Back To Top

 ಸಮ ಸಮಾಜದ ಕನಸು ಬಿತ್ತಿದ ಜ್ಯೋತಿ | ಹಣಮಂತ ಎಂ ಕೆ

ಸಮ ಸಮಾಜದ ಕನಸು ಬಿತ್ತಿದ ಜ್ಯೋತಿ | ಹಣಮಂತ ಎಂ ಕೆ

ಭಾರತೀಯ ಶೋಷಿತರ ಬಾಳ
ಬೆಳಗಲೆಂದೇ,
ಭೀಮಾಬಾಯಿ ಉದರದಿ
ನೀ ಜನಿಸಿ ಬಂದೆ.

ಅವಮಾನಗಳೇ ನಿನ್ನ
ಬಾಲ್ಯದ ನೆನಪು,
ನಿಂದನೆಗಳೇ ನಿನ್ನ
ಯೌವನಕ್ಕೂ ಮುಡಿಪು.

ಬರೋಡದ ರಾಜ
ಸಯಾಜಿರಾವ್ ಗಾಯಕವಾಡ,
ಅಸ್ಪೃಶ್ಯತೆ ತೊಡೆದು
ನಿಂತರಯ್ಯ ನಿನ್ನ ಸಂಗಡ.

ದಮನೀತರರ ಧ್ವನಿಯಾಗಿ
ನಿಂತ ನವ ಯುವ ಸಂತ,
ಭಾರತ ಮಾತೆಯ ನೊಸಲಿಗೆ
ಇಟ್ಟ ಸಿಂಧೂರ ಈತ.

ಆತ್ಮಸ್ಥೈರ್ಯವ ಕುಗ್ಗಲೂ ಬಿಡಲಿಲ್ಲ
ಎಂದಿಗೂ ಮಡದಿ ರಮಾ,
ಬಾಬಾಸಾಹೇಬರ ಪ್ರತಿ ಹೆಜ್ಜೆಯ
ಹಿಂದೆಯೂ ನಿಂತು ತೋರಿದರೂ ಪ್ರೇಮಾ.

ಬಸವರ ಸಮಾನತೆಯ
ಹಾದಿಯಲ್ಲೇ ಸಾಗಿದವರು,
ಜಾತಿ-ಧರ್ಮಗಳಿಂದ ಬೇಸತ್ತು
ಕೊನೆಗೆ ಬುದ್ಧನ ಅಪ್ಪಿದರು.

ಬಹುಜನರ ಬಾಳ ಬೆಳಗಿದ
ಕ್ರಾಂತಿಸೂರ್ಯ,
ನೀಡಿದಿರಿ ಸಂವಿಧಾನವ ತಡೆಯಲು
ಉಳ್ಳವರ ಕ್ರೌರ್ಯ.

ಸಮ ಸಮಾಜದ ಕನಸು
ಕಾಣುತ್ತಲೇ ಮರೆಯಾದ ಜ್ಯೋತಿ,
ಇಂದಿಗೂ ತತ್ವ- ಸಿದ್ಧಾಂತಗಳಿಂದಲೇ
ಹರಡುತಿದೆ ಜಗದಿ ಅವರ ಕೀರ್ತಿ.

ಹಣಮಂತ ಎಂ. ಕೆ
ಸಿದ್ಧಾರ್ಥ ಮಾಧ್ಯಮ ಅಧ್ಯಯನ ಕೇಂದ್ರ, ತುಮಕೂರು

Prev Post

ಮೂಕವಾಗಲಿ ಮಾತು ಭರ್ತಿಯಾಗಲಿ ಕಂಬನಿ | ಅಯ್ಯಪ್ಪ ನಾಯಕ

Next Post

ಕಟ್ಟುಪಾಡುಗಳ ಗೆರೆದಾಟಿ ಸಮಾಜಕ್ಕೆ ಬಲಿಯಾದ ಮಾಲತಿಯ ಕಥನ | ವಿಕಾಸ್ ರಾಜ್ ಪೆರುವಾಯಿ

post-bars

Leave a Comment

Related post