Back To Top

 ಅಕ್ಷರ ಮಾಂತ್ರಿಕನ ಹಂತಕಿ ನನ್ನನ್ನು ಬರೆಸಿದಳು | ರಂಜಿತ ಹೆಚ್. ಕೆ

ಅಕ್ಷರ ಮಾಂತ್ರಿಕನ ಹಂತಕಿ ನನ್ನನ್ನು ಬರೆಸಿದಳು | ರಂಜಿತ ಹೆಚ್. ಕೆ

ನಾನೂ ಎಂದಿಗೂ ಪುಸ್ತಕ ಓದಿದವಳು ಅಲ್ಲ. ಪುಸ್ತಕವನ್ನು ಮುಟ್ಟಿಯು ಕೂಡ ನೋಡಿಲ್ಲ ಅಂತಹದರಲ್ಲಿ ಆ ಪುಸ್ತಕವನ್ನು ಓದಲೇ ಬೇಕು ಎಂಬ ಆಸೆಯಾಗಿತ್ತು. ಕಾಲೇಜಿನಲ್ಲಿ ಆ ಒಂದು ಪುಸ್ತಕಕ್ಕೆ ಇಂದು ಬೇಡಿಕೆ ಹೆಚ್ಚಿದೆ. ನನಗೆ ಕೊಡಿ ನಾ ಓದಬೇಕು ನನಗೆ ಕೊಡಿ ನಾ ಓದಬೇಕು ಎಂಬುದೇ ಆಗಿದೆ. ಆ ಪುಸ್ತಕ ಯಾವುದು ಎಂದು ಹೇಳ್ತಿನಿ ನೋಡಿ, ಅದೇ ಅಕ್ಷರ ಮಾಂತ್ರಿಕ ರವಿಬೆಳಗರೆ ಪುಸ್ತಕ  ‘ಹಂತಕಿ ಐ ಲವ್ ಯು’.

ಆ ಪುಸ್ತಕವನ್ನು ಓದಲು ಒಂದು ದಿನ ಕಾಲ ಏನೋ ಕೂಡಿಬಂದಿತ್ತು. ಆದರೆ ಅಂದು ನನ್ನ ಗೆಳತಿ ಆ ಬುಕ್ ಅನ್ನು ನಾನೇ ಓದಬೇಕು ಎಂದು ಓದಲು ಶುರುಮಾಡಿದ್ದಳು. ಆದರೆ ಅದರ ಬಗ್ಗೆ ಕಾಲೇಜ್‌ ರೂಮ್‌ನಲ್ಲಿ ಮಾತನಾಡುತ್ತಿದ್ದದನ್ನು ಕೇಳಿದ ನಾನೂ ಒದಲೇಬೇಕು ಎಂದು ಅವಳ ಬಳಿ ಕೇಳಿ ತೆಗೆದುಕೊಂಡೆ. ಆ ಬುಕ್ ಹೇಗೋ ನನ್ನ ಕೈ ಸೇರಿತು. ಅಷ್ಟರಲ್ಲಿ ಇನ್ನೊಬ್ಬಳು ಗೆಳತಿ ನಾ ಓದಬೇಕು ಬೇಗ ಓದಿಕೊಡು ಎಂಬುದಾಗಿ ಹೇಳಿದಳು.

ನಾನೂ ಅದರ ಬಗ್ಗೆ ಮಾತಾಡುವುದನ್ನು ಕೇಳಿ ಆ ದಿನ ಪೂರ್ತಿ ಓದಿ ಮುಗಿಸಲೇಬೇಕು ಎಂದು ಶುರು ಮಾಡಿದ್ದೆ. ಅದೇ ರೀತಿ ಆ ಪುಸ್ತಕ ನನ್ನನ್ನು ಓದಿಸುತ್ತಲೇ ಹೋಗಿತ್ತು. ಹೇಗಿತ್ತು ಅಂದರೆ ಪುಸ್ತಕ ಓದಲು ಯಾವುದೇ ಆಸಕ್ತಿ ನನಗೆ ಇರಲಿಲ್ಲ ಆದರೆ, ಪುಸ್ತಕ ನನ್ನಲ್ಲಿ ಓದುವ ಹವ್ಯಾಸವನ್ನು ರೂಢಿಸಿತು. ಅದನ್ನು ಓದುತ್ತಾ ಹೋದಂತೆ ಆ ಪುಸ್ತಕದಲ್ಲಿ ನಾ ಹೆಚ್ಚು ತಿರುವುಗಳನ್ನೇ ಕಾಣುತ್ತ ಹೋದೆ. ಹಾಗೆ ಸ್ವಲ್ಪ ಪೋಲಿತನ ಕೊಲೆಗಳು ಪ್ರೀತಿ ಇದ್ದಂತ ಕಥೆ ಇದಾಗಿತ್ತು. ನಾ ಪುಸ್ತಕವನ್ನು ಓದುತ್ತಾ ಓದುತ್ತಾ ಆ ಕಥೆಯಲ್ಲಿ ಮಗ್ನಳಾದೆ. ಒಂದೊಂದು ಅಕ್ಷರವನ್ನು ಬಿಡದೆ ಓದಬೇಕು ಎನ್ನುವ ಆಸೆ ಉಂಟಾಗಿತ್ತು. ಓದುತ್ತಾ ಹೋದಂತೆ ತರ ತರಹದ ತಿರುವು ಆ ಕಥೆಯಲ್ಲಿತ್ತು.

ಹಂತಕಿ ಐ ಲವ್ ಯು ಅಕ್ಷರಗಳ ಬಳಕೆ ಎಷ್ಟು ಅಚ್ಚುಕಟ್ಟಾಗಿತ್ತು ಅಂದರೆ ಕಾದಂಬರಿಯಲ್ಲಿ ಪಾತ್ರದಾರಿಗಳಾದ ಇನ್ಸ್ಪೆಕ್ಟರ್ ಪಾಲಿ, ಸಹಾಯಕ ದೇವಧರನ್, ಭ್ರಷ್ಟ ಅಧಿಕಾರಿ ಕಾಂಬಳೆ, ಬ್ಯೂಟಿಫುಲ್ ಶರದ್ ಯಾಮಿನಿ, ಜಿಯಾ ಹಾಗೂ ನೀನಾ ಎಮಿಲಿ ಪ್ರತಿಯೊಂದು ಪಾತ್ರವು ವಿಶೇಷತೆಯಿಂದ ಕೂಡಿತ್ತು. ಕಥೆಯನ್ನು ಓದುತ್ತಾ ಅವರ ಇನ್ನಷ್ಟು ಪುಸ್ತಕಗಳನ್ನು ಓದುವ ಆಸೆ ನನ್ನಲ್ಲಿ ಮೂಡಿತು. ನಾನೂ ಆ ಪುಸ್ತಕವನ್ನು ಓದಲು ನನ್ನ ಸ್ಪೂರ್ತಿ ಒಬ್ಬರಿದ್ದಾರೆ ಅವರಿಗೆ ನಾ ಧನ್ಯವಾದ ತಿಳಿಸುತ್ತ. ಅಕ್ಷರಮಾಂತ್ರಿಕ ರವಿ ಬೆಳಗೆರೆ ಅವರ ಇನ್ನಷ್ಟೂ ಪುಸ್ತಕವನ್ನು ಓದಲು ಕಾತುರಳಾಗಿದ್ದೇನೆ. ನಾನೂ ಕೂಡ ಬರಿಯಬಹುದು ಎಂದು ತಿಳಿಸಿಕೊಟ್ಟ ಆ ಪುಸ್ತಕಕ್ಕೆ ಹೃತ್ಪೂರ್ವಕ ಧನ್ಯವಾದಗಳು.

ರಂಜಿತ ಹೆಚ್. ಕೆ
ಶ್ರೀ ಸಿದ್ಧಾರ್ಥ ಮಾಧ್ಯಮ ಅಧ್ಯಯನ ಕೇಂದ್ರ, ತುಮಕೂರು

Prev Post

ಕರ್ನಾಟಕದ ಈ ಪುರಾತನ ಅಣೆಕಟ್ಟನ್ನು ಗುರುತಿಸ ಬಲ್ಲಿರೇ..! | ಪವನ್‌

Next Post

ಅಪ್ಪು ಅಜರಾಮರ | ಹಣಮಂತ ಎಂ ಕೆ

post-bars

Leave a Comment

Related post