ಡಿ. ಮಂಗಳಾ ಪ್ರಿಯದರ್ಶಿನಿ ಅವರ ಸ್ತ್ರೀವಾದದ ಕುರಿತು ಬರೆದಿರುವ ಲೇಖನಗಳ ಸಂಗ್ರಹ ಸ್ತ್ರೀವಾದ ಮತ್ತು ಮಹಿಳಾ ಅಧ್ಯಯನ – ಒಂದು ಪ್ರವೇಶಿಕೆ. ಕೃತಿಯ ಪರಿವಿಡಿಯಲ್ಲಿ ಅಧ್ಯಾಯ 1 – ಮಹಿಳಾ ಅಧ್ಯಯನದ ಉದ್ದೇಶ, ವ್ಯಾಪ್ತಿ ಮತ್ತು ಅಗತ್ಯ, ಅಧ್ಯಾಯ 2 – ಸ್ತ್ರೀವಾದದ ಅರ್ಥ ಮತ್ತು ವ್ಯಾಪ್ತಿ, ಸ್ತ್ರೀವಾದದ ಬೆಳವಣಿಗೆ, ಅಧ್ಯಾಯ 3 – ಮಹಿಳಾ ಅಧ್ಯಯನದ ಕೆಲವು ಪರಿಕಲ್ಪನೆಗಳು, ಅಧ್ಯಾಯ 4 – ಮಹಿಳಾ ಚಳುವಳಿಯ ಆರಂಭ, ಸಮಾನ ಹಕ್ಕುಗಳಿಗೆ ಹೋರಾಟ, ಅಧ್ಯಾಯ 5 – ಭಾರತದಲ್ಲಿ ಮಹಿಳಾ ಹೋರಾಟಗಳು, ಸಮಾಜ ಸುಧಾರಕರ ಚಳುವಳಿಗಳು,ಅಧ್ಯಾಯ 6 – ಪ್ರಧಾನ ವ್ಯಾಪ್ತಿಯ ಮಹಿಳಾ ಸಂಘಟನೆಗಳು, ಅಧ್ಯಾಯ 7 – ಸ್ವಾತಂತ್ರ್ಯೊತ್ತರ ಕಾಲದಲ್ಲಿ ಮಹಿಳಾ ಚಳುವಳಿಗಳು,ಅಧ್ಯಾಯ 8 – ಮಹಿಳಾ ಚಳುವಳಿ ಹಾಗೂ ರಾಜಕೀಯ ಚಳುವಳಿಗಳು, ಅಧ್ಯಾಯ 9 – ಮಹಿಳಾ ಚಳುವಳಿಯ ಸಂಘಟನೆ, ಸಂಪರ್ಕ ವ್ಯವಸ್ಥೆ ಎಂಬ ಶೀರ್ಷಿಕೆಯ ಅಧ್ಯಾಯಗಳಿವೆ.
ಬೆಂಗಳೂರಿನವರೇ ಆದ ಡಿ.ಮಂಗಳಾ ಪ್ರಿಯದರ್ಶಿನಿ ಅವರು ಬೆಂಗಳೂರು ವಿಶ್ವವಿದ್ಯಾಲಯದಿಂದ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಬೆಂಗಳೂರಿನ ಹಲವು ಪದವಿ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿರುವ ಇವರು ವಿ.ವಿ.ಎಸ್. ಮಹಿಳಾ ಪದವಿ ಕಾಲೇಜಿನ ಪ್ರಾಂಶುಪಾಲರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇವರ ಪ್ರಮುಖ ಕೃತಿಗಳೆಂದರೆ ನವೋದಯ ಕಾವ್ಯದಲ್ಲಿ ಅನುಭವದ ಅಂಶಗಳು- ಒಂದು ಅಧ್ಯಯನ, ಬೇಂದ್ರೆ, ವೀರಶೈವ ಶಟ್ಪದಿ ಸಾಹಿತ್ಯ, ಆಧುನಿಕ ಕನ್ನಡ ಕಾವ್ಯದ ಸ್ವರೂಪ, ಮಹಿಳಾ ಸಾಹಿತ್ಯ ಚರಿತ್ರೆ, ಸ್ತ್ರೀವಾದ ಮಹಿಳಾ ಅಧ್ಯಯನ- ಒಂದು ಪ್ರವೇಶಿಕೆ, ಕಡಲಾಚೆಯ ನೆನಪುಗಳು ಮುಂತಾದವು. ಇವರಿಗೆ ರಾಷ್ಟ್ರಕವಿ ಕುವೆಂಪು ಸ್ಮಾರಕ ಪ್ರಶಸ್ತಿ, ಕರ್ನಾಟಕ ಲೇಖಕಿಯರ ಸಂಘದ ...
READ MORE