ಲೇಖಕ ಮಂಜುನಾಥ ಎಸ್. ಪಾಟೀಲ ಅವರ ಅಧ್ಯಯನ ಕೃತಿ ಯೂಸುಫ್ ಆದಿಲ್ ಖಾನ. ವಿಜಯಪುರದ ಆದಿಲ್ ಶಾಹಿ ಮನೆತನ ಇಡಿಯ ದಕ್ಕನದ ಅತ್ಯಂತ ಮಹತ್ವದ ರಾಜಮನೆತನ. ಕಲೆ, ಶಿಲ್ಪಕಲೆ, ಸಾಹಿತ್ಯ, ಮತ ಹೀಗೆ ಹಲವಾರು ವಲಯಗಳಲ್ಲಿ ದೊಡ್ಡ ಕೊಡುಗೆ ಕೊಟ್ಟ ಈ ಮನೆತನದ ಮೊದಲ ದೊರೆ ಯೂಸುಪ್ ಆದಿಲ್ ಕಾನ್. ಈ ಪುಸ್ತಕ ಯೂಸುಪನ ಜೀವನ, ಬೆಳವಣಿಗೆ, ಸಾಮ್ರಾಜ್ಯ ಸ್ತಾಪನೆ, ಆಡಳಿತ, ಸಾದನೆ ಮೊದಲಾದವನ್ನು ಸವಿವರವಾಗಿ ಪರಿಚಯಿಸುತ್ತದೆ. ಕೃತಿಯ ಪರಿವಿಡಿಯಲ್ಲಿ ಆದಿಲ್ ಶಾಹಿ ರಾಜ್ಯ ಸ್ಥಾಪನೆಯ ಪೂರ್ವದ ರಾಜಕೀಯ ಹಿನ್ನೆಲೆ, ಯೂಸಲ್ ಆದಿಲ್ ಖಾನ ಎಂಬ ಎರಡು ವಿಭಾಗಗಳಿವೆ.
ಮಂಜುನಾಥ ಎಸ್. ಪಾಟೀಲ ಅವರು ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಚಿಕ್ಕಸಿಂದಗಿ ಗ್ರಾಮದವರು. ಧಾರವಾಡದ ಕರ್ನಾಟಕ ವಿ.ವಿ.ಯಿಂದ (ಇತಿಹಾಸ) ಎಂ.ಎ. ಪದವೀಧರರು. ಪ್ರಸ್ತುತ ಜಮಖಂಡಿಯ ಬಿ.ಎಚ್.ಎಸ್ ಕಲೆ ಮತ್ತು ಟಿ.ಜಿ.ಪಿ. ವಿಜ್ಞಾನ ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕರಾಗಿದ್ದಾರೆ. ‘ವಿಜಯಪುರ ಜಿಲ್ಲೆಯ ರಕ್ಷಣಾ ವಾಸ್ತುಶಿಲ್ಪ’ ವಿಷಯದಲ್ಲಿ ಪಿಎಚ್ .ಡಿ ಪದವೀಧರರು. ಕೃತಿಗಳು; ವಿಜಯಪುರ ಜಿಲ್ಲೆಯ ರಕ್ಷಣಾ ವಾಸ್ತುಶಿಲ್ಪ, ಸೋಮವಂಶ ಸಹಸ್ರಾರ್ಜುನ ಕ್ಷತ್ರಿಯ ದೇವಾಲಯಗಳು ಮತ್ತು ಆಚರಣೆಗಳು, ಜಮಖಂಡಿ ತಾಲೂಕಿನ ಇತಿಹಾಸ ಮತ್ತು ಪುರಾತತ್ವ, ಯೂಸುಫ್ ಆದಿಲ್ ಖಾನ್, ಶಾಸನಗಳಲ್ಲಿ ಸೊನ್ನಲಿಗೆ ಸಿದ್ಧರಾಮ. ...
READ MORE