವ, ವರ್ಣಿಸುವ,
ನಿರ್ಮಿಸುವ, ಭ್ರಾಂತಗೊಳಿಸುವ, ಶಾಂತಗೊಳಿಸುವ ಸಾಮರ್ಥ್ಯವಿರುವ
ಕಲೆಗಾರನು ಮಾಯೆಯೊಳಗಿನ ಮಾಯಗಾರ ತ್ರಿಮೂರ್ತಿಯೇ ಅಲ್ಲವೇ …

ಸಿದ್ಧಾರೂಢ ಎಸ್. ಜಿ.
ಬಿ. ಎ. ಅಂತಿಮ ವರ್ಷದ ವಿದ್ಯಾರ್ಥಿ
ಎಸ್. ಆರ್. ಎಫ್. ಜಿ. ಸಿ. ಕಾಲೇಜು, ಬೆಳಗಾವಿ

Prev Post

ಶಿಲ್ಪ ಕಲೆಯಲ್ಲಿ ಇತಿಹಾಸದ ಪುಟಗಳು | ಸಂತೋಷ್ ಇರಕಸಂದ್ರ

Next Post

ಅವ್ವ ಕಟ್ಟಿದ ಹಿತ್ತಲ ಜಗತ್ತು | ದಾವಲಸಾಬ ನರಗುಂದ

post-bars

Leave a Comment

Related post