ವ್ಯಂಗ್ಯಚಿತ್ರ-ಚರಿತ್ರೆ

Author : ಜೆ.ಬಾಲಕೃಷ್ಣ

Pages 214

₹ 200.00




Year of Publication: 2020
Published by: ಡಾ. ಜೆ. ಬಾಲಕೃಷ್ಣ
Address: ಅಸೀಮ ಅಕ್ಷರ, ನಂ- 36, 3ನೇ ಕ್ರಾಸ್, ಎ ಸೆಕ್ಟಾರ್, ಅಮೃತನಗರ, ಸಹಕಾರನಗರ ಅಂಚೆ, ಬೆಂಗಳೂರು- 560092

Synopsys

‘ವ್ಯಂಗ್ಯಚಿತ್ರ ಚರಿತ್ರೆ’ ಲೇಖಕ ಜೆ. ಬಾಲಕೃಷ್ಣ ಅವರ ಕೃತಿ. ಈ ಕೃತಿಗೆ ಹಿರಿಯ ವ್ಯಂಗ್ಯಚಿತ್ರಕಾರ ವಿ.ಜಿ. ನರೇಂದ್ರ ಬೆನ್ನುಡಿ ಬರೆದಿದ್ದಾರೆ. ವ್ಯಂಗ್ಯಚಿತ್ರ ಕಲೆ ಭಾಷೆಯ ಹಂಗಿಲ್ಲದೆ ಇಡೀ ಜಗತ್ತಿನಾದ್ಯಂತ ಪಸರಿಸಿದ ಒಂದು ಅದ್ಭುತ ಕಲೆ. ವ್ಯಂಗ್ಯಚಿತ್ರ ಕಲೆ ಜನಪ್ರಿಯ ಕಲೆಯಾಗಿ ಬೆಳೆದಿದ್ದರೂ ಕನ್ನಡದಲ್ಲಿ ಈ ಕಲೆಯು ಇತಿಹಾಸದ ಬಗ್ಗೆ, ಹಿರಿಮೆಯ ಬಗ್ಗೆ ಪುಸ್ತಕಗಳು ಪ್ರಕಟವಾಗಿದ್ದು ತುಂಬ ವಿರಳ, ಜೆ. ಬಾಲಕೃಷ್ಣ ಅವರ ಈ ಕೃತಿ ಆ ಕೊರತೆಯನ್ನು ಹೋಗಲಾಡಿಸಲು ನೆರವಾದೀತು ಎನ್ನುತ್ತಾರೆ ವಿ.ಜಿ. ನರೇಂದ್ರ. ಈ ಕಲೆಯ ಇತಿಹಾಸದ ಬಗ್ಗೆ ಬಾಲಕೃಷ್ಣ ಅವರು ಸಾಕಷ್ಟು ಮಾಹಿತಿ ಕಲೆಹಾಕಿದ್ದಲ್ಲದೇ ಅದಕ್ಕೆ ಪೂರಕವಾದ ಚಿತ್ರಗಳನ್ನು ಸಂಗ್ರಹಿಸಲು ವಹಿಸಿದ ಶ್ರಮವನ್ನು ಮೆಚ್ಚಬೇಕಾದದ್ದೇ, ಅದರಲ್ಲೂ ಕನ್ನಡಿಗರಿಗೆ ಈ ಕಲೆಯನ್ನು ಪರಿಚಯಿಸಲು ಅವರು ಆಯ್ದುಕೊಂಡ ರೀತಿ ಅತ್ಯಂತ ಪ್ರಶಂಸನಾರ್ಹವಾದ್ದು, ಸಂಶೋಧನಾತ್ಮಕ ಗುಣಗಳನ್ನು ಹೊಂದಿದ ಲೇಖನಗಳ ಈ ಸಂಗ್ರಹ ವ್ಯಂಗ್ಯಚಿತ್ರಕಲೆಯ ಆಸಕ್ತರಿಗೆ ಕೊಡುಗೆಯಾಗಿದೆ ಎನ್ನುತ್ತಾರೆ ನರೇಂದ್ರ. ಈ ಕೃತಿಯಲ್ಲಿ ವ್ಯಂಗ್ಯಚಿತ್ರ - ಒಂದು ಚರಿತ್ರೆ-ಭಾರತದಲ್ಲಿ ವ್ಯಂಗ್ಯಚಿತ್ರಗಳು, ಕರ್ನಾಟಕ ವ್ಯಂಗ್ಯಚಿತ್ರ ಕ್ಷೇತ್ರ ಪರಿಚಯ, ಸ್ಥಳೀಯ ರಾಜಕಾರಣದಲ್ಲಿ ವ್ಯಂಗ್ಯಚಿತ್ರಗಳು, ಗ್ರೀಕ್ ಕುಂಬಾರಿಕೆ ಕಲೆಯಲ್ಲಿ ಆದಿಮ ವ್ಯಂಗ್ಯಚಿತ್ರಗಳು, ಸ್ಪ್ಯಾನಿಶ್ ಫ್ಲೂ- ಸಾವಿನ ನೆರಳಲ್ಲಿ ವ್ಯಂಗ್ಯದ ಚಿಗುರು, ಬಾಪು ಮತ್ತು ವ್ಯಂಗ್ಯಚಿತ್ರ, ಟಿಪ್ಪು ಸುಲ್ತಾನ್ - ಮಳೆಯ ಆಗಮನ, ಡಾ. ಅಂಬೇಡ್ಕರ್ ಮತ್ತು ವ್ಯಂಗ್ಯಚಿತ್ರ, ಡಾರ್ವಿನ್ ಮತ್ತು ವ್ಯಂಗ್ಯಿಚಿತ್ರ, ಬಾಬರಿ ಮಸೀದಿಯ ದುರಂತ ಮತ್ತು ವ್ಯಂಗ್ಯಚಿತ್ರ, ಸರ್ವಾಧಿಕಾರಿ ಹಿಟ್ಲರ್ ಮತ್ತು ವ್ಯಂಗ್ಯಚಿತ್ರ, ಸರ್ವಾಧಿಕಾರಿ ಹಿಟ್ಲರ್ ಮತ್ತು ವ್ಯಂಗ್ಯಚಿತ್ರ, ಅಸ್ಪೃಶ್ಯತೆಯ ವ್ಯಂಗ್ಯ, ನೋಟು ಅಮಾನ್ಯೀಕರಣ- ವ್ಯಂಗ್ಯಚಿತ್ರಕಾರರ ಅಚ್ಚೇ ದಿನ್. ವ್ಯಂಗ್ಯಚಿತ್ರ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ. ಡಾನ್ ಕ್ವಿಕ್ಸೋಟ್- ವಾಸ್ತವತೆಯ ಮರುವ್ಯಾಖ್ಯಾನ. ಪ್ಲೇಬಾಯ್ ವ್ಯಂಗ್ಯಚಿತ್ರಗಳು, ಶಿಲೆಯಲ್ಲವೀ ಮೆಟ್ರೋ ಸ್ಟೇಶನ್ ಸೇರಿಗಂತೆ ಹಲವು ಮಹತ್ವದ ಲೇಖನಗಳು ಸಂಕಲನಗೊಂಡಿವೆ.

About the Author

ಜೆ.ಬಾಲಕೃಷ್ಣ

ಬೆಂಗಳೂರಿನ ಕೃಷಿವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿರುವ ಡಾ.ಜೆ.ಬಾಲಕೃಷ್ಣ ಅವರು ಕೃಷಿ ಸೂಕ್ಷ್ಮಜೀವಿ ಶಾಸ್ತ್ರದಲ್ಲಿ ಸ್ನಾತಕೊತ್ತರ ಹಾಗೂ ಕನ್ನಡ ಕೃಷಿ ವಿಜ್ಞಾನ ಸಾಹಿತ್ಯದ ಅಧ್ಯಾಯನಕ್ಕೆ ಹಂಪಿ ಕನ್ನಡ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪದವಿ ಪಡೆದಿದ್ದಾರೆ.ಕಾರ್‍ಟೋನಿಸ್ಟ್ ಆಗಿಯು ಗುರುತಿಸಿಕೊಂಡಿರುವ ಬಾಲಕೃಷ್ಣರವರ ಆಸಕ್ತಿಯ ಕ್ಷೇತ್ರಗಳು ಜೀವವೈವಿಧ್ಯದಷ್ಟೇ ವಿಸ್ತಾರವಾದವು. ವಿಜ್ಞಾನದಿಂದ ಮೊದಲ್ಗೊಂಡು ಸಾಹಿತ್ಯ,ಸೂಫಿ,ಝೆನ್,ತತ್ವದರ್ಶನದ ವರೆಗೂ ಅವರ ಜ್ಞಾನ ಹರಡಿಕೊಂಡಿದೆ. ...

READ MORE