Back To Top

 ಅಳಿಯುವ ಮೊದಲೊಮ್ಮೆ ಓದಿ ಕಾರಂತಜ್ಜನ ‘ಅಳಿದ ಮೇಲೆ’ | ದಿವ್ಯಶ್ರೀ ಹೆಗಡೆ

ಅಳಿಯುವ ಮೊದಲೊಮ್ಮೆ ಓದಿ ಕಾರಂತಜ್ಜನ ‘ಅಳಿದ ಮೇಲೆ’ | ದಿವ್ಯಶ್ರೀ ಹೆಗಡೆ

ಅಳಿಯುವ ಮೊದಲು ಮನುಷ್ಯ ಹೇಗಿದ್ದ. ಅವನ ಜೀವಿತಾವಧಿ ಮುಗಿದ ಮೇಲೆ ಅವನ ಜೀವನ ಇತರರಿಗೆ ಹೇಗೆಲ್ಲ ಕಾಣಸಿಕ್ಕಬಹುದು. ಅಲ್ಲವೇ? ಇವೆಲ್ಲಾ ಪ್ರಶ್ನೆಗೆ ಉತ್ತರವಾಗಿ, ಒಬ್ಬ ವ್ಯಕ್ತಿಯ ವ್ಯಕ್ತಿತ್ವದ ಚಿತ್ರವನ್ನು,  ಮಿತ್ರನ ಜೀವನವನ್ನು ಒಳ್ಳೆಯ ನಿಟ್ಟಿನಲ್ಲಿ ಕಟ್ಟಿಕೊಟ್ಟದ್ದು ನಮ್ಮ ಕಾರಂತಜ್ಜ.

ಈ ಮನುಷ್ಯ ಜೀವನ ಒಂದು ತೆರೆನಾದ ಮಾಸಲು ಅಂಗಿಯಂತೆ ಎಂದು ಬೇಕಾದರೂ ಹರಿಯಬಹುದು. ಎಲ್ಲಿಯ ನಾನು, ಎಲ್ಲಿಯ ನೀನು . ಇಲ್ಲಿ ನಾನು ಎಂಬುದು ಇಲ್ಲವಯ್ಯ ಎಲ್ಲವೂ ಅವನೊಬ್ಬನ ಲೀಲೆಯಷ್ಟೆ. ಇದ್ದಷ್ಟೂ ದಿನ ಯಾರೆಲ್ಲಾ ಕೈ ಚಾಚಿ ಬಂದು ದೀನವಾಗಿ ಬೇಡಿದ್ದರೋ ಅವರೆಲ್ಲರಿಗೂ ತನ್ನಲ್ಲಿ ಏನಾದರೂ ಇದೆ ಎಂದಾದರೆ ಮುಲಾಜಿಲ್ಲದೆ ಬೇರೆಯ ಯೋಚನೆಯಿಲ್ಲದೆ ವ್ಯಯಿಸಿದ್ದ ಯಶವಂತರಾಯ. ಆತ ಸತ್ತ ಮೇಲೂ ಅಷ್ಟೇ ಆತನ ಹಣ ಸತ್ಕಾರ್ಯಗಳಿಗೆ ಬಳಕೆಯಾಗಿ ಸದ್ಗತಿಯನ್ನು ಪಡೆದುಕೊಂಡಿತ್ತು.

ಈ ಪುಸ್ತಕದಲ್ಲಿ ೨ ಪಾತ್ರಗಳು ಮನಸನ್ನ ಚಿಂತೆಗೆ ಒಳಪಡಿಸುತ್ತದೆ. ಒಂದು ಕಾರಂತರದ್ದು ಮತ್ತು ಮಿತ್ರ ಯಶವಂತರಾಯರದ್ದು. ರಾಯರ ಕೊನೆ ಆಸೆ ಕನಸುಗಳು ಎಲ್ಲವನ್ನು ಹೇಗೆ ಈ ಮಿತ್ರ ನಿಭಾಯಿಸಿಯಾನು ? ಏನೆಲ್ಲಾ ಸಾಹಸಗಳು ನಡೆದಿರಬಹುದು? ಎಂಬುದು ಈ ಪುಸ್ತಕದ ಸಾರಾಂಶ.

ಸಮುದ್ರದ ಅಲೆಯಂತೆ ಏರು ತಗ್ಗುಗಳು ಜೀವನದಲ್ಲಿ ಸಾಮಾನ್ಯ. ಅಲ್ಲಿ ಕಡಲ  ಅಲೆ ಹೇಗೆ ಕಾರಂತರನ್ನು ತಾಕಿರಬಹುದು. ಎಂದೆಲ್ಲಾ ತಿಳಿಯುವ ಬಯಕೆ ಇದ್ದರೆ ಈ ‘ಅಳಿದ ಮೇಲೆ’ ಪುಸ್ತಕ ಓದಿ.  ಇವರದೆನೂ ಹತ್ತು ಇಪ್ಪತ್ತು ವರ್ಷಗಳ ಸ್ನೇಹವೂ ಅಲ್ಲ. ದಿನವೂ ಒಡನಾಟವಿದ್ದ ಪರಿಚಯವೂ ಅಲ್ಲ. ಒಮ್ಮೆ ಪುಣೆಯಿಂದ ಮುಂಬಾಯಿಗೆ  ಪಯಣಿಸುವ ಸಂದರ್ಭದ ಭೇಟಿ. ಹೆಚ್ಚೆಂದರೆ ನಾಲ್ಕು ವರ್ಷಗಳಲ್ಲಿ ವರ್ಷಕ್ಕೆರಡು ಬಾರಿ ಭೇಟಿ ಅಷ್ಟೇ ಆದರೆ ಆ ಘಾಢವಾದ  ಭಾವಕ್ಕೆ ಬೆಲೆ ಎಲ್ಲಿಯದು. ಆಳವಾದ ಸ್ನೇಹಕ್ಕೆ ಅವರ ಹುಡುಕಾಟಗಳಿಗೆ ಎಲ್ಲವೂ ಉತ್ತರ ಈ ಪುಸ್ತಕದಲ್ಲಿದೆ. ಈ ಜೀವನ ಎಂಬ ಜಂಜಾಟದಲ್ಲಿ ರಾಯರಂತೆ ನೀರ್ಲಿಪ್ತವಾಗಿರಬೇಕೋ? ಅಥವಾ ಅವರ ಮಕ್ಕಳಂತೆ ಸ್ವಾರ್ಥದಿಂದಲೋ?. ತನ್ನದು ತಾನು ಎಂದಾದರೆ ಅದು ಸಾಕೆ .ಅದಾವುದೂ  ಬೇಡವೇ ಬೇಡ.

ಪ್ರೀತಿಯಿಂದ ಶುಶ್ರೂಷೆ ಮಾಡಿ ಮುಂಬೈಯಲ್ಲಿ ರಾಯರ ಕೈ ಅಲ್ಲಿ ಬೆಳೆದ ದಾದಾನ ನೀಷ್ಟೂರತನವನ್ನು ಹಳಿಯಲೆ ? ಅಥವಾ ಕಮಲೆಯಂತಹ ಹೆಂಡತಿ ಮತ್ತು ಮಕ್ಕಳು ಗಂಡ ಯಶವಂತ  ರಾಯರನ್ನು ಹಳಿದಿದ್ದನ್ನು  ನೀರಾಕರಿಸಲೇ?. ಹಾ! ಎಲ್ಲವೂ ಜೀವನದಲ್ಲಿ ಸರ್ವೇ ಸಾಮಾನ್ಯ. ಒಬ್ಬ ವ್ಯಕ್ತಿಯ ಬಗ್ಗೆ  ಒಬ್ಬರಲ್ಲಿ  ಕಹಿಯ ಭಾವ ಇನ್ನೂ ಕೆಲವರಲ್ಲಿ ಸಿಹಿಯ ಭಾವ ಆವರಿಸುವುದು. ಅವರವರ ಭಾವ ಅವರವರಿಗೆ ಬಿಟ್ಟದ್ದು. ಅದೇನೇ ಇರಲಿ ಈ ಆಳಿದ ಮೇಲೆ ಪುಸ್ತಕ ಒಂದೊಳ್ಳೆ ಓದು. ಅಳಿಯುವ ಮೊದಲೋಮ್ಮೆ ಓದಿ ಮುಗಿಸಬೇಕಾದ ಪುಸ್ತಕ.

ದಿವ್ಯಶ್ರೀ ಹೆಗಡೆ
ಎಸ್.ಡಿ.ಎಂ ಉಜಿರೆ
ಪ್ರಥಮ ಸ್ನಾತಕೋತ್ತರ ಪತ್ರಿಕೋದ್ಯಮ ವಿಭಾಗ

Prev Post

ಭತ್ತ ಕೃಷಿ ಮಾಡಿ ಖುಷಿ ಕಂಡ ಹೈಸ್ಕೂಲ್ ಮಕ್ಕಳು | ಶಾಮ ಪ್ರಸಾದ್…

Next Post

ನಿನ್ನನ್ನು ನೀನು ಕೇಳಿಕೊ, ನೀನು ಬದಲಾಗಿದ್ದೀಯ..| ಅಂಕಲೇಶ ಹೆಚ್

post-bars

Leave a Comment

Related post