Back To Top

 ಎಂದು ಒಂದಾಗುವುದೂ ಈ ಪ್ರೀತಿ | ರಂಜಿತ ಹೆಚ್. ಕೆ

ಎಂದು ಒಂದಾಗುವುದೂ ಈ ಪ್ರೀತಿ | ರಂಜಿತ ಹೆಚ್. ಕೆ

ಪ್ರಪಂಚದಲ್ಲಿ ಪ್ರೀತಿ ಮಾಡದವರಿಲ್ಲ… ಹೌದು, ಇಲ್ಲೊಬ್ಬ ಪ್ರೇಮಿಯ ಪ್ರೀತಿ ಬಗ್ಗೆ ಹೇಳ್ತಿನಿ ಅವನು ಕವಿ ಪ್ರೇಮಿ, ಕವಿಯಂತೆ ಪ್ರೀತಿ ಮಾಡುತ್ತಿದ್ದ. ಕವಿ ತನ್ನ ಕಲ್ಪನೆಯಲ್ಲೇ ಕವಿತೆ ಬರೆಯುತ್ತ ಇದ್ದನಂತೆ. ಇಲ್ಲೂ ಕೂಡ ಅದೇ ಆಗಿದ್ದು ತನ್ನ ನಿಷ್ಕಲ್ಮಶ ಪ್ರೀತಿಯನ್ನು ಕಲ್ಪನೆಯಲ್ಲೇ ಮುಗಿಸಿದ್ದ ಆತ..? ತನ್ನ ಜೀವನದಲ್ಲಿ ಒಂದು ಹುಡುಗಿಯನ್ನು ಕಣ್ಣೆತ್ತು ಸಹ ನೋಡದವನು.. ಒಂದು ಹುಡುಗಿಯನ್ನು ತನ್ನ ಸರ್ವಸ್ವ ಎನ್ನುವಂತೆ ಪ್ರೀತಿ ಮಾಡಿದ್ದ.

ಆದರೆ, ತನ್ನ ಅತಿಯಾದ ಪ್ರೀತಿಯಿಂದಲೋ ಏನೋ ಕೆಲ ತಿಂಗಳು ನೋವನ್ನೆ ಅನುಭವಿಸಬೇಕಾಯಿತು. ನೋವಿಂದ ಹೊರ ಬರಲು ಕೆಲ ತಿಂಗಳುಗಳೇ ಬೇಕಾಯಿತು. ಆ ಹುಡುಗಿ ಹೆಚ್ಚು ಪ್ರೀತಿ ಮಾಡಿದ್ದೂ ನಿಜ. ಸಮಯ ಕೊಡಲು ಆಗಿಲ್ಲ ಅದರಿಂದಲೇ ಇಬ್ಬರ ನಡುವೆ ಜಗಳ ಮನಸ್ತಾಪ ಹೆಚ್ಚೇ ಆಯಿತೇನೋ.

ಕೆಲ ತಿಂಗಳು ಇಬ್ಬರ ನಡುವೆ ಮಾತು ಕೂಡ ಇರಲಿಲ್ಲ ಇಬ್ಬರು ಒಬ್ಬರನೊಬ್ಬರು ಬಿಟ್ಟಿರದಷ್ಟು ಪ್ರೀತಿ ಮಾಡಿದ್ದರು. ಆತನಿಗೆ ಅವಳ ಪ್ರೀತಿ ಅರ್ಥ ಆಗಲಿಲ್ಲ ಅನಿಸುತ್ತೆ, ಏಕೆಂದರೆ ಅವಳ ಮೇಲೆ ಅವಳ ಪ್ರೀತಿ ಮೇಲೆ ಹೆಚ್ಚು ದೂರುಗಳೇ ಇರುತ್ತಿದ್ದವು. ಆ ಕೋಪಕ್ಕೂ ಕೂಡ ಕಾರಣ ಅವಳೇ ಆಗಿದ್ದಳು, ಆದರೆ ಅವನ ಪ್ರೀತಿ ಪಡೆದ ಅವಳೂ ಧನ್ಯಳೇ ಹೌದು.

ಜೀವನ ಎಷ್ಟು ವಿಚಿತ್ರ ಎಂದರೆ ಪ್ರೀತಿ ಮಾಡಿದರು ಕೂಡ ಒಂದಾಗಲು ಹಣೆ ಬರಹ ಇರ್ಬಾಕೇನೋ ಅಲ್ವಾ? ಅವರ ಪ್ರೀತಿ ಒಂದಾಗುತ್ತೋ ಅನ್ನೋ ಕಾತುರದಲ್ಲೇ ನಾ ಇದ್ದೇನೆ. ಅವನ ಪ್ರೀತಿ ಹೇಗಿತ್ತು ಎಂದರೆ ವರ್ಣಿಸಲು ಸಾಧ್ಯವಿಲ್ಲದ ಪ್ರೀತಿ. ಅವಳ ತುಸು ಸಮಯಕ್ಕಾಗಿ ತಿಂಗಳುಗಳೇ ಕಾದಿದ್ದಾನೆ ಆತ. ಆಕೆಗೆ ಅದೃಷ್ಟ ಇರಲಿಲ್ಲ ಅನ್ಸುತ್ತೆ ಅಂತಹ ಅತ್ಯಮೂಲ್ಯ ಸಮಯ ಮತ್ತು ಪ್ರೀತಿಯನ್ನು ಪಡೆಯಲು.

ಜೀವನದಲ್ಲಿ ಏನಾದರು ಸಾಧಿಸಬೇಕು ಎಂಬ ನಂಬಿಕೆಯಿಂದ ಜೀವನ ನಡೆಸುತ್ತಿರುವವನು. ಆತನ ಪ್ರೀತಿ ಅವಳಿಗೇನೋ ಸಿಕ್ಕಿತು. ಆ ಪ್ರೀತಿಗಿಂತ ಹೆಚ್ಚು ನೋವು ಅವಳೂ ಆತನಿಗೆ ನೀಡಿದಳು. ಒಟ್ಟಿಗೆ ಬಾಳುವ ಅವಕಾಶ ಇಬ್ಬರಿಗೂ ಇರಲಿಲ್ಲ. ಆ ಪವಿತ್ರ ಪ್ರೀತಿಗೆ ಎಂದಿಗೂ ಕೊನೆ ಇಲ್ಲ. ಮನೆಯವರ ಅಷ್ಟು ಪ್ರೀತಿ ನಂಬಿಕೆ ಇಬ್ಬರನ್ನು ಕಟ್ಟಿ ಹಾಕಿದೆ.

ಇಬ್ಬರ ಮನಸಲ್ಲಿಯೂ ಕೂಡ ಅಚ್ಚಳಿಯದಂತೆ ಉಳಿದಿದೆ ಆ ಪವಿತ್ರ ಪ್ರೀತಿ. ಅದಕ್ಕೆ ಮೂಲ ಕಾರಣ  ಅವನು ಪ್ರತಿ ಸಲ ಪ್ರೀತಿಯನ್ನು ಕಾಪಾಡಿಕೊಂಡ ರೀತಿ. ಈ ಪ್ರೀತಿ ಕೊನೆ ಎಂದಿಗೂ ಇಲ್ಲ… ಅವನು ಎಂದಿಗೂ ಅವಳ ಬಾಳಿನಲ್ಲಿ ರಾಮನೇ. ಅವನು ಹೆಣ್ಣು ಮಕ್ಕಳಿಗೆ ಕೊಡುವ ಗೌರವಕ್ಕೆ ಪ್ರತಿ ಕ್ಷಣಕ್ಕೂ ಅವನ ಮೇಲಿನ ಪ್ರೀತಿ ಹೆಚ್ಚುತ್ತಲೇ ಇದೆ ಅವಳಿಗೆ. ಈ ಜನ್ಮ ಅಲ್ಲ ಎಲ್ಲಾ ಜನ್ಮದಲ್ಲೂ ಅವನ ಪ್ರೀತಿಗಾಗಿ ಕಾಯುವಳು ಅವಳು. ಕಾತರದಿಂದ ಅವನು ಸಿಗುವನೋ ಏನೋ ಎಂದು.

ರಂಜಿತ ಹೆಚ್. ಕೆ
ಶ್ರೀ ಸಿದ್ಧಾರ್ಥ ಮಾಧ್ಯಮ ಅಧ್ಯಯನ ಕೇಂದ್ರ, ತುಮಕೂರು

Prev Post

ಆಳ್ವಾಸ್‌ ಮತ್ತು ಸರ್ಕಾರದ ಸಹಯೋಗದಲ್ಲಿ ಅಂತಿಮ ವರ್ಷದ ಬಿಇ ವಿದ್ಯಾರ್ಥಿಗಳಿಗೆ ಸಿಎಸ್‌ಎಫ್‌ಎಸ್ ತರಬೇತಿ

Next Post

ಕಾಣದ ದೇವರ ಪ್ರತಿರೂಪ ನನ್ನಪ್ಪ | ಹಣಮಂತ ಎಂ ಕೆ

post-bars

Leave a Comment

Related post