ಲೇಖಕಿ ಭಾರತಿ ಭಟ್ ಅವರ ಕೈಪಿಡಿ ಕೃತಿ ʻತಾಯಂದಿರಿಗೆ ಕಿವಿಮಾತುʼ. ಶಿಶುವಿನಿಂದ ಕಿಶೋರ ವಯಸ್ಸಿನವರೆಗೆ ಮಕ್ಕಳ ಶಾರೀರಿಕ, ಮಾನಸಿಕ , ಬೌದ್ಧಿಕ ಬೆಳವಣಿಗೆಯಲ್ಲಿ ತಾಯಿಯ ಪಾತ್ರ ಎಲ್ಲಕ್ಕಿಂತಲೂ ಹಿರಿದು. ಅನುಭವಸ್ಥ ಮಹಿಳೆಯರು ಸರಿಯಾಗಿ ತನ್ನ ಕಾರ್ಯವನ್ನು ನಿರ್ವಹಿಸಿದರೆ, ಎಳೆವಯಸ್ಸಿನ ಅಥವಾ ಆಧುನಿಕ ತಾಯಿಗೆ ಇದೆಲ್ಲವೂ ಹೊಸತು. ಹಾಗಾಗಿ ವಿಪರೀತ ಆತಂಕ, ಭಯದಿಂದಾಗಿ ಮಾನಸಿಕವಾಗಿ ಕುಗ್ಗಿಹೋಗುತ್ತಾರೆ. ಹಾಗಾಗಿ ಅಂತಹ ತಾಯಂದಿರಿಗೆ ಮಗುವನ್ನು ಲಾಲನೆ-ಪಾಲನೆ ಮಾಡುವ ಬಗ್ಗೆ ಸಮಗ್ರ ಮಾಹಿತಿ, ತಿಳುವಳಿಕೆಯನ್ನು ನೀಡುವ ಪ್ರಯತ್ನ ಈ ಪುಸ್ತಕದಲ್ಲಿ ನಡೆದಿದೆ. ಈ ಕೃತಿಯಲ್ಲಿ ಲೇಖಕರು, ಎಳೆಮಕ್ಕಳ ಆರೈಕೆ, ಆರಂಭದಿಂದಲೇ ಗಮನಿಸಬೇಕಾದ ಕೆಲವು ಮುಖ್ಯ ಅಂಶಗಳು, ಕಿಶೋರವಯಸ್ಸಿನ ವಿವಿಧ ಹಂತಗಳಲ್ಲಿ ಕಾಡುವ ಸಮಸ್ಯೆಗಳು, ಅವುಗಳ ಪರಿಹಾರ, ಆ ಸಮಯದಲ್ಲಿ ತೆಗೆದು ಕೊಳ್ಳಬೇಕಾದ ಎಚ್ಚರಿಕೆ ಹೀಗೆ ತಾಯಂದಿರು ಅರಿತಿರಬೇಕಾದ, ಮಾಡಬೇಕಾದ ಹಲವಾರು ವಿಚಾರಗಳನ್ನು ವಿವರಿಸಿದ್ದಾರೆ.
ಭಾರತಿ ಭಟ್ ಅವರು ಮೂಲತಃ ದಕ್ಷಿಣ ಕನ್ನಡದ ಪುತ್ತೂರಿನ ಕೊಂಬೆಟ್ಟಿನವರು. ಪುತ್ತೂರಿನಲ್ಲೇ ಶಾಲಾ ವಿದ್ಯಾಭ್ಯಾಸವನ್ನು ಪೂರೈಸಿ ಬಳಿಕ 1963ರಲ್ಲಿ ಡಿ.ಎನ್. ಶಂಕರ ಭಟ್ಟರನ್ನು ವಿವಾಹವಾದರು. ಮುಂದೆ ಪುಣೆಯಿಂದ ಜೀವನ ಶುರುವಾಗಿ ಮೈಸೂರಿನವರೆಗೆ ಹಲವಾರು ಊರುಗಳಲ್ಲಿ ನಡೆಯಿತು. ಬರವಣಿಗೆ ಮೇಲೆ ಅಪಾರವಾದ ಆಸಕ್ತಿಯನ್ನು ಬೆಳೆಸಿಕೊಂಡಿದ್ದ ಭಾರತಿ ಭಟ್ ಅವರು ಆ ಅನುಭವಗಳನ್ನು ಒಟ್ಟುಸೇರಿಸಿ ʻಬದುಕು ಬರಹʼ ಪುಸ್ತಕದ ಮೂಲಕ ಹೊರತಂದಿದ್ದಾರೆ. ...
READ MORE