ತಲುಪದ ಸಮುದಾಯ ಬಾನುಲಿಗಳನ್ನ ತಲುಪುವ ವಿಧಾನ ಕಾರ್ಯಾಗಾರ
ಧಾರವಾಡ ಕೃಷಿ ವಿಜ್ಞಾನ ವಿಶ್ವವಿದ್ಯಾಲಯದ ಸಮುದಾಯ ಬಾನುಲಿ ಕೇಂದ್ರ, ವಿಸ್ತರಣಾ ನಿರ್ದೇಶನಾಲಯ ICAR-ರಾಷ್ಟ್ರೀಯ ಕೃಷಿ ಉನ್ನತ ಶಿಕ್ಷಣ ಯೋಜನೆ ಮತ್ತು ಸಾಂಸ್ಥಿಕ ಅಭಿವೃದ್ಧಿ ಯೋಜನೆಯಡಿ ಆಯೋಜಿಸಿದ
“ತಲುಪದ ಸಮುದಾಯ ಬಾನುಲಿಗಳನ್ನ ತಲುಪುವ ವಿಧಾನ” ತರಬೇತಿ ಕಾರ್ಯಕ್ರಮದಲ್ಲಿ ಕವಿವಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ಎರಡು ದಿನಗಳ ತರಬೇತಿ ಕಾರ್ಯಕ್ರಮದಲ್ಲಿ ವಿಧ್ಯಾರ್ಥಿಗಳು, ಕೃಷಿ ಸಮುದಾಯ ಬಾನುಲಿಯ ಕಾರ್ಯನಿರ್ವಹಣೆ, ರೇಡಿಯೋ ಪ್ರಸಾರಕ್ಕೆ ಬೇಕಾದ ಅಗತ್ಯ ಕೌಶಲ್ಯಗಳು, ಸಮುದಾಯ ಬಾನುಲಿಗಳ ಪ್ರಭಾವ ಮತ್ತು ಪ್ರಾಮುಖ್ಯತೆ, ಜಾನಪದ ಕಲೆಗಳ ಪ್ರಕಾರ, ರೇಡಿಯೋ ಸ್ಕ್ರಿಪ್ಟ್ ಬರವಣಿಗೆ ಮುಂತಾದವುಗಳ ಬಗ್ಗೆ ತರಬೇತಿ ಪಡೆದರು.
ಸುರೇಖಾ ಸಂಕ ನಗವಡರ, ಸಿ.ಯು ಬೆಳ್ಳಕ್ಕಿ , ಜೆ.ಎಮ್ ಚಂದುನವರ ಮುಂತಾದವರು ಇದ್ದರು.