Back To Top

 ಆಯ್ಕೆ ಜಾಸ್ತಿಯಾಗಿದ್ದಾಗ ಕಾಡುವ ಚಂಚಲತೆಗೆ ಮದ್ದೇನು? | ರಂಜಿತ ಹೆಚ್. ಕೆ

ಆಯ್ಕೆ ಜಾಸ್ತಿಯಾಗಿದ್ದಾಗ ಕಾಡುವ ಚಂಚಲತೆಗೆ ಮದ್ದೇನು? | ರಂಜಿತ ಹೆಚ್. ಕೆ

ಚಂಚಲತೆ ಎಂಬುದು ಯೌವನದಲ್ಲಿ ಅತಿ ಹೆಚ್ಚು ಕಾಣುವಂಥದ್ದು. ನಾವು ಅದನ್ನು ಚಂಚಲತೆ ಅಥವಾ ಚಾಂಚಲ್ಯತೆ ಎಂಬುದಾಗಿ ಹೇಳುತ್ತೇವೆ. ಈ ಚಂಚಲತೆ ಎಂಬುದು ಎಲ್ಲರಲ್ಲಿಯೂ ಇರುವಂತಹ ಒಂದು ಸಹಜ ಸ್ಥಿತಿ. ಇದನ್ನು ಆ ಕ್ಷಣಕ್ಕೆ ನಾವು ನಿಭಾಯಿಸಿದರೆ ಮುಂದೆ ಆಗುವ ಅದೆಷ್ಟು ನಿರ್ಧಾರಕ್ಕೆ ಸರಿಯಾದ ಕ್ರಮ ಕೈಗೊಳ್ಳಬಹುದು.

ಅದೆಷ್ಟು ಹುಡುಗ ಹುಡುಗಿಯರು ಚಂಚಲ ಮನಸ್ಸಿನಿಂದ ದೃಢವಾದ ನಿರ್ಧಾರ ತೆಗೆದುಕೊಳ್ಳಲಾಗದೆ, ಕ್ಷಣಿಕವಾಗಿ ಮನಸ್ಸು ಬುದ್ಧಿ ಏನು ಹೇಳುತ್ತದೆಯೋ ಅದೇ ಸರಿ ಎಂದು ಮನೆ ಬಿಟ್ಟು ಓಡಿ ಹೋಗಿ ಮದುವೆಯಾಗುತ್ತಾರೆ. ನಂತರ ಕೇವಲ ಒಂದೇ ವಾರದಲ್ಲಿ ಅವಳು ಸರಿ ಇಲ್ಲ ಅಂತ ಅವನು ಸರಿ ಇಲ್ಲ ಅಂತ ಅವಳು ಕಿತ್ತಾಡಿಕೊಂಡು ಬೇರೆಯಾಗುತ್ತಾರೆ.

ಕೆಲವೊಮ್ಮೆ ಆಯ್ಕೆ ಸರಿಯಾದರೂ ಇನ್ನು ಕೆಲವೊಮ್ಮೆ ಪಶ್ಚಾತಾಪ ಪಡಬೇಕಾಗುತ್ತದೆ. ಯೌವ್ವನದಲ್ಲಿ ಹೆಚ್ಚು ಚಂಚಲತೆ ಕಾಡುವುದು ಪ್ರೀತಿಯ ವಿಷಯವೇ ಆಗಿರಬಹುದು. ಇನ್ನು ಕೆಲವರು ಮದುವೆಯ ತನಕ ಸರಿಯಾಗಿ ಇರುತ್ತಾರೆ. ಮದುವೆಯ ನಂತರ ಚಂಚಲವಾಗಿರುವುದನ್ನು ನಾವು ಅದೆಷ್ಟು ಕಂಡಿದ್ದೇವೆ. ಬಹುಶಃ ಚಂಚಲತೆಗೆ ವಯಸ್ಸಿಲ್ಲ, ಏಕೆಂದರೆ ನಮ್ಮನ್ನು ಸೃಷ್ಟಿಸಿದ ಪ್ರಕೃತಿಯೇ ಚಂಚಲ.

ಅದು ಹೇಗೆ ನಮ್ಮ ತಲೆ ಕೆಡಿಸುತ್ತದೆ ಅಂದರೆ ನಾವು ಎಡುತ್ತಿದ್ದೇವೆ ಎಂಬುದರ ಸುಳಿವು ನಮಗೆ ಸಿಗುವುದಿಲ್ಲ. ಕೆಲವು ವರ್ಷಗಳ ನಂತರ ನಮ್ಮ ಜೀವನವನ್ನು ಹಿಂತಿರುಗಿ ನೋಡಿದಾಗ ನಗು ಬರುತ್ತದೆ. ಚಂಚಲತೆ ಹೇಗೆ ಆಗುತ್ತದೆ ಎಂದರೆ ಆಯ್ಕೆ ಜಾಸ್ತಿಯಾಗಿದ್ದಾಗ. ಈ ರೀತಿಯಾಗಿ ಚಂಚಲತೆ ಎಲ್ಲರಲ್ಲೂ ಇರುತ್ತದೆ. ಆದರೆ ನಾವು ಅದನ್ನು ನಿಭಾಯಿಸಲು ತಿಳಿದಿರಬೇಕು.

ರಂಜಿತ ಹೆಚ್. ಕೆ
ಸಿದ್ಧಾರ್ಥ ಮಾಧ್ಯಮ ಅಧ್ಯಯನ ಕೇಂದ್ರ, ತುಮಕೂರು

Prev Post

ಪತಿ ಬಡಿಸುವ ರಸಪ್ರೇಮ | ಶಿಲ್ಪ ಬಿ

Next Post

ಸಂಜೆಯಲಿ ಬಾನು ನಸುಗೆಂಪು ರಂಗೇರಿದ ಹೊತ್ತು | ಯೋಗೀಶ ಪಿ

post-bars

Leave a Comment

Related post