ಅಲೋಶಿಯಸ್ ಕಾಲೇಜಿನಲ್ಲಿ `ಪಿಲಿವೇಷ’ ಪುಸ್ತಕ ಬಿಡುಗಡೆ
ಮಂಗಳೂರು: ಸಂತ ಅಲೋಶಿಯಸ್ ಪ್ರಕಾಶನದ ವತಿಯಿಂದ ಕಾಲೇಜಿನ ಭೌತಶಾಸ್ತ್ರ ಪ್ರಾಧ್ಯಾಪಕರಾದ ಡಾ. ಚಂದ್ರಶೇಖರ ಶೆಟ್ಟಿಯವರ ಕೃತಿ, `ಪಿಲಿವೇಷ’ ಪುಸ್ತಕ ಬಿಡುಗಡೆ ಸಮಾರಂಭವು ಅಕ್ಟೋಬರ್ 18, 2023 ರಂದು ಕಾಲೇಜಿನ ಸಹೋದಯ ಸಭಾಂಗಣದಲ್ಲಿ ನಡೆಯಿತು.
ಖ್ಯಾತ ಬರಹಗಾರ ಹಾಗೂ ಸಂತ ಅಲೋಶಿಯಸ್ ಕಾಲೇಜಿನ (ಸ್ವಾಯತ್ತ) ವಿಶ್ರಾಂತ ಕನ್ನಡ ಪ್ರಾಧ್ಯಾಪಕರಾದ ಡಾ. ಎನ್.ದಾಮೋದರ ಶೆಟ್ಟಿ ಅವರು ಪುಸ್ತಕವನ್ನು ಅನಾವರಣಗೊಳಿಸಿದರು. ಈ ಪುಸ್ತಕದಂತಹ ಗಂಭೀರ ಕೃತಿಗಳ ಮೂಲಕ ಅಂತಹ ಕಲಾ ಪ್ರಕಾರಗಳನ್ನು ಉಳಿಸುವ ಅಗತ್ಯತೆ ಮತ್ತು ಮಹತ್ವವನ್ನು ಅವರು ಹೇಳಿದರು.
ಮಂಗಳೂರು ವಿಶ್ವವಿದ್ಯಾನಿಲಯದ ಕನ್ನಡ ವಿಭಾಗದ ವಿಶ್ರಾಂತ ಪ್ರಾಧ್ಯಾಪಕ ಡಾ. ಬಿ.ಶಿವರಾಮ ಶೆಟ್ಟಿ ಪುಸ್ತಕದ ವಿಷಯ ಕುರಿತು ಮಾತನಾಡಿದರು. ಪುಸ್ತಕದಲ್ಲಿ ಲೇಖಕರು ವ್ಯವಹರಿಸಿದ ವಿವಿಧ ವಿಷಯಗಳನ್ನು ಅವರು ಸೂಚಿಸಿದರು.
ಸಂತ ಅಲೋಶಿಯಸ್ ಕಾಲೇಜು ಸಂಸ್ಥೆಗಳ ರೆಕ್ಟರ್ ರೆ.ಫಾ. ಮೆಲ್ವಿನ್ ಜೋಸೆಫ್ ಪಿಂಟೊ ಎಸ್.ಜೆ.ಯವರು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಹಿಂದಿನ ದಿನಗಳಲ್ಲಿ ಎಲ್ಲರೂ ನೋಡಬಹುದಾದ ಪ್ರದರ್ಶನಗಳನ್ನು ನೆನಪಿಸಿಕೊಂಡರು. ಸಂತ ಅಲೋಶಿಯಸ್ ಕಾಲೇಜಿನ ಪ್ರಾಂಶುಪಾಲರಾದ ಡಾ. ಪ್ರವೀಣ್ ಮಾರ್ಟಿಸ್ ಎಸ್.ಜೆ ಅವರು ಲೇಖಕರನ್ನು ಅಭಿನಂದಿಸಿ, ಕಾಲೇಜಿನಲ್ಲಿ ಬರವಣಿಗೆಯ ಸಂಪ್ರದಾಯವನ್ನು ಮುಂದುವರಿಸಲು ಎಲ್ಲಾ ಸಿಬ್ಬಂದಿಗೆ ಇದೊಂದು ಅವಕಾಶವಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಹಿರಿಯ ಪಿಲಿವೇಷ ಕಲಾವಿದರಾದ ಕದ್ರಿ ಗಂಗಾಧರ ದೇವಾಡಿಗ, ಸಂತು (ತಾಸೆ ಕಲಾವಿದ), ರಮೇಶ್ (ಡೋಲು ಕಲಾವಿದರು), ಮತ್ತು ಮೊಹಮ್ಮದ್ ಆಸಿಫ್ (ಪಿಲಿವೇಷ ಕಲಾವಿದರನ್ನು ಬೆಂಬಲಿಸುವವರು) ಮುಂತಾದವರನ್ನು ಸನ್ಮಾನಿಸಲಾಯಿತು. ಡಾ.ಚಂದ್ರ ಶೇಖರ ಶೆಟ್ಟಿ ಸ್ವಾಗತಿಸಿದರು. ಸಂತ ಅಲೋಶಿಯಸ್ ಪ್ರಕಾಶನದ ನಿರ್ದೇಶಕಿ ಡಾ.ವಿದ್ಯಾವಿನುತ ಡಿಸೋಜ ವಂದಿಸಿದರು.