Back To Top

 ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದಲ್ಲಿ ಯಶಸ್ವಿಯಾಗಿ ನಡೆದ “ ಧ್ಯೇಯವಾಕ್ಯಾನಾಂ ವಿಶ್ಲೇಷಣಮ್ ”ಕಾರ್ಯಾಗಾರ

ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದಲ್ಲಿ ಯಶಸ್ವಿಯಾಗಿ ನಡೆದ “ ಧ್ಯೇಯವಾಕ್ಯಾನಾಂ ವಿಶ್ಲೇಷಣಮ್ ”ಕಾರ್ಯಾಗಾರ

ಬೆಂಗಳೂರು : ಭಾರತೀಯ ಭಾಷಾ ಸಮಿತಿ , ನವದೆಹಲಿ ಸಹಯೋಗದಲ್ಲಿ ಬೆಂಗಳೂರಿನ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದಲ್ಲಿ ಆಯೋಜಿಸಿದ್ದ 3 ದಿನಗಳ ಕಾರ್ಯಾಗಾರವನ್ನು ಧಾರವಾಡದ ಕರ್ನಾಟಕ ಕಾಲೇಜಿನ ನಿವೃತ್ತ ಪ್ರಾಧ್ಯಾಪಕರಾದ ಡಾ.ವೇಣಿ ಮಾಧವ ಶಾಸ್ತ್ರಿ ಉದ್ಘಾಟಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ಮಾನ್ಯ ಕುಲಪತಿಗಳಾದ ಪ್ರೊ ಎಸ್.‌ ಅಹಲ್ಯಾ ರವರು ವಹಿಸಿದ್ದರು. ಭಾರತದ ಹೃದಯದಲ್ಲಿದೆ ಭಾರತೀಯ ಸಂಸ್ಕೃತಿ, ಈ ಹಿನ್ನೆಲೆಯಲ್ಲಿ ಸಂಸ್ಕೃತದ ಅರ್ಥ ವಿಸ್ತಾರವನ್ನು ಒಳಗೊಂಡ ಧ್ಯೇಯ ವಾಕ್ಯಗಳನ್ನು ವಿಶ್ಲೇಷಿಸಿಸುವ ಸದಾವಕಾಶ ನಮಗೆ ದೊರಕಿರುವುದು ಸಂತೋಷದ ವಿಷಯವಾಗಿದೆ. ಸಂಸ್ಕೃತದ ಆಳ ಮತ್ತು ಅಗಲವನ್ನು ದೇಶಕ್ಕೆ ಹಾಗೂ ಜಗತ್ತಿಗೆ ತಿಳಿಸುವ ಒಂದು ಅವಕಾಶ ನಮಗೆ ದೊರಕಿದೆ ಎಂದರು.
ಈ ಕಾರ್ಯಕ್ರಮದಲ್ಲಿ ನಿವೃತ್ತ ಪ್ರಾಧ್ಯಾಪಕರಾದ ಡಾ. ವೇಣಿಮಾಧವ ಶಾಸ್ತ್ರೀ, ವಿವಿ ಕುಲಪತಿ ಡಾ. ಎಸ್. ಅಹಲ್ಯಾ, ವಿಶ್ವವಿದ್ಯಾಲಯದ ಅಧ್ಯಯನಾಮಗದ ನಿರ್ದೇಶಕ ಪ್ರೊ.ವಿ.ಗಿರೀಶಚಂದ್ರ ಹಣಕಾಸು ಅಧಿಕಾರಿ ಎಸ್. ಕುಮಾರ್ ಇತರರು ಉಪಸ್ಥಿತರಿದ್ದರು.
Prev Post

ಗುಲಬರ್ಗಾ ವಿಶ್ವವಿದ್ಯಾಲಯದ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಘೋಷಣೆ

Next Post

ಅಕ್ಷರಕ್ಕೆ ಇಳಿಸಿದ ‘ವರಂಗ’ ಸೌಂದರ್ಯ । ಪೂಜಾ

post-bars

Leave a Comment

Related post