ನಾಡೋಜ ಡಾ. ಪಿ.ಎಸ್. ಶಂಕರ ಅವರ ಕೃತಿ-ವೈರಸ್ ರೋಗಗಳು. ಸಾಂಕ್ರಾಮಿಕ ರೋಗಗಳು ಹೊರ ನೋಟಕ್ಕೆ ದುಷ್ಪರಿಣಾಮ ಬೀರಲಾರವು ಎಂದೇ ಕಾಣುವಂತಿದ್ದು, ಅವು ಮನುಷ್ಯನ ಜೀವವನ್ನೇ ನುಂಗಿ ಬಿಡುವಷ್ಟು ಅಪಾಯಕಾರಿಯಾಗಿರುತ್ತವೆ..ಆದ್ದರಿಂದ, ಸಾಂಕ್ರಾಮಿಕ ರೋಗಗಳನ್ನು ನಿರ್ಲಕ್ಷಿಸುವಂತೆಯೇ ಇಲ್ಲ..ಕಣ್ಣಿಗೆ ಕಾಣದ ವೈರಸ್ ನಿಂದ ಹರಡುವ ಈ ಸಾಂಕ್ರಾಮಿಕ ರೋಗಗಳ ತಡೆಯೂ ವೈಜ್ಞಾನಿಕ ಲೋಕಕ್ಕೊಂದು ಸವಾಲೇ ಸರಿ. ಇತಿಹಾಸದಲ್ಲಿ ಇಂತಹ ಸನ್ನಿವೇಶಗಳನ್ನು ನೋಡಬಹುದು. ಇತ್ತೀಚೆಗೆ, 2019ರಲ್ಲಿ ಭಾರತದಲ್ಲಿ ಉಂಟಾದ ಕರೋನಾ ಹಾವಳಿಯನ್ನೇ ತೆಗೆದುಕೊಳ್ಳಬಹುದು. ಇಂತಹ ಸಾಂಕ್ರಾಮಿಕ ರೋಗಗಳು, ಅವು ಉಂಟು ಮಾಡುವ ಪರಿಣಾಮಗಳು, ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳು ಇತ್ಯಾದಿ ಕುರಿತು ವೈಜ್ಞಾನಿಕ ರೀತಿಯಲ್ಲಿ ಮಾಹಿತಿ ನೀಡುವ ಕೃತಿ ಇದು.
ವೃತ್ತಿಯಲ್ಲಿ ವೈದ್ಯರಾಗಿ ವೈದ್ಯ ಸಾಹಿತಿಯಾಗಿ ಪ್ರಸಿದ್ಧರಾಗಿರುವ ಡಾ.ಪಿ.ಎಸ್.ಶಂಕರ್ ಅವರು 1936 ಜನವರಿ 1ರಂದು ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲ್ಲೂಕಿನ ಹಲಗೇರಿಯಲ್ಲಿ ಜನಿಸಿದರು. ಹುಟ್ಟೂರು ಹಾಗೂ ಚಿತ್ರದುರ್ಗದಲ್ಲಿ ಪ್ರಾಥಮಿಕ ಶಿಕ್ಷಣ ಪಡೆದ ಇವರು ಮೈಸೂರು ಮತ್ತು ದೆಹಲಿಯಲ್ಲಿ ವೈದ್ಯಕೀಯದಲ್ಲಿ ಪದವಿ ಮತ್ತು ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಕಲಬುರ್ಗಿಯ ಎಂ.ಆರ್. ಮೆಡಿಕಲ್ ಕಾಲೇಜಿನಲ್ಲಿ ಅಧ್ಯಾಪಕರಾಗಿ, ಪ್ರಾಂಶುಪಾಲರಾಗಿ ಕಾರ್ಯ ನಿರ್ವಹಿಸಿ ನಿವೃತ್ತರಾಗಿದ್ದಾರೆ. ವೃದ್ಧಾಪ್ಯದಲ್ಲಿನ ಕಾಯಿಲೆಗಳು, ಹೃದಯ ಜೋಪಾನ, ಕ್ಯಾನ್ಸರ್, ಹೃದಯ ರೋಗ ತಡೆಗಟ್ಟಿ, ಡಾ. ವಿಕ್ರಂ ಸಾರಾಭಾಯ್, ಮುಂತಾದ ಕೃತಿಗಳನ್ನು ರಚಿಸಿದ್ದಾರೆ. ಸೋವಿಯತ್ ಲ್ಯಾಂಡ್ ನೆಹರು ಪ್ರಶಸ್ತಿ, ರಾಕ್ ಫೆಲ್ಲರ್ ಸ್ಕಾಲರ್ ಇನ್ ರೆಸಿಡೆನ್ಸ ಗೌರವ, ಭಾರತ ಸರ್ಕಾರದ ವಿಜ್ಞಾನ ತಂತ್ರಜ್ಞಾನ ಇಲಾಖೆಯ ...
READ MORE