Back To Top

 ಆದರ್ಶ ವ್ಯಕ್ತಿತ್ವದ ಸರದಾರ ಸ್ವಾಮಿ ವಿವೇಕಾನಂದ | ಪೂಜಾ. ವಿ. ಹಂದ್ರಾಳ

ಆದರ್ಶ ವ್ಯಕ್ತಿತ್ವದ ಸರದಾರ ಸ್ವಾಮಿ ವಿವೇಕಾನಂದ | ಪೂಜಾ. ವಿ. ಹಂದ್ರಾಳ

ರಿತ್ರೆಯ ಪುಟಗಳನ್ನು ತಿರುಗಿಸಿ ನೋಡಿದರೆ ಅದೆಷ್ಟೋ ಮಹಾನ್ ವ್ಯಕ್ತಿಗಳು ಬೇರೆ ಬೇರೆ ಆದರ್ಶಗಳ ಮೂಲಕವೇ ಜೀವನವನ್ನು ಪ್ರೇರೇಪಿಸುತ್ತಾರೆ. ಅದರಲ್ಲಿ ಸ್ವಾಮಿ ವಿವೇಕಾನಂದ ಮೇರು ಪ್ರತಿಭೆ. ಭಾಷೆ, ವರ್ಗ, ಸಂಸ್ಕೃತಿ, ಜಾತಿಗಳನ್ನು ಮೀರಿದ ಜಾಗತಿಕ ಪ್ರತಿಭೆ. “ಏಳಿ ಎದ್ದೇಳಿ ಗುರಿ ಮುಟ್ಟುವತನಕ ನಿಲ್ಲದಿರಿ” ಎಂಬ ಘೋಷವಾಕ್ಯ ಇಂದಿಗೂ ಯುವ ಮನಸ್ಸುಗಳನ್ನು ಬಡಿದೆಬ್ಬಿಸುತ್ತದೆ. ಯುವಜನತೆಗೆ ಇದರಿಂದ ಆದರ್ಶಪ್ರಿಯರಾಗಿದ್ದಾರೆ.

“ಶ್ರೀಕೃಷ್ಣನ ಬಗ್ಗೆ ತಿಳಿಯಲು ಭಗವದ್ಗೀತೆಯನ್ನು ಓದಬೇಕು, ಭಾರತದ ಕುರಿತು ಅರಿಯಬೇಕಾದರೆ ಸ್ವಾಮಿ ವಿವೇಕಾನಂದರ ಜೀವನ ಚರಿತ್ರೆ ಓದಿದರೆ ಸಾಕು” ಎಂಬ ಗಾಂಧೀಜಿಯವರ ಹೇಳಿಕೆಯಂತೆ ವಿವೇಕಾನಂದರು ಬದುಕಿದವರು. ಬಾಲ್ಯದಲ್ಲಿ ನರೇಂದ್ರ ಎಂದು ಕರೆಸಿಕೊಳ್ಳುತ್ತಿದ್ದ ಇವರು ದೇವರು ಎಲ್ಲಿದ್ದಾನೆ? ಎಂಬ ಹುಡುಕಾಟದಲ್ಲೇ ಸಾಗಿಬಂದರು. ನರೇಂದ್ರ ರಾಮಕೃಷ್ಣ ಪರಮಹಂಸರ ಶಿಷ್ಯರಾದ ಬಳಿಕ ದೇವರು ಇದ್ದಾನೆ ಎಂಬುದನ್ನು ಕಂಡುಕೊಂಡರು. ಯಾವುದೇ ವಿಷಯವನ್ನು ಮರುಪ್ರಶ್ನಿಸದೆ ಒಪ್ಪಿಕೊಳ್ಳುತ್ತಿರಲಿಲ್ಲ. ವಿವೇಕಾನಂದರು ಈ ಮನೋಭಾವ ನಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ಜ್ಞಾನ ಭಂಡಾರ ಹೆಚ್ಚಾಗುವುದಂತು ಕಂಡಿತ.

ನಾವು ಪುಸ್ತಕ ಸ್ನೇಹಿ ಆದರೆ ಅದು ನಮ್ಮನ್ನು ಪ್ರಗತಿಪರ ಕರೆದೊಯ್ಯುತ್ತದೆ. ಆದರೆ ಇಂದಿನ ಯುವಕರಲ್ಲಿ ಪುಸ್ತಕ ಪ್ರೇಮಿಗಳಿದ್ದಾರೆ ಹೇಳಿ? ನಮಗೆ ಅರಿವಿಲ್ಲದೇ ನಮ್ಮಲ್ಲಿ ಅದೆಷ್ಟೋ ಪ್ರತಿಭೆಗಳು ಅಡಕವಾಗಿರುತ್ತವೆ. ಅವುಗಳನ್ನು ಕಂಡುಕೊಳ್ಳುವ ಮಾರ್ಗದ ಮೊದಲು ಹುಡುಕಬೇಕು ಜಗತ್ತನ್ನು ಜಯಿಸುವಂತಹ ಸಾಹಸಕ್ಕು ಮುನ್ನ ನಮ್ಮನ್ನು ನಾವು ಗೆಲ್ಲಬೇಕು. ಅದಕ್ಕಾಗಿ ಸ್ವಾಮಿ ವಿವೇಕಾನಂದರು “ದಿನಕ್ಕೆ ಒಮ್ಮೆಯಾದರೂ ನಿಮ್ಮೊಂದಿಗೆ ಮಾತನಾಡಿ ಇಲ್ಲದಿದ್ದರೆ ನೀವು ಈ ಜಗತ್ತಿನಲ್ಲಿ ಒಬ್ಬ ಅತ್ಯುತ್ತಮ ವ್ಯಕ್ತಿ ಜೊತೆ ಭೇಟಿಯಾಗುವುದನ್ನು ತಪ್ಪಿಸಿದಂತೆ” ಎಂದಿದ್ದಾರೆ.

ನಮ್ಮನ್ನು ನಾವು ಕಂಡುಕೊಂಡಾಗ ಮಾತ್ರ ಲೋಕದ ಜ್ಞಾನ ಪಡೆಯಲು ಸಾಧ್ಯ. ಒಳ್ಳೆಯ ಆಲೋಚನೆಗಳಿಂದ ಬದುಕು ಬದಲಾಗಿ ಸುಂದರವಾಗುತ್ತದೆ ಎಂಬುದು ತೋರಿಸಿಕೊಟ್ಟವರು ಈ ಮಾನವಮಿತ್ರ. ಸ್ವಾಮಿ ವಿವೇಕಾನಂದ ತಮ್ಮ ಜನ್ಮ ಭೂಮಿಯಲ್ಲಿ ಮಾತ್ರ ಅನುಯಾಯಿಗಳನ್ನು ಹೊಂದಿರದೆ, ಜಗತ್ತಿನಲ್ಲಿ ಪ್ರಸಿದ್ಧರಾಗಿರುವುದು ಮಾನವ ಆಲೋಚನೆಗಳಿಗೂ ನಿಲುಕದ ಚಿಂತನೆಗಳಿಂದ. “ಬೀಗಿ ಹಾಳಾಗುವುದರ ಬದಲು ಭಾಗಿ ಎಲ್ಲರೊಡನೆ ಬಾಳಿ ಬದುಕುವುದನ್ನು ಕಲಿ, ಸರಳತೆ ಬದುಕೇ ಸರ್ವಶ್ರೇಷ್ಠ ಬದುಕೆಂಬುದನ್ನು ತಿಳಿ”, “ಮೊದಲು ಆಳಾಗುವುದನ್ನು ಕಲಿಯಿರಿ ಆಗ ನಾಯಕನ ಅರ್ಹತೆ ತಾನಾಗಿಯೇ ಬರುತ್ತದೆ” ಎಂಬಂತಹ ಅನೇಕ ಸಾಲುಗಳು ಅವರ ಚಿಂತನೆಗಳನ್ನು ಓದಿದಾಗೆಲ್ಲ ಮನಸ್ಸು ಚೈತನ್ಯಗೊಳ್ಳುತ್ತದೆ. ವಿವೇಕಾನಂದರ ನುಡಿಯಂತೆ ನಡೆದರೆ ಬಾಳು ಬೆಳಕಾಗುತ್ತದೆ. ಜಡತ್ವದ ಮನಸ್ಸುಗಳಿಗೆ ಮುಕ್ತಿ ಇವರ ಮಾತುಗಳಲ್ಲಿ ಅಡಕವಾಗಿದೆ.

ಅವರ ಈ ಆದರ್ಶಮಯ ಬದುಕು ಹುಟ್ಟಿದಾಗಿನಿಂದ ಬಂದಿಲ್ಲ, ನರೇಂದ್ರನ ಸತತ ಪ್ರಯತ್ನ, ಪರಿಶ್ರಮ, ಜನರೊಂದಿಗಿನ ಒಡನಾಟ, ದೇಶ ಸಂಚಾರದಿಂದ ಹೆಚ್ಚಾದ ಅನುಭವಗಳು ಸ್ವಾಮಿ ವಿವೇಕಾನಂದರನ್ನು ಹುಟ್ಟುಹಾಕಿದೆ. ನಮ್ಮ ನಿಮ್ಮ ಮಧ್ಯೆ ಯಾಕೆ ನಮ್ಮೊಳಗೆ ಒಬ್ಬ ನರೇಂದ್ರನಿರಬಹುದು. ಅವನನ್ನು ವಿವೇಕಾನಂದನಾಗಿಸುವುದು ನಮ್ಮ ಕೈಯಲ್ಲಿಯೇ ಇದೆ. ಕೆಚ್ಚೆದೆ, ಛಲ, ಉತ್ಸಾಹ, ಜೀವನ ಪ್ರೀತಿ ಇವುಗಳಿಂದ ನಾವು ಆದರ್ಶಮಯ ಬದುಕು ಕಟ್ಟಬಹುದು. “ಈ ಪ್ರಪಂಚ ಒಂದು ಗರಡಿ ಮನೆ ನಾವೆಲ್ಲರೂ ಬಲಿಷ್ಠರ ಆಗುವುದಕ್ಕೆ ಬಂದಿದ್ದೇವೆ” ಎಂಬ ಅವರ ಮಾತು ನೆನಪಿಸಿಕೊಳ್ಳಿ ಬದುಕು ಬದಲಾಗುತ್ತದೆ, ಜೀವನ ಜ್ಯೋತಿ ಬೆಳಗುತ್ತದೆ.

ಪೂಜಾ .ವಿ. ಹಂದ್ರಾಳ
ಎಸ್. ಡಿ. ಎಂ ಕಾಲೇಜು, ಉಜಿರೆ.

Prev Post

ಅಹಂಭಾವವನ್ನು ಸೋಲಿಸಿದ ಮಾನವೀಯತೆಯ ಕಥೆ ‘ಪಾರ್ಕಿಂಗ್’ | ಅನುರಾಗ್ ಗೌಡ

Next Post

ಗೋವಿಂದ ದಾಸ ಕಾಲೇಜಿನಲ್ಲಿ ‘ನೀನಾಸಂ ನಾಟಕೋತ್ಸವ’

post-bars

Leave a Comment

Related post