ಪುಸ್ತಕ ಬಿಡುಗಡೆ ಮತ್ತು ವಿಶೇಷ ಉಪನ್ಯಾಸ ಕಾರ್ಯಕ್ರಮ
ಕಲಬುರಗಿ,ಡಿ 13: ವಿದ್ಯಾರ್ಥಿಗಳಿಗೆ ಪರೀಕ್ಷೆಗಳೆಂದರೆ ಸಂಭ್ರಮ ಎಂಬ ಭಾವನೆ ಮೂಡಿದಾಗ ಉತ್ತಮ ಅಂಕಗಳನ್ನು ಪಡೆಯಬಹುದು ಎಂದು ಖ್ಯಾತ ಮನೋವೈದ್ಯ ಡಾ. ಸಿ.ಆರ್. ಚಂದ್ರಶೇಖರ ಹೇಳಿದರು.
ಕಾಯಕ ಫೌಂಡೇಷನ ಶಿಕ್ಷಣ ಸಂಸ್ಥೆ, ಸಿ.ಆರ್.ಸಿ ಸ್ನೇಹ ಬಳಗದ ಸಂಯುಕ್ತಾಶ್ರಯದಲ್ಲಿ, ನಗರದ ಕೆಸರಟಗಿ ರಸ್ತೆಯಲ್ಲಿರುವ ಕಾಯಕ ಫೌಂಡೇಷನ್ ವಸತಿ ಸಹಿತ ವಿಜ್ಞಾನ ಮತ್ತು ವಾಣಿಜ್ಯ ಪಿ.ಯು ಕಾಲೇಜಿನಲ್ಲಿ ಪುಸ್ತಕ ಬಿಡುಗಡೆ ಮತ್ತು ವಿಶೇಷ ಉಪನ್ಯಾಸ ಹಾಗೂ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಹತ್ತನೆಯ ಮತ್ತು ದ್ವಿತೀಯ ಪಿ.ಯು.ಸಿ ವಿದ್ಯಾರ್ಥಿಗಳಿಗೆ ಪರೀಕ್ಷೆ ಎಂಬ ಭಯ ಹೋಗಿ ಪರೀಕ್ಷೆಯು ಸಂಭ್ರಮವಾದರೆ ಸರಳವಾಗಿ, ಸಂತೋಷವಾಗಿ, ಖುಷಿಯಾಗಿ ಪರೀಕ್ಷೆಯನ್ನು ಎದುರಿಸಿ ಮತ್ತು ಉತ್ತಮ ಅಂಕಗಳನ್ನು ಮತ್ತು ಉತ್ತಮ ಸಾಧನೆ ಮಾಡುವುದರಲ್ಲಿ ಎರಡು ಮಾತಿಲ್ಲವೆಂದು ಹೇಳಿದರು. ಆದ್ದರಿಂದ ವಿದ್ಯಾರ್ಥಿಗಳು ದಿನನಿತ್ಯ ಸಮಯಪೂರಕವಾಗಿ ಅಭ್ಯಾಸ ಮಾಡಿದರೆ ಪರೀಕ್ಷೆಯು ಕಬ್ಬಿಣದ ಕಡಲೆಯಾಗುವುದಿಲ್ಲವೆಂದು ಹೇಳಿದರು, ಅವರು ಬರೆದ ಪುಸ್ತಕಗಳನ್ನು , ಸಾಕ್ಷರತಾ ಮತ್ತು ಶಿಕ್ಷಣ ಇಲಾಖೆ, ಜಿಲ್ಲಾ ಉಪನಿರ್ದೇಶಕ ಸಕರೆಪ್ಪಗೌಡ ಬಿರಾದಾರ ಬಿಡುಗಡೆ ಮಾಡಿದರು.
ಕಾಯಕ ಫೌಂಡೇಷನ್ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಶಿವರಾಜ ಟಿ. ಪಾಟೀಲ ಅವರು ಡಾ. ಸಿ.ಆರ್.ಚಂದ್ರಶೇಖರ ರವರ 75ನೇ ಹುಟ್ಟುಹಬ್ಬದ ಸಂಭ್ರಮವನ್ನು ಪುಸ್ತಕಗಳ ಬಿಡುಗಡೆ ಮೂಲಕ ಆಚರಿಸುವುದರ ಮೂಲಕ ಇದು ಒಂದು ವಿಶೇಷ ಕಾರ್ಯಕ್ರಮಎಂದು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನುಸಪ್ನಾರೆಡ್ಡಿ ಎಸ್. ಪಾಟೀಲ ವಹಿಸಿದರು. ಹಾಗೂ ಕಾರ್ಯಕ್ರಮದಲ್ಲಿ ಗೌರವ ಅತಿಥಿಗಳಾಗಿ ಡಾ.ಆರ್. ವೆಂಕಟರೆಡ್ಡಿ ಮತ್ತು ಎಸ್.ಎಸ್. ಪಾಟೀಲ ಹಾಗೂ ಮುುಖ್ಯ ಅತಿಥಿಗಳಾಗಿ ಶಿವಪುತ್ರಪ್ಪ , ಮಹೇಶ ಹೂಗಾರ, ಡಾ.ರಾಜಕುಮಾರ ಪಾಟೀಲ, ಗುರುಪಾದಪ್ಪ ಕೋಗನೂರ, ಶರಣಬಸಪ್ಪ ಮಾಗಶೆಟ್ಟಿ, ಕಲ್ಲಾಲಿಂಗ ದಿಕ್ಸಂಗಿಕರ್, ಚಂದ್ರಕಾಂತ ತಳವಾರ, ಆನಂದ ಕೋಡೆಕಲ್, ಶರಣಬಸಪ್ಪ ಎಚ್. ಪಾಟೀಲ, ಶಿವರಾಮ ಚವ್ಹಾಣ, ಚೆನ್ನಬಸಪ್ಪ ಬಿರಾದಾರ, ಅಂಜುಂ ನವೀದ, ಮಲ್ಲಿಕಾರ್ಜುನ ಬಿರಾದಾರ, ಸಂತೋಷ ಹೂಗಾರ,ಅಣವೀರ ಹರಸೂರ, ರವಿಚಂದ್ರ ಮೇಲಶೆಟ್ಟಿ,ಸಾವಿತ್ರಿ ಪಾಟೀಲ, ಮಹಾಂತೇಶ ಕುಂಬಾರ,ಕಾಲೇಜಿನ ಉಪನ್ಯಾಸಕರು, ಶಿಕ್ಷಕರು, ಸಿಬ್ಬಂದಿವರ್ಗ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದರು. ನಿರೂಪಣೆಯನ್ನು ಮಾನಸ್ ಎಂ. ಹಾಗೂ ಸ್ವಾಗತ ಭಾಷಣವನ್ನು ಪ್ರಾಂಶುಪಾಲ ನಾಗರಾಜ ಕಾಮಾ ನೆರವೇರಿಸಿದರು.