Back To Top

 ಕ್ರಿಕೆಟ್‌ನಲ್ಲಿ ಗಮನ ಸೆಳೆದ ಕನ್ನಡತಿ ಶ್ರೇಯಾಂಕ | ನಿತಿನ್

ಕ್ರಿಕೆಟ್‌ನಲ್ಲಿ ಗಮನ ಸೆಳೆದ ಕನ್ನಡತಿ ಶ್ರೇಯಾಂಕ | ನಿತಿನ್

ಶ್ರೇಯಾಂಕ ಪಾಟೀಲ್ ಇತ್ತೀಚಿನ ದಿನಗಳಲ್ಲಿ ಕರ್ನಾಟಕದಲ್ಲಿ ಹೆಚ್ಚು ಜನಪ್ರಿಯ ಆಟಗಾರ್ತಿ ಎಂದು ಗುರುತಿಸಿಕೊಂಡಿದ್ದಾರೆ. ಇವರು ಕರ್ನಾಟಕ ಮಾತ್ರವಲ್ಲದೆ ದೇಶದ ಪರವಾಗಿಯೂ ಇವರ ಬೌಲಿಂಗ್ ಕೈಚಾಳಕದಿಂದ ಜನಪ್ರಿಯರಾಗಿದ್ದಾರೆ. ಇವರು ಬೆಂಗಳೂರಿನಲ್ಲಿ ಜನಿಸಿದರು ಇವರ ನಂಟು ಉತ್ತರ ಕರ್ನಾಟಕಕ್ಕು ಸೇರಿದೆ ಎಂದು ಹೇಳಬಹುದು. 31 ಜುಲೈ 2002 ರಂದು ಬೆಂಗಳೂರಿನಲ್ಲಿ ಜನಿಸಿದ ಇವರು ತಮ್ಮ ಸತತ ಪ್ರಯತ್ನ ಹಾಗೂ ಪರಿಶ್ರಮಗಳಿಂದ  ಕ್ರಿಕೆಟ್‌ನಲ್ಲಿ ತೊಡಗಿಸಿಕೊಂಡಿದ್ದಾರೆ.

ಅಕ್ಟೋಬರ್ 2013ರಲ್ಲಿ ಪಾಂಡಿಚೇರಿ ವಿರುದ್ಧ ಕರ್ನಾಟಕದ ಪರವಾಗಿ ಆಟವಾಡುವ ಮೂಲಕ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ ಇವರು ಆ ಪಂದ್ಯದಲ್ಲಿ ಎರಡು ಒವರ್‌ಗಳಿಂದ ಒಂದು ವಿಕೆಟ್ ಪಡೆದುಕೊಂಡು 21ರನ್ ನೀಡಿ ಅವರ ಮೊದಲ ಪಂದ್ಯವನ್ನು ನಿರ್ವಹಿಸಿದರು.

ನಂತರ 2022 -23ರ ವುಮೆನ್ಸ್ ಸೀನಿಯರ್ ಇಂಟರ್ ಝೋನಲ್ ಟಿ20 ಯಲ್ಲಿ ದಕ್ಷಿಣ ವಲಯದ ಪರವಾಗಿ ಪ್ರತಿನಿಧಿಸಿ ಈಶಾನ್ಯ ವಲಯದ ವಿರುದ್ಧ ನಾಲ್ಕು ವಿಕೆಟ್ ಪಡಿಯೋ ಮೂಲಕ ಇವರು ಹೆಚ್ಚು ಜನಪ್ರಿಯರಾದರು. ಜನವರಿ 2023ರಲ್ಲಿ ಅರುಣಾಚಲ ಪ್ರದೇಶ ವಿರುದ್ಧ 73 ರನ್ ಗಳೊಂದಿಗೆ ತಮ್ಮ ಮೊದಲ ಲಿಸ್ಟ್ ಎ ಆಫ್‌ಸೆಂಚುರಿಗೆ ಬಾಜನರಾಗಿ ಕೇವಲ ಬೌಲಿಂಗ್‌ನಲ್ಲಿ ಮಾತ್ರವಲ್ಲದೆ ಬ್ಯಾಟಿಂಗ್ ನಲ್ಲು ಸೈ ಎನಿಸಿಗೊಂಡರು.

2023 ಫೆಬ್ರವರಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಟೀಮ್ ನವರು ಪ್ರಥಮ ವುಮೆನ್ಸ್ ಪ್ರಿಮಿಯರ್ ಲೀಗ್ (WPL) ಆಕ್ಷನ್‌ನಲ್ಲಿ ಟೀಂಗೆ 10 ಲಕ್ಷ ರುಪಾಯಿಗಳ ಬೆಲೆಯಲ್ಲಿ ಸೇರಿಸಿಕೊಂಡರು. ಪ್ರವೇಶ ಸೀಸನ್‌ನಲ್ಲಿ ಏಳು ಪಂದ್ಯಗಳಿಂದ ಆರು ವಿಕೆಟ್‌ಗಳನ್ನು ಪಡೆದುಕೊಂಡರು.

ಎಲ್ಲರೂ ಆಶ್ಚರ್ಯ ಪಡುವಂತೆ ಶ್ರೇಯಾಂಕ ಮಹಿಳ ಕೆರೆಬಿಯನ್ ಪ್ರಿಮಿಯರ್ ಲೀಗ್‌ನ (WCPL) ಗಯಾನಾ ಅಮೆಜಾನ್ ವಾರಿಯರ್ಸ್ನ ಪರವಾಗಿ ಆಟಗಾರ್ತಿಯಾಗಿ ಪಾದರ್ಪಣೆ ಮಾಡಿದ್ದರು. ವಿದೇಶಿ ಲೀಗ್‌ನಲ್ಲಿ ಬಿಡ್‌ ಆದ ಮೊದಲ ಭಾರತೀಯ ಆಟಗಾರ್ತಿ ಎಂಬ ಪ್ರಶಂಸೆಗೆ ಭಾಜನರಾದರು. ಅವರ ಬೌಲಿಂಗ್‌ನಿಂದ ಹೆಚ್ಚು ಪ್ರಶಂಸೆಯ ಆಟವಾಡುವ ಮೂಲಕ 11.66 ರ ಸರಾಸರಿಯಲ್ಲಿ ಬೌಲಿಂಗ್ ಪ್ರದರ್ಶನ ನೀಡಿ ಹಾಗೂ ಟೂರ್ನಮೆಂಟ್‌ನಲ್ಲಿ ಅತ್ಯಧಿಕ ವಿಕೆಟ್‌ಗಳನ್ನು ಪಡೆಯುವ ಸಲುವಾಗಿ ಗಮನಸೇಳೆದರು (ಐದು ಪಂದ್ಯಗಳಲ್ಲಿ ಒಂಬತ್ತು ವಿಕೆಟ್‌ಗಳನ್ನುಪಡೆದುಕೊಂಡರು)

ಅವರ ಆಟದ ಶೈಲಿಯನ್ನು ಗುರುತಿಸಿ ದೇಶದ ಪರವಾಗಿ ಆಡಲು ಆವಕಾಶ ಲಭಿಸಿತ್ತು. ಡಿಸೆಂಬರ್ 2023 ರಲ್ಲಿ ಇಂಗ್ಲೆಂಡ್ ವಿರುದ್ಧ ಅವರು ಭಾರತದ ಅಂತಾರಾಷ್ಟ್ರೀಯ ಕ್ರಿಕೆಟ್‌ ತಂಡಕ್ಕೆ ಪದಾರ್ಪಣೆ ಮಾಡುತ್ತಾರೆ. ಈ ಸರಣಿಯಲ್ಲಿ ಶ್ರೇಷ್ಠ ಪ್ರದರ್ಶನ ನೀಡಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗುತ್ತಾರೆ. ಇತೀಚಿಗೆ ನೆಡೆದ 2024ರ ಮಹಿಳಾ ಪ್ರಿಮಿಯರ್ ಲೀಗ್‌ನಲ್ಲಿ ಶ್ರೇಯಾಂಕ ಪಾಟೀಲ್ 8 ಪಂದ್ಯಗಳಿಂದ 13 ವಿಕೆಟ್‌ಗಳನ್ನು ಪಡೆಯುವ ಮೂಲಕ ಪಂದ್ಯಾವಳಲ್ಲಿ ಅತಿ ಹೆಚ್ಚು ವಿಕೆಟ್ ಕಿತ್ತ ಆಟಗಾರ್ತಿ ಆಗಿ, ಪರ್ಪಲ್ ಕ್ಯಾಪನ್ನು ಮುಡಿಗೆರಿಸಿಕೊಂಡರು. ರಾಯಲ್ ಚಾಲೆಂಜರ್ಸ್ ಬೆಂಗಳೂರು ಪ್ರಶಸ್ತಿ ಗೆಲುವಿನಲ್ಲಿ ಇವರ ಬೌಲಿಂಗ್‌ ಪ್ರಮುಖ ಪತ್ರ ವಹಿಸಿತ್ತು. WPL 2024 ಪ್ರಮುಖ ಆಟಗಾರ್ತಿ ಪ್ರಶಸ್ತಿಗೆ ಭಾಜನರಾಗಿ ಗಮನ ಸೆಳೆದು ಬೇರೆಯವರಿಗೂ ಮಾದರಿಯಾಗಿದ್ದರೆ.

ನಿತಿನ್
ಎಸ್‌.ಡಿ.ಎಂ. ಕಾಲೇಜು, ಉಜಿರೆ

Prev Post

ಬಸವತತ್ವ ಅನುಯಾಯಿಗಳೆಲ್ಲ ಒಂದು ರೀತಿ ಕಮ್ಯೂನಿಸ್ಟ್‌ರೇ ! | ಪ್ರಸಾದ್ ಗುಡ್ಡೋಡಗಿ

Next Post

ಪ್ರೇಮ ಪದಗಳಿಲ್ಲದ ಬಂಧ | ಸೌಮ್ಯ ನೇತ್ರೇಕರ್‌

post-bars

Leave a Comment

Related post