ಕ್ರೋಧಾತ್ಮ | ಮನೋಜ್ ಮಾರುತಿ
Scene-1
Joel Fernandez & Retired Police Commissioner Jogging ಮಾಡುತ್ತಿರುತ್ತಾರೆ. ಅಲ್ಲಿ ಒಬ್ಬ 20 ವರ್ಷದ ಹುಡುಗ ಮರಳಿನ ಮೇಲೆ ಚಿತ್ರ ಬಿಡಿಸುತ್ತಿರುತ್ತಾನೆ. ಅದನ್ನು ನೋಡಿದ Joel ಆಶ್ಚರ್ಯವಾಗಿ ನಿಲ್ಲುತ್ತಾರೆ.
Joel: (ಮೂಕವಿಸ್ಮಿತರಾಗಿ) What an art!!! ಹೇ ಹುಡುಗ ನೀನಾ ಬಿಡ್ಡಿದ್ದು ತುಂಬಾ ಚೆನ್ನಾಗಿದೆ.
ಆ ಹುಡುಗ : Joel Sir, ನಾನೇ ಬಿದ್ದಿದ್ದು ಚೆನ್ನಾಗಿದಿಯ?
Joel : ಎಲ ಇನ್ನ ನನ್ ಹೆಸ್ರು ನಿಂಗ್ ಹ್ಯಾಗ್ ಗೊತ್ತೋ…?
ಆ ಹುಡುಗ : Sir ನಾನೇ ನಿಮ್ ಮನೆಗೆ ಮುಂಚೆಯಿಂದ News paper ಹಾಕಿದ್ದು, ನೀವ್ ಬಂದು ಇಲ್ಲಿಗೆ 1 ತಿಂಗಳಾಯಿತು, ಮುಂಚೆ ನೀವ್ ಬೆಂಗಳೂರು ಅಲ್ಲಿ ಇದ್ರಿ Police Commissioner ಅಲ್ವಾ sir, ನಿಮ್ ಮಗ ಎಲ್ಲ ಹೇಳಿದ್ರು ನಂಗೆ.
Joel: (ನಕ್ಕು) ಪರವಾಗಿಲ್ಲ ಕಣೋ ನನ್ ಬಗ್ಗೆ ತುಂಬಾ ಚೆನ್ನಾಗಿ ತಿಳ್ಕೊಂಡಿದೀಯ…! ನಿನ್ ಹೆಸರೇನು..?
ಆ ಹುಡುಗ : ಸುಬ್ರಮಣ್ಯ ಅಂತ sir ನೀವ್ ಬೇಕಾದ್ರೆ ಸುಬ್ಬು ಅಂತ ಕರಿಬೋದು ಯಾಕಂದ್ರೆ ನಿಮ್ ಮಗನು ಹಂಗೆ ಕರಿಯೋದು sir.
Joel : ok ಸುಬ್ಬು ನೀನ್ ಮುಂಚೆಯಿಂದನು ಇದೆ ಊರಲ್ಲಿ ಇರೋದ…?
ಸುಬ್ಬು : ಇಲ್ಲ ಸರ್ ನಮ್ಮು ಮೈಸೂರು ನಾವ್ ಈ ಕರಾವಳಿ side ಬಂದು ಒಂದ್ 10-12 ವರ್ಷ ಆಯ್ತು
Joel: ನಿಮ್ ತಂದೆ ತಾಯಿ…?
ಸುಬ್ಬು : ನಮ್ ತಂದೆ ಇಲ್ಲ ತಾಯಿ ಇದಾರೆ, ಅವ್ market ಅಲ್ಲಿ ಮೀನ್ ಮಾರ್ತಾರೆ ನಾನು ಮೀನು ಇಡ್ಕೊಂಡು ಬರ್ತೀನಿ ಜೊತೆಗೆ ಈ paper ಇಲ್ಲ ಹಾಕ್ತಿನಿ ಮತ್ತೆ ಸಣ್ಣ ಪುಟ್ಟ side business ಇಷ್ಟೇ ಸರ್ ~~ …..!
Joel: (ಮರಳಿನ ಮೇಲೆ ಬಿಡಿಸಿದ ಚಿತ್ರಕ್ಕೆ ಕೈ ತೋರಿಸಿ) ಹಾಗಿದ್ರೆ ಇದೇನಿದು…..!
ಸುಬ್ಬು : (emotionally) ಇದು ನನ್ ನಗು ಸರ್ ನನ್ನ ಖುಷಿ ನಮ್ ಅಪ್ಪ ಸತ್ತಾಗ ತುಂಬಾನೇ ಅತ್ತಬಿಟೇ sir ಆಮೇಲೆ ನಮ್ ಅಪ್ಪನ ಚಿತ್ರನ paper ಮೇಲೆ ಬಿಡಿಸಿದ್ದ ಸರ್ ಆವಾಗ್ಲೆ ನಂಗೆ ಖುಷಿ ಆಗಿದ್ದು ಅದೆ ಸರ್ ಇದು ನನ್ನ ನಗು ಅಂತ ಹೇಳಿದ್ದು ನಾನ್ ಬೇಜಾರ್ ಅಲ್ಲಿ ಇದ್ದಾಗಲೆಲ್ಲ ಚಿತ್ರ ಬಿಡುಸ್ತಿನಿ ಸರ್…..
Joel : ( ಮರಳಿನ ಮೇಲೆ ಬಿಡಿಸಿದ ಚಿತ್ರಕ್ಕೆ ಕೈ ತೋರಿಸಿ) ಹಾಗಿದ್ರೆ ಈ ಹುಡುಗಿ ಯಾರು?
ಸುಬ್ಬು : (ನಾಚಿಕೆಯಿಂದ) ನಾನ್ ಪ್ರೀತಿಸುತ್ತಿರೋ ಹುಡುಗಿ ಸರ್….!
Joel : Oh Lover…..! Great …
ಸುಬ್ಬು : ಗೊತ್ತಿಲ್ಲ ಸರ್…
Joel : ಏನು ಗೊತ್ತಿಲ್ಲ ಮತ್ತೆ ಏನೋ ನೀನು ಲವ್ ಮಾಡ್ತಿದೀಯಾ…?
ಸುಬ್ಬು : ಸರ್ ದಯವಿಟ್ಟು ತಪ್ಪು ತಿಳ್ಕೊಬೇಡಿ, ನಂಗೆ ಈ ಹುಡುಗಿ ಈ ಪ್ರಪಂಚದಲ್ಲಿ ಇದಾಳೋ ಇಲ್ಲೋ ಅನ್ನೋದೇ doubt ಸರ್
Joel : (shock)
ಸುಬ್ಬು : ಅಂದ್ರ ಸರ್ ನಾನು ಇಷ್ಟ ಪಡೋ ಹುಡುಗಿ ಇದೆ ರೀತಿ ಇರ್ಬೇಕು ಅಂತ ಕಲ್ಪನೆ ಮಾಡ್ಕೊಂಡು ಬಿಡಿಸಿರೋದು ಇದು (ಅವ್ರ ಜೇಬಿನಿಂದ ಒಂದು ಚೀಟಿ ತೆಗೆದು) ನೋಡಿ ಸರ್ ಇವಳೇ ನನ್ನ ಕನಸು. ಅವು, ಸಿಗ್ತಾಳೋ ಇಲ್ಲೋ ಗೊತ್ತಿಲ್ಲ ಆದ್ರೆ ಅವಳನ್ನೇ ನಾನು ಜೀವನ ಪೂರ್ತಿ ಇಷ್ಟ ಪಡ್ತಿನಿ.
Joel : ತುಂಬಾ cute ಆಗಿ ಬಿಡಿಸಿದಿಯ, ಒಳ್ಳೆ ವಿಚಿತ್ರ ಕಣಯ್ಯಾ ನಿನ್ನ ಪ್ರೇಮ ಕಥೆ ಇರ್ಲಿ ಆದಷ್ಟು ಬೇಗ ಈ ಹುಡುಗಿ ನಿನ್ನ ಕಣ್ಮುಂದೆ ಕಾಣುಸ್ಕೊಳ್ಳಿ ಆ ಹುಡುಗಿ ಇದೆ ಊರಲ್ಲಿ ಇರ್ಲಿ ಅಂತ ಆಶಿಸ್ತಿನಿ.
ಸುಬ್ಬು : Thank u sir ನೀವ್ ಹೇಳಿದ್ ಮೇಲೆ ಮುಗಿತು ಬಿಡಿ ನಾಳೆ ಇಲ್ಲಿಗೆ ಇದೆ ಜಾಗಕ್ಕೆ ಬನ್ನಿ ನಾನು ನಿಮ್ಮ
ಚಿತ್ರ ಬಿಡುಸ್ಕೊಂಡು ಬರ್ತೀನಿ.
Joel : ನನ್ನ ಚಿತ್ರ ಬಿಡುಸ್ತೀಯ..? ಬಿಡು ನಾಳೆ ಇಲ್ಲಿಗೆ ಬಂದು ಕಾಯ್ತಾ ಇರ್ತಿನಿ ಬರ್ಲಾ…..!
Scene-2
ಮರುದಿನ ಅದೇ ಜಾಗದಲ್ಲಿ Joel ಬರ್ತಾನೆ ತುಂಬಾ ಕುತೂಹಲದಿಂದ ನೋಡ್ತಾ ಬರ್ತಾನೆ, ಸುಬ್ಬು ಮತ್ತೆ ಮರಳಲ್ಲಿ ಏನೋ ಚಿತ್ರ ಬಿಡುಸ್ತಾ ಇದ್ದಾನೆ.
Joel : ಏನಪ್ಪ ಕಲೆಗಾರ ಯಾರ ಚಿತ್ರ ಬಿಡಿಸುತ್ತಿದ್ದ. ನಂದು ಬಿಡುಸದೆನಯ್ಯ ನಾನು ನಿನ್ನೆ ರಾತ್ರಿಯಿಂದ ಕಾಯಿತಾ ಇದ್ದೀನಿ ಯಾಕಂದ್ರೆ ನನ್ life ಒಬ್ರಾದ್ರೂ ನನ್ ಚಿತ್ರ ಬಿಡುಸ್ತಿನಿ ಅಂತ ಹೇಳುದ್ರಲಾ ಅಂತ.
(ಮರಳಲ್ಲಿ ಅರಳಿದ ಚಿತ್ರ ನವಿಲುಗರಿ ಹಾಗೂ ಸುದರ್ಶನ ಚಕ್ರ ಆಗಿರುತ್ತದೆ.)
Joel :
0 2
(ಅವನ ಕಣ್ಣಲ್ಲಿ Joel ಗೆ ಕಂಡದ್ದು ಸುಬ್ಬುವಿನ ಭಯದ ಕಣ್ಣೀರು ಅದನ್ನು ನೋಡಿ ಕರುಣೆ ಉಕ್ಕಿ ಬಂತು.)
Joel: ……?!
Scene-3
(ಸುಬ್ಬುವಿನ ತಾಯಿಗೆ ಒಂದು 35 ವಯಸ್ಸು ತೀರಾ ಚಿಕ್ಕ ವಯಸ್ಸಿನಲ್ಲೇ ಮದುವೆ ಆಗಿತ್ತು. ಗಂಡ ಇಲ್ಲ ವಿಧವೆ ಸಂಸಾರ ಸಾಗಿಸಲು ಬಹಳ ಕಷ್ಟ ಪಟ್ಟಳು. ಹೀಗಿರುವಾಗ ಆ ರಾತ್ರಿ ಮೀನು market ನಿಂದ ಮನೆಗೆ ಬರುವಾಗ ಒಬ್ಬ ಅವಳನ್ನು ತಡೆದು ನಂಗೆ ಮೀನು ಬೇಕು ಎಂದು ಕೇಳಿದ)
ಅವನು : 2 ಕೆಜಿ ಮೀನು ಬೇಕು…?
ಸುಬ್ಬುವಿನ ತಾಯಿ : ಮೀನಿಲ್ಲ ಎಲ್ಲ ಖಾಲಿ ಆಗಿದೆ Market ಅಲ್ಲಿ ಇರುತ್ತೆ ಹೋಗಿ ನೋಡಿ ಇಲ್ಲ ಅಂದ್ರೆ ನಾಳೆ ಸಿಗುತ್ತೆ..!
ಅವನು : ಸರಿ ಬಿಡು…
(ಸುಬ್ಬುವಿನ ತಾಯಿ ಹೋಗ್ತಾಳೆ ಅವಳ ಹಿಂದೆ ಇವನು ಹಿಂಬಾಲಿಸ್ತಾನ, ಅವಳಿಗೆ ಭಯ ಆಗಿ ಎದುಸಿರು ಬಿಡುತ್ತ ಹೆಜ್ಜೆ ಜೋರಾಗಿ ಇಡುತ್ತಾಳೆ. ಅವನು ಅವಳ ಹಿಂದೇನೆ ಹೋಗ್ತಾನೆ, ಅವಳು ಮನೆ ತಲುಪುವಷ್ಟರಲ್ಲಿ ಅವಳನ್ನು ಹಿಡಿದು ಚಿತ್ರಹಿಂಸೆ ನೀಡುತ್ತಾನೆ. ಬಲವಂತವಾಗಿ ಅವಳನ್ನ ಅತ್ಯಾಚಾರ ಮಾಡುತ್ತಾನೆ, ಬಲವಂತದ ಅತ್ಯಾಚಾರದಿಂದ ಅವಳು ಕೊಲೆ ಕೂಡ ಆಗ್ತಾಳೆ. ಅವನು ಅವಳನ್ನು ಕೊಲೆ ಮಾಡಿ ಹೋಗ್ತಾನೆ, ಇದನ್ನು ಒಬ್ಬ ಅಜ್ಜಿ ನೋಡಿ ಸುಬ್ಬುವನ್ನು ಕರ್ಕೊಂಡು ಬರ್ತಳೆ, ಸುಬ್ಬುವಿನ ಅರಚಾಟ ಮುಗಿಲು ಮುಟ್ಟುತ್ತೆ, ಅತ್ಯಾಚಾರ ಮಾಡಿದ ವ್ಯಕ್ತಿ ಯಾರು ಎಂದು ಗೊತ್ತಾದಾಗ, ಆ ಊರಿಗೆ ಹೊಸದಾಗಿ ಬಂದಿರೋ S.I (Police) ಎಂದು ತಿಳಿದು ಬರುತ್ತೆ, ಸುಬ್ಬು ತುಂಬಾ ಹೆದರುತ್ತಾನೆ…..)
(ಸಮುದ್ರ ದಡ…)
Joel : ಸುಬ್ಬು….. (ಕೋಪದಲ್ಲಿ ) ನೀನು ಒಬ್ಬ ಗಂಡಸ…..? ನರ ಇರೋನು ಯಾವನೇ ಆಗಿದ್ರು “ಕ್ರೋಧ”
ಅನ್ನೋದು ಬರುತ್ತೆ ಸಣ್ಣ ಹುಳು ಜೇನಿಗೂ ಕೂಡ ಸಿಟ್ಟು ಅನ್ನೋದು ಬರುತ್ತೆ ನಿನ್ನ ತಾಯಿ ಆ ಹೊತ್ತಲ್ಲಿ
ಎಷ್ಟು ಕಷ್ಟಪಟ್ಟಿರಬಹುದು ಆ ಕಷ್ಟನ ನೀನು ಕಣ್ಣೀರಿನಿಂದ ತೊಳಿತಿದಿಯ…? ಆ ಕಷ್ಟಕ್ಕೆ ರಕ್ತದಿಂದ
ಅಭಿಷೇಕ ಮಾಡೋಕು, ನಿನ್ನ ತಾಯಿಯ ಪಾದಕೆ ಅವನ ರಕ್ತ ಸೋಕಬೇಕು. ತಾಯಿಯನ್ನ ಯಾರು
ಅತ್ಯಾಚಾರ ಮಾಡಿದ್ರು ಅಂತ ಗೊತ್ತಿದ್ರು ಒಳ್ಳೆ ಷಂಡನ ತರ ಅಳ್ತಾ ಕೂತಿದೀಯಲ, ಬದುಕಲ್ಲಿ
ಅನ್ಯಾಯನ ಕೊಲೆ ಮಾಡೋಕು, ತಾಯಿ ವಿಷಯದಲ್ಲಂತೂ ಹೊಸಕಾಕಿ ಬಿಡಬೇಕು. ಸುಮ್ಮೆ ಏನ್
ಕೂತಿದೀಯ ಹೊರಡು, ಇದು ತಪ್ಪಲ್ಲ ಯಾಕೆಂದ್ರ ದ್ವಾಪರ ಯುಗದಲ್ಲಿ ದೌಪದಿಯ ಸೀರೆಯನ್ನ ಎಲ್ಲರ
ಮುಂದೆ ಎಳೆದಿದ್ದಕ್ಕೆ ದುಷ್ಕಾಸನನ ಕರುಳು ಬಗೆದು ಹಾಕ ಆ ಭೀಮ. ನೀನಿನ್ನೂ ನವಿಲು ಗರಿ, ಚಕ್ರ
ಬಿಡುಸ್ಕೊಂಡು ಕೂತಿದೀಯ ಲೋ ನವಿಲು ಗರಿ ಹಿಡಿದ ಕೈ ನೇ ಸುದರ್ಶನ ಚಕ್ರ ಹಿಡಿದುದ್ದು.
ಎದ್ದೇಳು…………ಆ ಸೂಳೆಮಗನ್ನ ಸಿಗಿದು ಹಾಕು.
Scene-4
(ಸುಬ್ಬು ಅಲ್ಲಿಂದ ಹೊರಟಿದ್ದಾಗ ಅವನ ಕಣ್ಣಲ್ಲಿ ಅತಿ ಭಯಂಕರವಾದ ಕ್ರೋಧ ವಿತ್ತು ಕಣ್ಣಲ್ಲಿದ್ದ ಇಜ್ಜಲಿಗೆ ಜೋಲ್ ಬೆಂಕಿ ಹಚ್ಚಿಬಿಟ್ಟರು ಇನ್ನದು ಆರೋದಕ್ಕೆ ತುಂಬಾ ಹೊತ್ತು ಬೇಕು )
(ಸುಬ್ಬು S.I ಮನೆಗೆ ಹೋದಾಗ ಅಲ್ಲಿ S.I ಗಿಡಕ್ಕೆ ಹೊರಗೆ ನೀರು ಹಾಕುತ್ತಿದ್ದ ಸುಬ್ಬು ಅವನನ್ನ ಎಳೆದು ಕತ್ತಿಗೆ ಹಗ್ಗ ಹಾಕಿ ಇಸುಕುತ್ತಿದ್ದ ಅಲ್ಲಿದ್ದ ಇಬ್ಬರು Constables S.I ಅನ್ನು ಅವನಿಂದ ಬಿಡಿಸಲು ಹೊರಟರು ಆದರೆ ಅವನ ಕಣ್ಣಲ್ಲಿ ಹೊತ್ತಿದ ಆ ಬೆಂಕಿ ಈಗ ಜ್ವಾಲಮುಖಿಯಾಗಿ ಚಿಮ್ಮತ್ತಿದೆ. S.I ಅನ್ನು ಕೊಲೆ ಮಾಡಿದ ಅವನು ಅವನ ದೇಹವನ್ನು ಚೂರಿಯಲ್ಲಿ ಚುಚ್ಚಿ ಚುಚ್ಚಿ ಬಿಡುತ್ತಾನೆ.)
(SI ಕೊಲೆಯಾದ ನಂತರ ಇಬ್ಬರು Constables ಅವನನ್ನು ಹಿಡಿದು ಎಳೆಯುತ್ತಿರುತ್ತಾರೆ, ಅಷ್ಟರಲ್ಲಿ S.I ಮನೆ ಒಳಗಿಂದ ಒಂದು ಹುಡುಗಿ ಓಡಿ ಬರುತ್ತಾಳೆ “ಅಪ್ಪ” ಎಂದು ಕೂಗಿಕೊಂಡು. ಸುಬ್ಬು ಅವಳನ್ನ ನೋಡಿ ಆಶ್ಚರ್ಯ ಚಕಿತನಾಗುತ್ತಾನೆ. ಏಕೆಂದರೆ ಅವನು ಚಿತ್ರ ಬಿಡಿಸಿದ, ಅವನು ಮನಸಾರೆ ಪ್ರೀತಿಸಿದ ಆ ಹುಡುಗಿ ಇವಳೇ ಆ ಅತ್ಯಾಚಾರಿ S.I ಮಗಳು, ಅವಳು ಸುಬ್ಬುವನ್ನ ನೋಡಿ ತೀವ್ರ “ಕ್ರೋಧ” ಗೊಂಡಳು. ಸುಬ್ಬುವಿನ ಕಣ್ಣಲ್ಲಿ ನೀರು ತುಂಬಿತು Constables ಅವನನ್ನ ಎಳೆದು leep ನಲ್ಲಿ ಕೂರಿಸಿದರು. Jeep ಒಳಗೆ ಕೂತ ಅವನು ತನ್ನ ಜೇಬಿನೊಳಗಿದ್ದ ಆ ಹುಡುಗಿಯ ಚಿತ್ರವನ್ನು ತೆಗೆದು ಹರಿದು ಹಾಕುತ್ತಾನೆ…..)
(ಸುಬ್ಬುವಿಗೆ ನೆಮ್ಮದಿ ಕೊಡಲು ಹೋದ Joel S.! ಯನ್ನು ಕೊಲ್ಲುವುದರ ಜೊತೆಗೆ ಸುಬ್ಬುವಿನ ಪ್ರೀತಿಯನು ಕೊಂದ ಚಿಗುರಬೇಕಿದ್ದ ಪ್ರೀತಿಯನ್ನು ಮೊಳಕೆಯಲ್ಲೇ ಚಿವುಟಿ ಹಾಕಿದ, ಈಗ ಸುಬ್ಬು ಹಾಗೂ ಆ ಹುಡುಗಿಯ ಜೀವನ ಇರುವುದು ಈ ಕಥೆಯನ್ನು ಆರಂಭಿಸಿದ Joel Fernandez
-ಮನೋಜ್ ಮಾರುತಿ. B. E (Computer Science )
ಡಾನ್ ಬಾಸ್ಕೋ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಬೆಂಗಳೂರು