ಮುಡಿಪು ಸುಬ್ರಹ್ಮಣ್ಯ ಭಟ್ ಅವರು ರಚಿಇಸರುವ ಕಿರು ಹೊತ್ತಿಗೆ ಉಪನಯನ. ಈ ಹೊತ್ತಿಗೆಯು ಉಪನಯನ ಸಂಸ್ಕಾರದ ಮಹತ್ವವನ್ನು ತಿಳಿಸುತ್ತದೆ. ಕೃತಿಯಲ್ಲಿ ಉಪನಯನ ಎಂದರೇನು?, ಸಿದ್ಧತೆ, ಬ್ರಹ್ಮಚಾರಿ ಭೋಜನ- ಮಾತೃ ಭೋಜನ, ಉಪನಯನ ಹೋಮ, ವಸ್ತ್ರಧಾರಣೆ, ಅಜಿನ ಧಾರಣೆ, ದಂಡ ಧಾರಣೆ, ಬ್ರಹ್ಮಧಾರಿಯ ನಿಯಮಗಳು ಸೇರಿದ ಅನೇಕ ವಿಚಾರಗಳ ಬಗ್ಗೆ ಮಾಹಿತಿಯಿದೆ.
ಪುರೋಹಿತ ಮನೆತನದವರಾದ ಮುಡಿಪು ಸುಬ್ರಹ್ಮಣ್ಯ ಭಟ್ ಅವರು, ಶೃಂಗೇರಿ ಜಗದ್ಗುರು ಮಠೀಯ ಸದ್ವಿದ್ವಾಸಂಜೀವಿನೀ ಪಾಠಶಾಲೆಯಲ್ಲಿ ಸಾಹಿತ್ಯವನ್ನೂ, ಮೈಸೂರಿನ ಮಹಾರಾಜ ಸಂಸ್ಕೃತ ಕಾಲೇಜಿನಲ್ಲಿ ಜ್ಯೋತಿಷ್ಯ ಶಾಸ್ತ್ರವನ್ನು ಅಧ್ಯಯನ ಮಾಡಿದವರು. ಗುಬ್ಬಿಯ ಚಿದಂಬರಾಶ್ರಮ ಪ್ರೌಢಶಾಲೆ, ಬೀರೂರಿನ ಸರ್ಕಾರಿ ಪ್ರೌಢಶಾಲೆ ಹಾಗೂ ಕಡೂರಿನ ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ಸಂಸ್ಕೃತವನ್ನು ಬೋಧಿಸಿ, ನಿವೃತ್ತಿಯ ಬಳಿಕ ಬರವಣಿಯಲ್ಲಿ ತೊಡಗಿಸಿಕೊಂಡವರು. ಕೃತಿ: ಸುಲಗ್ನಾಃ ಸಾವಧಾನಾಃ , ಉಪನಯನ ...
READ MORE