ತಪ್ಪು ಅನಂತ ಪ್ರೀತಿ ಬೆಸೆದ ಆ ದೇವನದ್ದಾ? | ರಂಜಿತ ಹೆಚ್. ಕೆ
ಪ್ರೀತಿ ಜೀವನದ ಮೊದಲ ಪುಟ. ಸಾವು ಜೀವನದ ಕೊನೆಯ ಪುಟ. ಆದರೆ ಸಾವು ಎಲ್ಲರಿಗೂ ಬರುತ್ತದೆ ಪ್ರೀತಿ ಎಲ್ಲರಿಗೂ ಸಿಗುವುದಿಲ್ಲ. ಎಂದು ಹೀಗೆ ಒಮ್ಮೆ ಓದಿದ ನೆನಪು. ಪ್ರೀತಿ ಕೆಲವರಿಗೆ ಅಮೃತದಂತ, ವಿಷ ಇನ್ನು ಕೆಲವರಿಗೆ. ಪ್ರೀತಿ ಎಂದರೆ ನಂಬಿಕೆ ಆದರೆ ನನ್ನ ಪ್ರಕಾರ ಪ್ರೀತಿ ಎಂದರೆ ಎಲ್ಲವನ್ನು ಮೀರಿಸಿದ್ದು.
ಪ್ರೀತಿಯಲ್ಲಿ ಗೆದ್ದವರಿಗಿಂತ ಸೋತು ನೊಂದವರೇ ಹೆಚ್ಚು, ಜೀವನ ಎಲ್ಲರಿಗೂ ಸುಲಭವಲ್ಲ. ಹೌದು ಕೆಲವರು ತಮ್ಮ ಮನೆಯ ಪರಿಸ್ಥಿತಿಗಳನ್ನು ನೆನೆದು ತಮ್ಮ ಪ್ರೀತಿಯನ್ನು ವ್ಯಕ್ತಪಡಿಸಿಕೊಂಡಿರುವುದಿಲ್ಲ. ನಾನು ಇಂದು ಕಣ್ಣಾರೆ ಕಂಡ ಅದ್ಭುತವಾದ ನಿಷ್ಕಲ್ಮಶ ಪ್ರೀತಿಯನ್ನು ತಿಳಿಸುತ್ತೇನೆ.
ಅವಳೊಂದು ಅಪ್ಸರೆಯಂತೆ ಆ ಅಪ್ಸರಿಗೆ ಅಲಂಕಾರವೇ ಅವನ ಪ್ರೀತಿ. ಪ್ರೀತಿಯ ಸಹವಾಸವೇ ಬೇಡ ಎಂದುಕೊಂಡಿದ್ದ ಅವನಿಗೆ ಸಿಕ್ಕಿದ್ದು ಅಮೂಲ್ಯವಾದ ಪ್ರೀತಿ. ಅವನ ಜೀವನದಲ್ಲಿ ಕುಟುಂಬಕ್ಕೆ ಮೊದಲ ಆದ್ಯತೆ, ಅನಂತರ ಬೇರೆ ಎಲ್ಲವೂ. ಆದರೆ ಅವಳ ಪ್ರೀತಿ ಎಲ್ಲರ ಪ್ರೀತಿಯನ್ನು ಮೀರಿಸಿತ್ತು.
ಪ್ರೀತಿಯನ್ನು ಮೊದಲಿಗೇ ಬೇಡ ಎಂದವನು. ಕೊನೆಗೆ ಅವಳನ್ನು ಬಿಟ್ಟಿರದಷ್ಟು ಪ್ರೀತಿ ಮುಂದುವರೆದಿತ್ತು. ಹೆಚ್ಚು ಹಣಕ್ಕೆ ಅಂದಕ್ಕೆ ಮರುಳಾಗುವವರ ಮಧ್ಯೆ ಇವರಬ್ಬರ ಪ್ರೀತಿ ಒಂದು ಉದಾಹರಣೆಯಂತಿತ್ತು. ಇವರಿಬ್ಬರ ಪ್ರೀತಿ ಮಧ್ಯೆ ಯಾವುದೇ ರೀತಿಯ ಮೋಸ ನಾಟಕ ಎಂಬುದು ಇರಲಿಲ್ಲ ಯಾವುದೇ ಆಕರ್ಷಣೆಗೆ ಒಳಗಾಗಿ ಪ್ರೀತಿ ಮಾಡಿದವರಲ್ಲ.
ಕಣ್ಣಿನಿಂದ ಹುಟ್ಟಿ ಮನಸ್ಸಿಗೆ ಹತ್ತಿರವಾಗಿತ್ತು. ಆ ಒಂದು ಅವನು ಮತ್ತು ಅವಳನ್ನು ಮೌನವಾಗಿಸಿತ್ತು. ಅದೇನೆಂದರೆ ಅವಳ ಮದುವೆ ಆಸ್ತಿ ಹಣ ಜಾತಿಯಿಂದ ಅವಳ ಮನೆಯವರು ಆ ಪವಿತ್ರ ಪ್ರೀತಿಯನ್ನು ಬಲಿ ಪಡೆದಿದ್ದರು. ಆದರೆ ಅವಳು ಅವನೊಂದು ಮಾತಿಗಾಗಿ ಎಲ್ಲರನ್ನು ಬಿಟ್ಟು ಬರಲು ತಯಾರಿದ್ದಳು. ಆದರೆ ಅವನನ್ನು ಪರಿಸ್ಥಿತಿ ಕಟ್ಟು ಹಾಕಿತ್ತು. ಇಂದು ಅವಳು ಮತ್ತೊಂದು ಮನೆಯ ಸ್ವತ್ತಾಗಿದ್ದಾಳೆ.
ಆದರೆ ಇಬ್ಬರ ಮಧ್ಯೆ ಆ ಪ್ರೀತಿ ಅಚ್ಚಳಿಯದಂತೆ ಉಳಿದಿದೆ. ಅದಕ್ಕೆ ಹೇಳೋದು ಇದ್ದಾಗ ಪ್ರೀತಿಸಿ ಎಂದು ಯಾರು ಶಾಶ್ವತ ಅಲ್ಲ ಈ ಜಾತಿ ಎಂಬ ರೋಗದ ಮುಂದೆ ಕೆಲವೊಂದು ನಿಷ್ಕಲ್ಮಶ ಪ್ರೀತಿಗಳನ್ನು ಚಿವುಟಿ ನೋವಿನ ಸಂಗತಿ ಹಾಕುತ್ತಿರುವುದು.
ಅಷ್ಟಕ್ಕೂ ಈ ಪ್ರೀತಿಯಲ್ಲಿ ತಪ್ಪಾದರೂ ಯಾರದ್ದು? ಜವಾಬ್ದಾರಿಗಳಿಗೆ ಸೋತು ಪ್ರೀತಿ ತೊರೆದ ಅವನದ್ದಾ? ಸಂಬಂಧಗಳಿಗೆ ಸೋತು ಒಲ್ಲದ ಜೀವನಕ್ಕೆ ಕಾಲಿಟ್ಟ ಅವಳದ್ದಾ? ಅಥವಾ ಒಂದಾಗದ ಜೀವಗಳ ನಡುವೆ ಅನಂತ ಪ್ರೀತಿ ಬೆಸೆದ ಆ ದೇವರದ್ದಾ? ಆದರೆ ಒಂದಂತೂ ಸತ್ಯ ಅವರಿಬ್ಬರ ಮನದಲ್ಲಿ ಆ ಪ್ರೀತಿ ಸದಾ ಸುಡುವ ಕಿಚ್ಚಿನಂತೆ ಉಳಿದಿರುತ್ತದೆ.
ರಂಜಿತ ಹೆಚ್. ಕೆ
ಸಿದ್ದಾರ್ಥ ಮಾಧ್ಯಮ ಅಧ್ಯಯನ ಕೇಂದ್ರ, ತುಮಕೂರು