Back To Top

 ಕಾಣದ ದೇವರ ಪ್ರತಿರೂಪ ನನ್ನಪ್ಪ | ಹಣಮಂತ ಎಂ ಕೆ

ಕಾಣದ ದೇವರ ಪ್ರತಿರೂಪ ನನ್ನಪ್ಪ | ಹಣಮಂತ ಎಂ ಕೆ

ಲ್ಲರಂತಲ್ಲ ನನ್ನಪ್ಪ,
ಕಾಣದ ದೇವರ ಪ್ರತಿರೂಪ..

ಕಂಡಿದೆಲ್ಲವ ಕೇಳುವ ಮೊದಲೇ ಕೊಡಿಸಿ ಖುಷಿ ನೀಡಿದಾತ
ಉತ್ತಮವೆಲ್ಲ ಸುತನಿಗೆ ಇರಲಿ ಎಂದು ಬಿಟ್ಟುಕೊಡುವಾತ..

ನನ್ನ ಪ್ರತಿ ಸೋಲಲ್ಲೂ ಬೆನ್ನಿಗೆ ನಿಲ್ಲುವಾತ ನನ್ನಪ್ಪ
ನನ್ನ ಪ್ರತಿ ಗೆಲುವನ್ನು ಮೀಸೆ ತಿರುವಿ ಸಂಭ್ರಮಿಸುವಾತ ನನ್ನಪ್ಪ..

ಸಂಸಾರದ ಎಲ್ಲ ಹೊರೆಗಳ ತಾ ಹೊತ್ತು ನೀ ಓದು ಮಗನೇ ಎಂದು ನಗುವಾತ..
ಮನೆಯವರೆಲ್ಲರ ಖುಷಿ ಕಾಯ್ದು, ಅದರಲ್ಲೇ ತೃಪ್ತಿತಾಗಿ ತನ್ನ ತಾ ಮರೆವಾತ..

ಎಲ್ಲರಂತಲ್ಲ ನನ್ನಪ್ಪ, ಮನದಲ್ಲೇ ಮುಗಿಲ ವೈಶಾಲ್ಯತೆ ಹೊಂದಿದಾತ..

ಎದೆಗೊದ್ದವರೇ ಎಡವಿದರೂ ಕೈ ಹಿಡಿದು ಎಬ್ಬಿಸುವಾತ..
ಕೆಟ್ಟವರಿಗೂ ಒಳಿತನ್ನೇ ಬಯಸುವ ನಿಷ್ಕಲ್ಮಶ ಹೃದಯಿಯಾತ…

ಎಲ್ಲರಂತಲ್ಲ ನನ್ನಪ್ಪ ಬಂಗಾರದಂತ ಬದುಕನ್ನೇ ಕಟ್ಟಿಕೊಟ್ಟ ಸಂತ…
ದೈವತ್ವ ಪ್ರಶ್ನಿಸುವ ನನ್ನ ಪಾಲಿನ ನೈಜ ಭಗವಂತ..

ನನ್ನಲ್ಲಿನ ಎಲ್ಲ ಒಳ್ಳೆಯತನಕ್ಕೂ ಆತನೇ ಕಾರಣೀಭೂತ..
ಮನದಿ ಇರುವ ಸಾವಿರ ನೋವ ಮರೆಮಾಚಿ ಮುಗುಳ್ನಗುವಾತ…

ಮೌನದಿ ಕಂಬನಿ ಮರೆಮಾಡಿಕೊಂಡಾತ,
ಕೊನೆಗೂ ಅರ್ಥವಾಗಲೇ ಇಲ್ಲ
ನನ್ನ ಜನ್ಮದಾತ..

ಹಣಮಂತ ಎಂ ಕೆ
ಶ್ರೀ ಸಿದ್ಧಾರ್ಥ ಮಾಧ್ಯಮ ಅಧ್ಯಯನ ಕೇಂದ್ರ, ತುಮಕೂರು

Prev Post

ಎಂದು ಒಂದಾಗುವುದೂ ಈ ಪ್ರೀತಿ | ರಂಜಿತ ಹೆಚ್. ಕೆ

Next Post

ನವೆಂಬರ್‌ ಒಂದು ಒಂದೇ ನನ್ನ ದಿನ | ಸಂತೋಷ್‌ ಎನ್‌. ಜೋಶಿ

post-bars

Leave a Comment

Related post