ಪ್ರೇಮ ಪದಗಳಿಲ್ಲದ ಬಂಧ | ಸೌಮ್ಯ ನೇತ್ರೇಕರ್
ಪ್ರೇಮ ಪದಗಳಿಲ್ಲದ ಬಂಧ
ಸುಂದರ ಕಾವ್ಯಾತ್ಮಕ ಅನುಬಂಧ
ಆನಂದ ಮನದಿ ತುಂಬಿ
ಪ್ರೀತಿಯ ರಸದೌತಣ ಬಡಿಸಿ
ಆವರಿಸಿದೆ ಜಗವ ಮರೆಸಿ
ಆ ಪ್ರೇಮ
ಜಗದಿ ಸಕಲ ಅಂದದಿ
ಮನಿಸಿ ಅದಮ್ಯ ಅನಂತದಿ
ಪರವಶವೀ ಮನ ಹಸಿರಿಗೆ
ಹೊಸ ಚಿಗುರಿಗೆ, ಉಲ್ಲಾಸ ನೀಡಿದ ಮೇಘ ವರುಣಕೆ
ಚಂಬೆಳಕಿನಲಿ ಚಿಲಿಪಿಲಿ ಇಂಚರ
ಗಾನಲಹರಿಗೆ ಸೋತಿದೆ ಚರಾಚರ
ಮೊಳೆಯೊಡೆವ ಮೊಗ್ಗು
ಬೆಳಗಿಗೆ ನೀಡಿದೆ ಸೊಬಗು
ಪಂಜರವಿಲ್ಲ ಈ ಚೆಲುವಿಗೆ
ಬಂಧವಿಲ್ಲ ಈ ಚೈತನ್ಯಕೆ
ಪ್ರೇಮದಿ
ಚಲಿಸುವ ಮೋಡವೆ
ಹಕ್ಕಿಗಳ ಪಯಣ ಮೂಡಿಸಿ
ಅನಂತವ ತೋರಿದೆ
ಪ್ರೇಮ
ಕಂಪನದಿ ಹರಿವ ನದಿಯ ದನಿಯಲಿ ಪಿಸುಗುಟ್ಟಿದೆ
ದುಂಬಿಗಳ ಪ್ರೇಮಿಸಿವೆ ಗಿಡಬಳ್ಳಿಯು ಸಂಸರ್ಗದಿ
ಆಲಂಗಿಸಿವೆ ಕಲ್ಲುಬಂಡೆಗಳು
ಅಲೆಗಳ ಸ್ನೇಹದಿ
ಅಬ್ದಿಯು ಶಾಂತವೀ ಪ್ರೇಮವಾದ್ಯದಿ
ಹಸಿರೋನ್ಮಾದದಿ
ಜಗವು ಸ್ವರ್ಗದಾಲಯ
ಬದುಕು ಧನ್ಯ ಈ ಪ್ರೇಮನೋಟದಿ
ಪ್ರೇಮ ಜೀವಿಸಿದೆ
ಅಂತರಾಳದಿ ಚೈತನ್ಯದಿ
ಸೌಮ್ಯ ನೇತ್ರೇಕರ್
ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ದಾಡೇಲಿ